HomePage_Banner
HomePage_Banner
Breaking News

ಮನೆ ಚಿಂಟೇಲಿ

ಉಗ್ಗಪ್ಪ.. ನೀವು ಮೊದ್ವೆಗೆ ಹೋಗಿದರಿಗಡ …ಗಮ್ಮತ್ತಾ..?
ಒಕ್ಕೂ…ಒಕ್ಕೂ…ಒಕ್ಕೂ….ಕ್ಕೂ…ಕ್ಕೂ …ಅಮ್ಮಾ… ಅಣ್ಣಿ ಅಜ್ಜ ಮನೆ ಚಿಂಟೇಲಿ ಕುದ್ದ್ ಕೆಮ್ಮಿಕ್ಕೆ ಶುರು ಮಾಡ್ರೆ ಉಸ್‌ರ್ ತೆಕ್ಕಂಕು ಅದುಲೆ…ಎರಡ್ ಸರ್ತಿ ಕೆಮ್ಮುನೊಟ್ಟಿಗೆ ಹಿಂದೆಂದ ಶಬ್ದ ಕೇಳ್ದ್ ಅಜ್ಜಂಗೂ ಗೊತ್ತಾತ್ಲೆ…ಎನ್ ಉಗ್ಗಪ್ಪ.. ಡಮ್ಮು ಕಟ್ಟಿ ಕೆಮ್ಮುತೊಳೊರಿ, ಅಡಿಕೆ ಹೊಳ್ ತಲೆಗೆ ಹತ್ತಿತ್ತಾ ಹೆಂಗೆ? ಇ…ಇಲ್ಲೇ…ಒಕ್ಕೂ.. ಮಕ್ಕಳೇ ಅಡ್ಕೆ ಸೊಂರ್ಂಕಾನೂ ಹತ್ತಿತ್ಲೆ ಎಂತ ಮಣಂಗಟ್ಟಿನೂ ಇಲ್ಲೆ. ಹಾಳಾದ ಮೊದ್ವೆಗೆ ಹೋಗಿ ಐಸ್‌ಕ್ಯಾಂಡಿ ತಿಂದದ್‌ದೊಂದು ಗೊತ್ತುಟ್ಟು. ಅದರ್ರ್ಂದ ಮೇಲೆ ಹೀಂಗೆ.. ಪುರುಸೋತ್ತೇ ಇಲ್ಲೆ. ಮೊದುವೆಲಿ ಐಸ್ ಕ್ಯಾಂಡಿ ಕೊಡ್ದುಲೆ ಉಗ್ಗಪ್ಪ ಐಸ್‌ಕ್ರೀಂ ಕೊಡ್ದು.. ದೊಡ್ಡ ಪಿಳ್ಳಿ ಹೇಳಿ ನೆಗಾಡ್ತ್. ಎಂತ ಕಿಚ್ಚಿಗೆ ಹೆಟ್ಟಿದೊ ಹಾಲ್‌ನಾಂಗೆ ಗಟ್ಟಿಲಿ ಇತ್ತ್.
ಹೇಳ್ದಾಂಗೆ ನೀವು ಹಾಲ್‌ಗೆ ಮದುವೆಗೆ ಹೋಗಿದರಿಗಡ ಉಗ್ಗಪ್ಪ..ಗಮ್ಮತ್ತಾ..? ಸಣ್ಣ ಪಿಳ್ಳಿ ಕೇಳ್ತ್.
ಗಮ್ಮತ್ತಾ…? ಒಮ್ಮೆ ಹೇಳಿರೆ ಸಾಕಾ? ನಿನ್ನ ಅಪ್ಪ ಇಲ್ಲದಕ್ಕೆ ನಾ ಒತ್ತಾಯಕೆ ಹೋದ್. ಇನ್ ನನ್ನ ಜನ್ಮಕ್ಕೆ ಸಾಕ್. ಮದುವೆನೂ ಬೇಡ, ಮುಂಜಿನೂ ಬೇಡ. ಮುಂಜಿತೆಂಳಿರೆ ಅದೆಂತ ಉಗ್ಗಪ್ಪ? ಸಣ್ಣ ಪಿಳ್ಳಿ ವಾಪಸ್ ಕೇಳ್ತ್. ಅದೆಲ್ಲಾ ನಮ್ಮದಲ್ಲ. ಮಾಪ್ಳೆಗಳ್ದ್.. ಅದ್ ನಿಂಗೆ ಬೇಡ. ಮಾತಿಗೆ ಹೇಳ್ದ್ ಅಷ್ಟೇ.. ಬೇಡ ಉಗ್ಗಪ್ಪ ಬುಡಿ ಮೊದುವೆನ ಬಗ್ಗೆ ಹೇಳಿ. ಮದುವೆನ ಬಗ್ಗೆ ಎಂಥಂತ ಹೇಳ್ದು ಮಾರಾಯ. ಅದ್ ಮದುವೆನಾ ಅಲ್ಲಾ ನಾಟಕನೋ ನಂಗೊಂದ್ ಗೊತ್ತಾದ್ಲೆ. ನಮ್ಮ ಕಾಲದೊವೆಲ್ಲ ಮನೇಲಿ ಕುದ್ರುದೇ ಒಳ್ಳದ್. ನಾವ್ಗೆ ಆ ಕಾಲದೊವ್ಕೆ ನಮ್ಮ ಕಣ್ಣ್ಂದ ಇದರೆಲ್ಲ ನೋಡಿ ಸಹಿಸಿಕಾಂಕೆ ಅದುಲೆ, ಬಾಯಿಲಿ ಏನೆಲ್ಲ ಹೇಳಿ ಹೋದೆ. ಇನ್ನ್ ನಿಮ್ಮ ಕಾಲಲಿ ಏನ್ ಆಕೆ ಉಟ್ಟಾ ದೇವ್ರಿಗೆ.. ಗೊತ್ತು! ಎಂತ ಉಗ್ಗಪ್ಪ ಹೇಳಿ ಬೇಗ… ನಿಮ್ಮೊಟ್ಟಿಗೆ ಎಂತಾರ್ ಕೇಳಿರೆ ಒಂದು ಗಂಟೆ ರಾಮಾಯಣ, ದೊಡ್ಡ ಪಿಳ್ಳಿ ಅಸಾಮಾಧಾ ಹೌದು ಮಾರಾಯ ನೀವುಗೆ ಅರ್ಜೇಂಟ್. ಒಂದು ಗಾದೆ ಉಟ್ಟು ಹಂಗೆ.. ಇಂದ್ ಮೊದುವೆ ಆಗಿ ನಾಳೆ ಕೂಸು ಹುಟ್ಟೋಕು ತೇಳ್ದಾಂಗೆ ನಂಗೆ ಹಾಂಗೆಲ್ಲ ಅರ್ಜೆಂಟ್ ಮಾಡಿಕೆ ಗೊತ್ಲೆ. ಆದರೆ ಹೇಳ್ನೆ ಕೇಳಿ ಮಕ್ಕಳೇ.
ನಾ ಇಲ್ಲಿಂದ ಮರ್ಕಂಜ ಬಸ್ಸಿಗೆ ಹೋದೇನಾ… ಮೆಲ್ಲಂಗೆ ಬಸ್ ಸ್ಟ್ಯಾಂಡ್‌ಲಿ ಇಳ್ದಾಕನ ನನ್ನೋಟ್ಟಿಗೆ ಮೊದುವೆಗೆ ಹೋಗಂವ ಅತ್ತ ಕಾಯರದಂವ ಒಬ್ಬ ಸಿಕ್ಕಿತ್ತ್. ಪೋಯಿ ಉಗ್ಗಪ್ಪ ನಾನೂ ಮದುವೆಗೆಂತ ಹೇಳಿ ಒಟ್ಟಿಗೆ ಹಾಲ್‌ಗೆ ಬಂದೋ. ಅಣ್ಣಾ… ಹಾಲ್‌ಗೆ ಹೋದರೆ ಜನ ಯಾರೋ ದೊಡ್ಡ ನೆರ್‍ದಾಂಗೆ ಕಾಂಬೊದ್ಲೆ. ಛೇ!! ನಾವು ಬಾರೀ ಬೇಗ ಬಂದೊಂತ ಅವನೊಟ್ಟಿಗೆ ಹೇಳಿಕಾಂಡೆ. ಯಾಕೆಂತೇಳ್ರೇ ನಾವ್ಗೆ ಲೆಕ್ಕ ಮಾಡ್ದಾಂಗೆ ಒಂದೆರ್‍ಡು ಬಸ್ಸು ಒಳಾದಲಾ?
ಉಗ್ಗಪ್ಪ ಮತ್ತೆ ನಿಮ್ಮ ರೈಲ್ ಬೇರೆ ಎಲ್ಲಿಗೋ ಹೋಗ್ತಾ ಉಟ್ಟು ದೊಡ್ಡ ಪಿಳ್ಳಿ ಹೇಳ್ತ್. ಅಯ್ಯೋ ಮಾರಾಯ ಹೇಳಿನೆ.. ಹಾಲ್‌ಗೆ ಎತ್ತಿದೇ ತಡ, ಎರಡು ಮೂರು ಜನ ಬೆಡಿನಾಂಗೆ ಹೆಗ್‌ಲ್ ಮೇಲೆ ಇಸಿಕಂಡ್ ಓಡಿ ಬಂದೊ. ನಂಗೆ ಒಮ್ಮೆ ತಬ್ಬಿಬ್ಬಾತ್. ಕರೆಗೆ ಹೋಗಿ.. ಕರೆಗೆ ಹೋಗಿ.. ಮೊದು ಮಕ್ಕ ಬಂದೊಂತ ಯಾರೋ ಒಬ್ಬ ಅವಂರ್‍ದ ಮುಂದೆ ಓಡಿ ಬಾತ್. ನಾ ಹೇಂಗಾರ್ ದೊಣ್ಣೆ ಕುತ್ತಿಕಂಡ್ ಕರೆಗೆ ತೆಲ್ಗಿದೆ. ಮಕ್ಕ ನೆಗಾಡಿಕಂಡ್ ಅದ್ ಬೆಡಿ ಅಲ್ಲಾ ಉಗ್ಗಪ್ಪ ವಿಡಿಯೋ ಕ್ಯಾಮಾರಾ ಸಣ್ಣ ಪಿಳ್ಳಿ ಹೇಳ್ತ್. ಎಂತ ವೀಡಿಯೋನೋ ಏನೋ. ಏನ್ ಅವರ ಜೀವ ಹೋದೆನಾ ಮೆಲ್ಲಂಗೆ ಬಂದರೆ??
