HomePage_Banner
HomePage_Banner
Breaking News

ಸುಬ್ರಹ್ಮಣ್ಯ; ಕೆಎಸ್‌ಎಸ್ ಕಾಲೇಜು ಪ್ರಾಚಾರ್ಯ ಜಿ ದಿನೇಶ್ ಕಾಮತ್ ನಾಳೆ ನಿವೃತ್ತಿ

ಸುಬ್ರಹ್ಮಣ್ಯ;ಕುಕ್ಕೆ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕಳೆದ 25 ವರ್ಷಗಳಿಂದ ಸೇವೆಯಲ್ಲಿರುವ ಜಿ ದಿನೇಶ್ ಕಾಮತ್ ಅಗಸ್ಟ್. ನಾಳೆ (ಆ31ರಂದು)ಸೇವೆಯಿಂದ ನಿವೃತ್ತಿ ಆಗಲಿದ್ದಾರೆ.
ಕೆಎಸ್ ಎಸ್ ಕಾಲೇಜಿಗೆ ಅರ್ಥಶಾಸ್ತ್ರ ಉಪನ್ಯಾಸಕರಾಗಿ 1983 ರಲ್ಲಿ ಸೇರಿದ ಅವರು ಒಟ್ಟು 31 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿವಿ ಯಿಂದ 1928 ರಲ್ಲಿ ಎಂ ಎ ಪದವಿ ಪಡೆದು ಸ್ವಲ್ಪ ಕಾಲ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೆಎಸ್‌ಎಸ್ ಕಾಲೇಜಿನಲ್ಲಿ ಆಗ ಪ್ರಾಂಸುಪಾಲರಾಗಿದ್ದ ಪ್ರೋ.ಜಿ ಕೆ ಶೆಣೈ ಯವರು 1990ರಲ್ಲಿ ನಿರ್ಗಮಿಸಿದಾಗ ಜಿ ದಿನೇಶ್ ಕಾಮತ್ ಭಡ್ತಿ ಹೊಂದಿ ಪ್ರಾಂಶುಪಾಲರಾದರು.
ದೀರ್ಘ ಕಾಲದ ಪ್ರಾಂಶುಪಾಲ ಸೇವೆಯಲ್ಲಿ ಇವರು ವಿವಿಯ ಸೆನೆಟ್, ಅಕಾಡೆಮಿ ಕೌನ್ಸಿಲ್, ಸಿಂಡಿಕೇಟ್ ಸಂಯೋಜನಾ ಸಮಿತಿ. ಕ್ರೀಡಾ ಸಲಹಾ ಸಮಿತಿ ಸದಸ್ಯರಾಗಿ ದುಡಿದಿದ್ದಾರೆ. 1994 ರಿಂದ ೧೯೯೬ ರ ತನಕ ಮಂಗಳೂರು ವಿವಿಯ ಅರ್ಥಶಾಸ್ತ್ರ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷರಾಗಿ ಕಾರ್ರ್‍ಅನಿರ್ವಹಿಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ ಮಂಡಳಿ ದೆಹಲಿಯಲ್ಲಿ ತರಬೇತಿ ಪಡೆದಿದ್ದಾರೆ. ಪಾರದರ್ಶಕ ಮತ್ತು ಬದ್ಧತೆಯ ನಿಲುವುಗಳಿಗೆ ಬದ್ಧರಾದ ಇವರು ಕಾಲೇಜಿನಲ್ಲಿ ಬಿಬಿಎಂ ಕೋರ್ಸ್ ತೆರೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.