ಬಂದಡ್ಕ ಗ್ರಾಮ ಸಮಿತಿ ವತಿಯಿಂದ ಧನಸಹಾಯ

ಸುಳ್ಯದ ಗಡಿಪ್ರದೇಶವಾದ ಬಂದಡ್ಕ ಗ್ರಾಮ ಗೌಡ ಸಮಿತಿ ವತಿಯಿಂದ ಕಳೆದ ಜು.18ರಂದು ಸುಳ್ಯದಲ್ಲಿ ಕಾರು ಅಪಘಾತದಲ್ಲಿ ತೀವ್ರವಾಗಿ ಜಖಂಗೊಂಡಿದ್ದು, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು, ಇದೀಗ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂದಡ್ಕದ ಇಳಂದಿಲ ದೊಡ್ಡಮನೆ ದಿ ಮೋನಪ್ಪ ಗೌಡರ ಮಗ 23 ವರ್ಷ ಪ್ರಾಯದ ಸುರೇಶ್ ಅವರಿಗೆ ಸಂಗ್ರಹವಾದ ರೂ.50,950 ರೂಪಾಯಿ ನೀಡಲಾಯಿತು. ಗಾಯಾಳು ಸುರೇಶ್ ಅವರ ತಾಯಿ ಪ್ರೇಮಾವತಿಯವರಿಗೆ ಧನಸಹಾಯ ಹಸ್ತಾಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತೃ ಸಂಸ್ಥೆಯ ನಿರ್ದೇಶಕರಾದ ಪುರುಷೋತ್ತಮ ಬೊಡ್ಡನಕೊಚ್ಚಿ,  ಗ್ರಾಮ ಗೌಡ ಸಮಿತಿ ಅಧ್ಯಕ್ಷ ವಿಶ್ವ ಕುಮಾರ ಕಟ್ಟಕ್ಕೋಡಿ, ಉಪಾಧ್ಯಕ್ಷ ಪರಮೇಶ್ವರ ಪಿ.ಎಂ., ಕಾರ್ಯದರ್ಶಿ ಜ್ಞಾನೇಶ್ ಕೆ., ಮಹಿಳಾ ಘಟಕದ ಅಧ್ಯಕ್ಷೆ ಧರ್ಮಾವತಿ ಕೆ., ಹಾಗೂ ಮೋನಪ್ಪ ಗೌಡ, ಅಚ್ಚುತ ಗೌಡ, ರವಿಪ್ರಸಾದ್ ಇಳಂದಿಲ ದೊಡ್ಡಮನೆ ಉಪಸ್ಥಿತರಿದ್ದರು.

Copy Protected by Chetan's WP-Copyprotect.