ಹಾಂಗೆ ಕಾರ್ ನಿತ್ತಾಕನ ಒಬ್ಬ ಬೆಡಿನಂವ ಇಳೆ ಬೊಡಿ, ಇಳೆಬೊಡಿಂತ ಮೊದೊಳಿಗೆನ ತಡ್ತ್. ಬಹುಶಃ ರಾಹು ಕಾಲ, ಗುಳಿಗ ಕಾಲೋನೋ ಇರೋಕುಂತ ಸುಮ್ಮನಾದೆ. ನೋಡಿರೆ ಹಾಂಗಲ್ಲ ಇಳೇದು ಹೆಂಗೆಂತ ಆ ಬೆಡಿನಂವ ಹೇಳ್ತ್. ಅಂವ ಹೇಳ್ದಾಂಗೆ ಇದು ಮೆಲ್ಲ ಕಾರ್‌ನ ಬಾಗಿಲ್ ತೆಗ್ದ್ ಕಾಲ್ ಹೊರೆಗೆ ಇಸಿಕಾಕನ ಒಬ್ಬ ಬೆಡಿನಂವ ಬಡ್ಕಂತ ಅದರ ಕಾಲ್ ಬುಡಕ್ಕೆ ಬೀತ್.
ಏ…ಸೀ…ಇಂವಂಗೆ ಇದ್ದಾಕಿದ್ದಾಂಗೆ ಎನಾತ್ಂತ ಹೆದ್ರಿ ಹೋದೆ. ಸುಟ್ಟೋವು ಈ ದುಡ್ಡುಗಾಗಿ ಎರ್‍ಡ್ ಮೂರು ದಿನ ನಿದ್ದೆ ಕೆಡ್ದು, ಉಂಬಂಕೆ ತಿಂಬಕೆ ಸರಿ ಇಲ್ಲೆಂತ ಮನ್ಸಲೆ ನೆನ್ಸಿಕಂಡೆ. ನೋಡಿರೆ ಮಸಿಗಿದೆ!! ಅಂವ ಬಿದ್ದಲಿಂದಲೇ ಏನೋ ಮಾಡಿಕೆ ಶುರು ಮಾಡ್ತ್. ಮಕ್ಕಾ ಇಬ್ಬರೂ ಬಾಯಿಗೆ ಕೈ ಹಿಡ್ದ್ ಜೋರು ನಗಾಡ್ದೊ. ಅದ್ ಬಿದ್ದದಲ್ಲ ಉಗ್ಗಪ್ಪ ಕಾರ್ಂದ ಇಳೆಕಾಕನ ಗೂಡೆನ ಕಾಲ್ಂದನೆ ಫೋಟೋ ತೆಗಕೆ ಕುದ್ದದ್. ಓ ದೇವ್ರೆ ಅವ ನಿತ್ತ್‌ಕಂಡ್ ತೆಗ್ದರೆ ಸತ್ತು ಹೋದೇನಾ?…ಅದ್ ಅತಲ್ಲಾ. ಮತ್ತೆ ಹೇಂಗೂ ಗೂಡೆ ಕಾರ್ಂದ ಇಳ್ದ್ ನಡೆಕೆ ಶುರು ಮಾಡ್ತ್.. ನಡೆಕಾಕನ ರಾಮ..ರಾಮ!!..ಅದರ ಹೇಳಿ ಸುಖ ಇಲ್ಲೇ. ಈ ಮೂರು ಜನ ಬೆಡಿನಾಂಗಿದ್ದದರ ಹಿಡ್ಕಂಡ್ ನಾಯಿಗ ಮೂಸಿದಾಂಗೆ ಮಾಡಿಕಂಡ್ ಮೊದೊಳಿಗೆ ರೂಂಗೆ ಎತ್ತ್‌ಕಾಕನ ಹೆಚ್ಚ್ ಕಮ್ಮಿ ಅರ್ಧಗಂಟೆ!!.. ನಂಗೆ ಬಂದಲ್ಲಿಗೆ ಒಮ್ಮೆ ಹೋದರೆ ಸಾಕ್ಂತ ಆಗ್ತಾ ಇತ್ತ್.
ಹಾಂಗೆ ಅವರೊಟ್ಟಿಗೆ ನಾನೂ ಮೆಲ್ಲ ಹೆಜ್ಜೆ ಹಾಕಂಡ್ ಹೇಂಗಾರ್ ಹಾಲ್‌ನ ಒಳಗೆ ಬಂದೊ. ಬಂದವನೆ ಎದ್‌ರ್ ಕುರ್ಚಿಲಿ ಗೋಡೆ ಕರೇಲಿ ಕುದ್ದೆ. ನನ್ನ ದೊಣ್ಣೆನ ಹಾಂಗೆ ಗೋಡೆಗೆ ಒರ್‍ಗಿಸಿ ಇಸಿದೆ. ಅಷ್ಟೋತ್ತಿಗೆ ಯಾರೋ ಒಬ್ಬ ಬಂದ್, ಉಗ್ಗಪ್ಪ ನಮಸ್ಕಾರಂತ ಹೇಳ್ತ್. ಅದ್ ಯಾರ್ಂತ ನಂಗೆ ಸರಿ ಕಂಡತ್ಲೆ. ಕಣ್ಣ್ ಮಯ ಮಯ ಅಗಿ ಯಾರ ಗುರ್ತನೂ ಸಿಕ್ಕುದುಲೆ. ಆದರೂ ಮೊದುವೆ ಮನೆನವನೇ ಅಗಿರೋಕುಂತ ನೆನ್ಸಿ ನಮಸ್ಕಾರಂತ ಹೇಳ್ದೆ. ನೀವ್ಗೆ ಕುಡೆಕೆ ಸಿಕ್ಕಿತಾಂತ ಕೇಳ್ದೊ. ಕುಡೆಕೆ ಅವನ ಅಪ್ಪ ಯಾರು ನಂಗೆ ಕೊಟ್ಟತ್ಲೆ. ಹಾಂಗೆ ಹಾಲ್‌ಲಿ ಕುಡೆಕೆ ಮನೆನಾಂಗೆ ತಂದ್ ಕೊಡ್ದುಲೆ ಉಗ್ಗಪ್ಪ. ಅಲ್ಲಿ ಹೊರಗೆ ಹೊಯ್ದ್ ಇಸಿಕಂಡ್ ಇದ್ದದೆ. ನಾವೇ ಕುಡೇಕುಂತ ದೊಡ್ಡ ಪಿಳ್ಳಿ ಹೇಳ್ತ್. ಅಲ್ಲಿ ಹೊಯ್ದು ಇಸುದು ಯಾರಿಗೆ ಗೊತ್ತು?? ನಮ್ಮಂತೋವುಕೆ ಕಾಣಕಲ್ಲಾ?.
