HomePage_Banner
HomePage_Banner
HomePage_Banner
HomePage_Banner
Breaking News

ಸ್ನೇಹ ಶಾಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಕಲರವ

ಸುಳ್ಯದ ಸ್ನೇಹ ಶಾಲೆಯಲ್ಲಿ ಮತ್ತೆ ವಿದೇಶೀ ವಿದ್ಯಾರ್ಥಿಗಳ ಕಲರವ ಅನುರಣಿಸಿದೆ. ಈಜಿಷ್ಟ್‌ನ ಮಹಮ್ಮದ್ ಮತ್ತು ನೌರಾ ಹುಸೇನ್, ಮೊರೊಕ್ಕೊ ದೇಶದ ಚೈಮಾ ಶೇಖ್ ಹಾಗೂ ಮೆಕ್ಸಿಕೋ ದೇಶದ ಲೊರೇನಿಯಾ ಇವರು ಒಂದು ವಾರ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ಶಿಕ್ಷಣ ಹಾಗೂ ಸಂಸ್ಕೃತಿ ವಿನಿಮಯ ಕಾರ್ಯಕ್ರಮ ನಡೆಸಿದರು.
ತಮ್ಮ ದೇಶಗಳಲ್ಲೂ ಸರಕಾರಿ ಶಾಲೆಗಳು ಚೆನ್ನಾಗಿಲ್ಲ ಎನ್ನುವ ಇವರಿಗೆ ಸ್ನೇಹ ಶಾಲೆಯ ಶಿಕ್ಷಣ ಪ್ರಕ್ರಿಯೆ ತುಂಬಾ ಅಭಿಮಾನ ಮೂಡಿಸಿದೆ. “ನಾವು ಎಳವೆಯಿಂದಲೇ ಇಂಗ್ಲಿಷ್ ಮೀಡಿಯಂನಲ್ಲೇ ಕಲಿತಿದ್ದರೂ ಅಮ್ಮನನ್ನು ನಮ್ಮ ಅರೆಬಿಕ್ ಭಾಷಾ ಪದದಿಂದಲೇ ಕರೆಯುತ್ತೇವೆ. ಮಮ್ಮಿ ಎನ್ನುವುದಿಲ್ಲ. ಏಕೆಂದರೆ ಮಮ್ಮಿ ಪದಕ್ಕೆ ಬೇರೆಯೇ ಅರ್ಥವಿದೆ” ಎಂದರು.
ಉತ್ತಮ ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ಈ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ಇದೆ. ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆಯವರು ಶಿಕ್ಷಣ ಮತ್ತು ಪರಿಸರದ ಪರಿಚಯ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆಯವರು ಅವರ ಒಂದು ವಾರದ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಿದರು. ವಿದೇಶೀ ವಿದ್ಯಾರ್ಥಿಗಳು ತಮ್ಮ ದೇಶದ ಸಂಸ್ಕೃತಿಯ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸ್ಲೈಡ್ ಶೋ ಮೂಲಕ ಪರಿಚಯ ನೀಡಿದರು.

sneha school videshi vidyarthigala kalarava

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.