HomePage_Banner
HomePage_Banner
HomePage_Banner
HomePage_Banner
Breaking News

ಬೀದಿಗುಡ್ಡೆ : ಉಚಿತ ದಂತ ಚಿಕಿತ್ಸಾ ಶಿಬಿರ

ಬೀದಿಗುಡ್ಡೆ ಸಂಪ್ಯಾಡಿ ಸ.ಕಿ.ಪ್ರಾ. ಶಾಲೆಯಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯದ ದಂತ ವೈದ್ಯಕೀಯ ತಂಡದವರಿಂದ ಉಚಿತ ಚಿಕಿತ್ಸೆ ಮತ್ತು ತಪಾಸಣೆ ಶಾಲಾ ಎಸ್.ಡಿ.ಎಮ್.ಸಿ ವತಿಯಿಂದ ನಡೆಯಿತು. ಲಿಂಗಪ್ಪ ಮಾಸ್ತರ್ ಕಟ್ಟ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದರು. ಉದ್ಘಾಟನೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಾಲಚಂದ್ರ ಕಟ್ಟ, ರಾಧಾಕೃಷ್ಣ ರೈ ಅರ್ಗುಡಿ, ಬೇಬಿ ಭಾಸ್ಕರ ಗೌಡ ಕಟ್ಟ, ಶಾಲಾ ಶಿಕ್ಷಕಿ ಕುಸುಮಾವತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ತುಳಸಿ ಪಡಿಕ್ಕಿಲಾಯ, ದಂತ ಮಹಾವಿದ್ಯಾಲಯದ ಪ್ರೊ. ಮನೋಹರ್ ಭಟ್, ಎಸ್.ಡಿ.ಎಮ್.ಸಿಯ ಉಪಾಧ್ಯಕ್ಷೆ ಸಹನಾ ಕಾಂಜಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಸದಸ್ಯರು, ಸದಾಸಿದ್ದಿ ಮಿತ್ರ ಬಳಗದ ಸದಸ್ಯರು, ಶ್ರೀ ಸಿದ್ದಿವಿನಾಯಕ ಸ್ಪೋಟ್ಸ್ ಕ್ಲಬ್‌ನ ಸದಸ್ಯರು, ವಿದ್ಯಾಭಿಮಾನಿಗಳು, ಶಾಲಾ ಮಕ್ಕಳ ಪೋಷಕರು, ಊರವರು ಉಪಸ್ಥಿತರಿದ್ದರು. (ವರದಿ:ಮಧು ಪಂಜ)bidigude uchitha dantha shibira copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.