ಹಾಂಗೆ ಕುದ್ದ್‌ಕಂಡ್ ಇದ್ದಾಂಗೆ ಅರ್ಧ ಗಂಟೆಲಿ ಧಾರೆಗೆ ರೆಡಿ ಅತ್ ಕಂಡದೆ. ಎಲ್ಲವೂ ಆಚೆ ರೂಮುಂದ ಈಚೆ ರೂಮುಂದ ಹೊರ್‍ಟ್‌ಕಂಡ ಬಂದೊ. ಅವರೊಟ್ಟಿಗೆ ಬೆಡಿನೊವು ಕೂಡಾ ಕರೆ ಕರೆ ಒಂದಿದೊ. ನಾ ಎದ್‌ರ್ಂದ ಕುದ್ದ್‌ಕಂಡ್ ಇದ್ದಂವ ಒಮ್ಮೆ ಇಣ್ಕಿ ನೋಡ್ದೆ. ನೋಡಿರೆ ಗೂಡೆಗೆ ಸರಿ ಸೀರೆನೂ ಉಡ್ಸಿತ್ಲೆ. ಬರೀ ಒಳಗೆ ಹಾಕುವ ಉದ್ದ ಲಂಗನೂ ಮೇಲೆ ಹೊದ್ದುಕಾಂಕೆ ಒಂದು ಶಾಲ್ ಮಾತ್ರ ಇತ್ತ್. ಈಚೆಂದ ನೋಡಿರೆ ಹೈದಂಗೆ ಗೂಡೆಗೆ ಹಾಕುವ ಚೂಡಿದಾರಂತ ಹೇಳ್ವೆ ಅಲಾ..ಅದರ ಹಾಕಳೊ. ಹೆಗಲ್ ಮೇಲೆ ಒಂದು ಉದ್ದದ ಶಾಲ್. ಅದರೂ ನೋಡಿಕೆ ಲಾಯಿಕ್ ಕಾಂಬೊತ್ತಿತ್ತ್. ಏನ್ ಅನ್ಯಾಯ ಗೂಡೆಗೆ ಒಂದೂ ಸೀರೆನಾದ್ರೂ ಉಡ್ಸಿಕೆ ಬೊತ್ತಾ ಕುಲ ಗೆಟ್ಟವ್ಕೆ?!
ಮಕ್ಕ ಹಿಂದಕೆ ಅಡ್ಡ ಅಡ್ಡ ಬಿದ್ದ್ ನೆಗಾಡ್ದೊ. ಉಗ್ಗಪ್ಪಂಗೆ ಸಿಟ್ಟು ಬಾತ್. ಹುಚ್ಚರಾಂಗೆ ನೆಗಾಡ್ರೆ ನಿಮ್ಮ ತಲೇಗೆ ಕುಟ್ಟಿನೆ ಕುರೆಗಂತ ಬೈದೊ. ಮಕ್ಕ ತಡೆಕೆ ಆಗದೆ ಬಾಯಿನೂ ಮೂಂಕುನ್ ಒಟ್ಟಿಗೆ ಮುಚ್ಚಿಕಂಡ್ ಕುದ್ದೊ. ದೊಡ್ಡ ಪಿಳ್ಳಿ ಮೆಲ್ಲಂಗೆ ಹೆದ್ರಿಕಂಡ್ ಹೇಳ್ತ್. ಈಗನ ಡ್ರೆಸ್ ಪಿಚ್ಚರ್ ಸ್ಟೈಲ್ ಉಗ್ಗಪ್ಪಾ. ಈಗೆಲ್ಲ ಹಾಂಗೆನೆ ಮೊದುವೆ ಆದು. ಎಂತ ಪಿಚ್ಚರ್ ಸ್ಟೈಲ್ ಮರಾಯ.. ಸರಿ ಬಟ್ಟೆ ಹಾಕಿಕೆ ಬೊತ್ತಾ?. ಹಾಂಗೆ ಅಗಿಯೇ ಈಗ ಹೋದಲ್ಲಿ ಬಂದಲ್ಲಿ ಕೊಲೆ, ಅತ್ಯಚಾರಂತ ಆದು. ಹೆಣ್ಣು ಮಕ್ಕ ಮೈ, ಎಲ್ಲಿ ತೋರ್‍ಸೋಕೋ ಅಲ್ಲಿನೇ ತೋರ್‍ಸೋಕು. ಇದ್ ಎಂತ ಹೇಸಿಕೆ ಅಣ್ಣಾ…ನಾ ನಿನ್ನಾ ಉಗ್ಗವನ ನೋಡಿಕೆ ಹೋಕನ ಅದ್ ಒಂದು ಉದ್ದ ಲಂಗ ಹಾಕಿ, ಪುಲ್ ಕೈ ರೊವ್ಕೆ ಹಾಕಿ, ಯಾರೋ ಒಳಗೆಂದ ನೂಕಿ ಹಾಕಿದ್ ಕಂಡಂದೆ. ಒಂದೇ ಹಾರಾಟಕ್ಕೆ ಜಗ್ಲಿಂದ ಕಡ್ಪ ಹಾರಿ ಓಡಿಟು. ನಾ ನಿನ್ನಾ ಉಗ್ಗವನ ಸರಿಯಾಗಿ ನೋಡ್ದ್ ಮದುವೆ ಆಗಿ ಒಂದ್ ತಿಂಗ ಕಳ್ದ್. ಗೊತ್ತುಟ ನೀವ್ಗೆ?.
