HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ: ಕೆ.ಎಸ್.ಎಸ್.ಕಾಲೇಜಿನಲ್ಲಿ ರಕ್ಷಾಬಂಧನ

ಭಾರತೀಯ ಸನಾತನ ಸಂಸ್ಕೃತಿಯು ವಿಶ್ವಶ್ರೇಷ್ಠ ಸಂಸ್ಕೃತಿಯಾಗಿದೆ, ಧಾರ್ಮಿಕತೆಯಲ್ಲಿ ಏಕತೆಯನ್ನು ಸಾರಿದ ವಿಶ್ವದ ಏಕೈಕ ರಾಷ್ಟ್ರವೊಂದಿದ್ದರೆ ಅದು ಭಾರತ ಮಾತ್ರ. ಮನಸ್ಸುಗಳನ್ನು ಪರಸ್ಪರ ಸೋದರತ್ವದ ದಾರದಲ್ಲಿ ಬೆಸೆಯುವ ರಕ್ಷಾಬಂಧನ ಆಚರಣೆಯು ವಿಶ್ವಕ್ಕೆ ಮಾದರಿಯಾಗಲಿ ಆ ಮೂಲಕ ಭಾರತ ವಿಶ್ವಗುರುವಾಗಲಿ ಎಂದು ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲರಾದ ಮಹೇಶ್ ನೆಟ್ಲ ಹೇಳಿದರು.
ಸುಬ್ರಹ್ಮಣ್ಯದ ಕೆ.ಎಸ್.ಎಸ್.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನೂತನ ಪ್ರಾಂಶುಪಾಲರಾದ ಮನಮೋಹನ ಎಂ. ಮಾತನಾಡಿ, ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ರಚನಾತ್ಮಕವಾಗಿ ಚಿಂತಿಸುವ ಅಗತ್ಯತೆಯಿದೆ, ಆದ್ದರಿಂದ ರಕ್ಷಾಬಂಧನದಂತಹ ಸಂಸ್ಕಾರಯುತ ಆಚರಣೆಗಳು ನಮ್ಮ ನಡುವಿನ ಮಾನಸಿಕತೆಯ ಬಿರುಕನ್ನು ಜೋಡಿಸುವ ಕಾರ್ಯವನ್ನು ಮಾಡುತ್ತದೆ ಎಂದರು.
ರಿಕೇಶ್ ನಾಯಕ್ ಅಂತಿಮ ಬಿ.ಎ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕ ಪದ್ಮಕುಮಾರ್ ರಕ್ಷಾಬಂಧನದ ಸಂದೇಶವನ್ನು ತಿಳಿಸಿದರು. ಕು.ಅಶ್ವಿತ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಖಿಲ್ ವಂದಿಸಿದರು. ಸ್ವತಃ ವಿದ್ಯಾರ್ಥಿಗಳೇ ತಯಾರಿಸಿದ ರಕ್ಷೆಯನ್ನು ಪರಸ್ಪರ ಕಟ್ಟಿ ರಕ್ಷಾಬಂಧನದ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದರು.

subramanya-kss collegenalli rakshabandana

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.