ಆಗ ನೀವ್ಗೆ ಜ್ಯೂಸ್ ಸ್ವೀಟ್ಸ್ ತಂದ್ ಕೊಟ್ಟತ್ಲೇನಾ? ಸಣ್ಣ ಪಿಳ್ಳಿ ಕೇಳ್ತ್. ಆಗ ಜ್ಯೂಸ್ ಗೀಸ್ ಎಲ್ಲಾ ಇತ್ಲೆ ಮರಾಯ. ಗೂಡೆ ನೋಡಿಕೆ ಹೋಕಾಕನ ಕಣ್ಣ ಚಾಯನ ಕೀಜಿನ ಗ್ಲಾಸ್‌ಲಿ ಕೊಟ್ಟೊ. ಎರ್‍ಡ್ ಎರ್‍ಡ್ ಹಲ್ಸ್‌ನ ಹಪ್ಪಳ, ಕಾಯಿ ಹೋಳ್ ತಿಂಬಕೆ. ಮಕ್ಕ ಇಬ್ಬರೂ ಏನೋ ಆಲೋಚನೆ ಮಾಡ್ದಾಂಗೆ ಕಂಡತ್. ಕೂಡ್ಲೇ ಅಜ್ಜಂಗೆ ಅರ್ಥ ಆತ್.
ಹಾಂ ಹೇಳ್ನೆ ಮಾರಾಯ.. ಹಾಂಗೆ ಮೊದುಮಕ್ಕ ಬಂದೊ.. ಅವರೊಟ್ಟಿಗೆ ನೀವು ಹೇಳ್ದಾಂಗೆ ಪಿಚ್ಚರ್‌ಲಿ ಬಂದಾಂಗೆ ಒಬ್ಬ ಭಟ್ರ್ ವೇಷ ಹಾಕಂಡ್ ಬಂದೋ. ಕೈಲಿ ಹರಿವಾಣ ಅದರ ಮೇಲೆ ಕಳ್ಸಿಗೆ, ಚಮ್ಚ ಇದ್ದದರ್ಂದ ಭಟ್ರೆ ಆಗಿರೋಕಾಂತ ತಿಳ್ಕಂಡೆ. ಹಂಞ ಹೊತ್ತಿಗೆ ಕೆಳಗೆ ಕುರ್ಸುಲಿ ಕುದ್ದ ನಂಗೆ.. ಈ ಬೆಡಿನೋವು ಅವರೊಟ್ಟಿಗೆ ದೊಡ್ಡ ದೊಡ್ಡ ಹೆಣ್ಮಕಳ ಕುಂಡೆಗ ಮಾತ್ರ ಕಾಂಬಕೆ ಶುರು ಆತ್. ಅವರ ನಡುಂದ ಭಟ್ರ ಮಂತ್ರ ಕೇಳ್ತಾ ಇತ್ತ್. ಅಲ್ಲಿ ಮೊದುವೆ ಆಗ್ತಾ ಉಟ್ಟಾ ಅಲ್ಲಾ ಸತ್ಯನಾರಾಯಣ ಪೂಜೆನೋ ಎಂತುದುಂತ ನಂಗೆ ಕಾಂಬೊತಿತ್ಲೆ. ಆಗಾಗ ಬೆಡಿನಂವ ಲೈಟ್ ಹಾಕಿ ನಮ್ಮ ಕಡೆ ತಿರ್‍ಗ್‌ಸ್ತಾ ಇತ್ತ್. ಆಗೆಲ್ಲಾ ನನ್ನ ಎದೆ ಧಸ್‌ಕಂತ ಹೇಳ್ತಿತ್ತ್. ಯಾಕೆ ಉಗ್ಗಪ್ಪ…ದೊಡ್ಡಾ ಪಿಳ್ಳಿ ಕೇಳ್ತ್. ಎಲ್ಯಾರ್ ಲೈಟ್ ಹಾಕಿ ಮೃಗಂಗೆ ಹೊಡ್ದಾಂಗೆ ಹೊಡೇಕೆ ಬೊತ್ತಾಲ್ಲ..? ಹಂಞ ಹೊತ್ತ್ ಕಳ್ದಾಂಗೆ ಹಿಂದಕೆ ಎಲ್ಲವು ಒಳಗೆ ಹೋದೊ. ಆಗ ಹಕ್ಕಲೆ ಕುದ್ದಾಂವನೊಟ್ಟಿಗೆ ನಾ ಕೇಳ್ದೆ ಮದುವೆ ಆತಣ್ಣಾಂತ. ಹಾಂ..ಧಾರೆ ಆತ್ ಉಗ್ಗಪ್ಪ ಇನ್ನ್ ಅರ್ಧ ಗಂಟೆಲಿ ಪಚಾರಕ್ಕೆ ಕುದ್ರಿಸುವೆಂತ ಹೇಳ್ತ್. ಮೆಲ್ಲ ಅವನೊಟ್ಟಿಗೆ ಕೇಳ್ದೆ. ಅಣ್ಣಾ ಮೊದುವೆಗೆ ಕವರ್ ಮಿನಿ ಕೊಡಿಕೆ ಉಟ್ಟಂತ? ಇಲ್ಲೆ ಇಲ್ಲೆ ಉಗ್ಗಪ್ಪ…ಪಚಾರಕ್ಕೆ ಕುದ್ರಿಸಿದ ಕೂಡ್ಲೆ ಅಕ್ಕಿ ಹಾಕುದು ಊಟ ಮಾಡ್ದುಂತ ಹೇಳ್ತ್. ಹೆಂಗೂ ಬಂದಾತಲ್ಲ ಇನ್ನ್ ಒಂದ್ ಅರ್ಧ ಗಂಟೆ ಉಂಡು ಹೋದರತಾತ್ಂತ ನೆನ್ಸಿಕಂಡೆ. ಅರ್ಧ ಗಂಟೆ ಅಲ್ಲ ಹೆಚ್ಚಿ ಕಮ್ಮಿ ಒಂದು ಗಂಟೇನೆ ಆತ್. ಮೊದ್‌ಮೊಕ್ಕ ಸ್ಟೇಜ್‌ಗೆ ಬಂದೊ. ನಂಗೆ ಒಂದು ಕಡೆಂದ ಹೊಟ್ಟೆನೂ ಇಸಿಕೆ ಶುರು ಆತ್. ಆಗ ಹಿಂದಕ್ಕೆ ಹಕ್ಕಲಿದ್ದವನೊಟ್ಟಿಗೆ ಕೇಳ್ದೆ. ಗಂಟೆ ಎಷ್ಟ್ ಆತ್ ಅಣ್ಣಾಂತ?? ಗಂಟೆ ಒಂದ್ ಕಳ್ತ್ಂತ ಅಂವ ಹೇಳ್ತ್. ಓ ದೇವ್ರೇ ಇನ್ನ್ ಮಧ್ಯಾಹ್ನದ ಬಸ್ಸ್ ಸಿಕ್ಕಿಕಿಲೆ. ಇನ್ನ್ ಹಿಂಬೊತ್‌ನ ಬಸ್ಸೇ ಗತಿಂತ ಲೆಕ್ಕ ಹಾಕಿದೆ. ಮೊದುಮೊಕ್ಕ ಸ್ಟೇಜಿಗೆ ಬಾಕನ ಈ ಹೊತ್ತಾದರ್ಂದ ಎಲ್ಲ ಜನಗ ದನಂಗ ಓಡುವಂಗೆ ಓಡ್ದೊ. ಓಡಿಕಾಕನ ಎರ್‍ಡ್ ಜನ ಹೊಂತಗಾರಿ ಹುಡ್ಗರ್ ಸ್ಟೇಜ್‌ಲಿ ಕೈ ಅಡ್ಡ ಕಟ್ಟಿ ನಿಲ್ಸಿದೊ. ಇವರ ಉರ್‍ಡ ಪತ್ತ ನೋಡಿ ನಂಗಾ ಆತ್. ಹೇಂಗೂ ಕವರ್ ಹಾಕಿಕೆ ಇಲ್ಲೆ ಇವರ ನಡುಲಿ ಈ ದೊಣ್ಣೆ ಹಿಡ್ಕಂಡ್ ನಂಗೆ ಉರ್‍ಡಿಕೆ ಆಕಿಲೆ. ಅದ್ ಕೂಡಾ ನನ್ನ ಕಾಲ್‌ಲಿ ಜೋಡು ಸಹ ಇಲ್ಲೆ. ಎಲ್ಲವೂ ಕಾಲ್‌ಲಿ ಜೋಡು, ಬೂಡ್ಸು ಹಾಕಂಡ್ ಆ ಭಾಗ್ಯಲಕ್ಷ್ಮಿ ಅಕ್ಕಿಗೆ ಮೆಟ್ಟಿಕಂಡೆ ಹೋದವೆ. ಇದರೆಲ್ಲ ನೋಡಿಕಕಾನ ನಂಗೆ ಯಾಕೋ ಮೇಲೆ ಹೋದೇ ಬೇಡಾಂತ ಮನ್ಸಲಿ ಆಗಿ ಮೆಲ್ಲಂಗೆ ಕುದ್ದಲಿಂದ ಎದ್ದೆ.
ಎಲ್ಲಿಗೆ ಉಗ್ಗಪ್ಪ ಮನೆಗೆ ಹೊರ್‍ಟ್‌ದಾ? ಸಣ್ಣ ಪಿಳ್ಳಿ ಕೇಳ್ತ್? ಹಾಂ, ಹೊರ್‍ಟದ್ ನಿನ್ನ ಅಪ್ಪನ ಮನೆಗೆ…ಬಂದಲ್ಲಿಗೆ ಒಂದು ಬಾಯಿ ಉಂಡ್‌ಕಮೋಂತ ಎದ್ದದ್. ಆಚೆ ಪುಡೇಲಿ ಎಲ್ಲವು ಉಂಬಕೆ ಹೋಗ್ತಾ ಇದ್ದೊ. ನಾ ಅವರೊಟ್ಟಿಗೆ ದೊಣ್ಣೆಹಿಡ್ಕಂಡ್ ಹೋದೆ. ಕುದ್ರಿಕೆ ಎಲ್ಯಾರ್ ಉಟ್ಟಾಂತ ನೋಡ್ದೆ .ಊಹ್ಞು ಕುದ್ರಿಕೆ ಇಲ್ಲೆ. ಬಟ್ಲ್ ಹಿಡ್ಕಂಡ್ ಎಲ್ಲರೊಟ್ಟಿಗೆ ನಿಲ್ಲೋಕಾತ್. ಜನಂಗ ಸುಮ್ಮನೆ ನಿತ್ತರೆ ಅದಲ್ಲಾ? ಈ ನೂಕು ನುಗ್ಗಲ್ಂದಾಗಿ ಒಳ್ಳ ದೊಣಿ ತೆಗ್ದಾಂಗೆ ಹಿಂದೆ ಮುಂದೆ ಹೋಗ್ತಿದ್ದೊ.. ಹೇಂಗೋ ಬಳ್ಸವನಕ್ಕಲೇ ಹೋದೆ . ಹೋದಾಂಗೆ ಒಬ್ಬ ಉಪ್ಪನಕಾಯಿ ಇಕ್ಕಿತ್. ಇನ್ನೊಬ್ಬ ನೆಟ್ಟಿಕಾಯಿನೆಲ್ಲಾ ಕೊಯ್ದು ಗಂಜಿನೊಟ್ಟಿಗೆ ಬೇಸಿದರ ನನ್ನ ಬಟ್ಲಗೆ ಹಾಕಿತ್. ಅವುಕೆ ಗಂಜಿ ಗೈಪು ಬೇರೆ ಬೇರೆ ಮಾಡಿಕೆ ಏನಾ ಸಂಕಟನಾ? ಮಕ್ಕ ಮೋರೆ ಮೋರೆ ನೋಡಿಕಂಡೊ. ಅದ್ ಪಲಾವು ಉಗ್ಗಪ್ಪ..ಸಣ್ಣ ಪಿಳ್ಳಿ ಹೇಳ್ತ್. ಎಂತ ಮುಲಾಮು ಅದರೂ ಬೇರೆ ಬೇರೆ ಬೇಸಕಲ್ಲಾ..? ಅದರ ಮೇಲೆ ಕಾಯಿ ಮೆಣ್ಸ್, ಟೊಮೆಟೊ, ನೀರುಳ್ಳಿ ಕೊದು ಮೊಸರ್‌ಗೆ ಹಾಕಿದರ ಹಂಞ ಹಂಞ ಮತ್ತೊಬ್ಬ ಇಕ್ಕಿತ್. ಇದಾದ ಮೇಲೆ ಆಚೇಲಿ ಹುಗ್ಗೆ ಇಸಿಕಂಡದ್ ಕಂಡತ್, ಅಲ್ಲಿಗೆ ಹೋಕನ ಒಬ್ಬ ಉಗ್ಗಪ್ಪ.. ಇದರ ತಿಂದ್ ಬನ್ನಿ. ಆಮೇಲೆ ಇದರ ಇಕ್ಕುದುಂತ ಹೇಳ್ತ್ . ಹಾಂಗೆ ಮೆಲ್ಲ ಎಲ್ಲವು ಉಂಬೊದರ ಎಡೆಗೆ ಹುಕ್ಕ್ ದೊಣ್ಣೆನ ಕೈಗೆ ಒರ್‍ಗಿಸಿಕಂಡ್ ಈ ಮುಲಾಮುನಾ ಹಸಿನೆಟ್ಟಿಕಾಯಿಯೊಟ್ಟಿಗೆ ಕಲ್ಸಿ ಇನ್ನೇನ್ ಬಾಯಿಗೆ ಹಾಕೋಕುಂತ ಕೈ ಎತ್ತಿಕಾಕನ ಯಾರೋ ಒಬ್ಬ ತಲೆ ಹೋಕಾ ಹೈದನ ತಲೆ ನನ್ನ ಮೊಣ್ಕ್ಯೆಗೆ ಕುಟ್ಟಿತ್ತ್.. ನನ್ನ ಕೈ ನನ್ನ ಬಾಯಿಗೆ ಹೋಗುವ ಬದ್ಲ್ ಹಕ್ಕಲೆ ನಿತ್ತ ಹೆಂಗಸ್‌ನ ಕೆಪ್ಪೆಗೆ ತಾಂಗಿತ್. ಹೆಂಗ್‌ಸ್‌ಗೆ ಒಮ್ಮೆ ನಾಚಿಕೆ ಆತ್. ಏನೋ ಬೊಯ್ಯಕೆ ಬಾಯಿ ತೆಗ್ದದ್ ನನ್ನ ಬಂಗನ ನೋಡಿ ನೀವು ಇಲ್ಲಿ ಬನ್ನಿ ಉಗ್ಗಪ್ಪಂತ ನನ್ನ ಕರೆಗೆ ಕರ್‍ಕಂಡ್ ಹೋಗಿ ಕರೇಲಿದ್ದ ಬೆಂಚಿಲಿ ಕುದ್ರಿಸಿತ್. ನೀವುಗೆ ಬೇಕಾದ್ ನಾ ತಂದು ಕೊಟ್ಟನೆ ನೀವು ಇಲ್ಲೇ ಕುದ್ರಿಂತ ಹೇಳ್ತ್ ಆ ಪುಂಡಳ್ ತಾಯಿ. ಅದರ ತಿಂದ ಮೇಲೆ ಹಂಞ ಹುಗ್ಗೆ ಬೇಕುಂತ ಹೇಳ್ದೆ. ಅದ್ ಹುಗ್ಗೆ, ಅದರ ಮೇಲೆ ಹಂಞ ಅಂಬರ ಹೊಯ್ದ್ ತಾತ್. ಅದರೊಟ್ಟಿಗೆ ಎರಡು ಮೂರು ಬಗೆ ಸಿಂಹಿ ಖಾರಂತ ಎಂತದೋ ಗೈಪು ಇತ್ತ್. ಹಾಂಗೆ ಬಂದ್ ಪಾಯಸ ಬೇಕಾಂತ ಕೇಳ್ತ್. ದಮ್ಮಯಕ್ಕ ನಂಗೆ ಏನ್ ಬೇಡಾಂತ ಹೇಳ್ದೆ. ಓ ಅಲ್ಲಿ ಹೊರಗೆ ಒಂದ್ ಗಾಡಿ ಇಸ್ಯೊಳೊ ಅದ್ಕೆ ಬಟ್ಲ್ ಹಾಕಿ ಕೈ ತೊಳ್ಕಣಿಂತ ಹೇಳ್ತ್. ಹಾಂಗೆ ಮೆಲ್ಲ ಹೊರ್‍ಟ್ ಬಟ್ಲ್ ಹಾಕಿ ಅಲ್ಲೆ ಇದ್ದ ನಳ್ಳಿಲಿ ಕೈ ತೊಳ್ದ್ ಬಾಕ್ಯಾಕನ ಒಬ್ಬ ಹೈದ ಕರ್‍ದ್, ಈ ಐಸ್ ಕ್ಯಾಂಡಿ ಕೊಟ್ಟತ್. ಬೇಡ ತೇಳ್ದಾಂಗೆ ತಿನಿ ಉಗ್ಗಪ್ಪಂತ ಕೊಟ್ಟ್, ಈಗ ನೋಡಿ ಮಾತಾಡಿಕೆ ಸಹ ಆದುಲೆ. ಹಾಂಗೆ ತಿಂದ್ ಅದ ಮೇಲೆ ಒಬ್ಬ ವಾಚಿ ಕಟ್ಟಿದವನೊಟ್ಟಿಗೆ ವಾಪಾಸ್ಸ್ ಗಂಟೆ ಎಷ್ಟಾತ್ಂತ ಕೇಳ್ದೆ. ಗಂಟೆ ಎರ್‍ಡುವರೆ ಆತ್ಂತ ಹೇಳ್ತ್. ಅಯ್ಯನ ಬಂಡೆ ಇನ್ನ್ ನಾಕ್ ಕಾಲಕ್ಕೆ ಬಸ್ಸ್. ಬಸ್ಸ್ ಸ್ಟ್ಯಾಂಡಿಲಿ ಹೋಗಿ ಎಂತ ಮಾಡ್ದುಂತ ಯೋಚನೆ ಮಾಡಿ ಅಲ್ಲೇ ಹೊರಗೆ ಇಸಿದ ಬೆಂಚಿಲಿ ಕುದ್ರೋಮೊಂತ ಕುದ್ದೆ.
ಅಷ್ಟೋತ್ತಿಗೆ ಈ ಬೆಡಿನಾಂಗಿದ್ದೋವು ಮೂರು ಜನ ಮೊದು ಮಕ್ಕಳ ನಡುಲಿ ಹಾಕಿ ನಾ ಕುದ್ದ ಹಕ್ಕಲೆ ಕರ್‍ಕೊಂಡು ಬಂದೋ!.. ಎಲಾ.. ಭಗವಂತ…ಇವು ಎಲ್ಲಿಗೆ ಮೊದುಮಕ್ಕಳ ಕರ್‍ಕಂಡ್ ಹೊರ್‍ಟ್‌ದ್. ಮೊದುವೆ ಮನೆವ್ಕೆ ಗೊತ್ತುಟಾ ಇಲ್ಲೆನಾಂತ ನಾ ಯೋಚನೆ ಮಾಡಿಕಾಕನ.. ಗೂಡೆನ ಕರೆಗೆ ನಿಲ್ಲಿಕೆ ಹೇಳಿ ಈ ಬೆಡಿನೋವು ಮೊದುಮಂಞನ ಕರೆಗೆ ಕರ್‍ಕಂಡ್ ಹೋಗಿ ಕೈ ಕಟ್ಟಿ ನಿಲ್ಲಿಕೆ ಹೇಳ್ದೋ. ಪಾಪ ಅಂವ ಹೆದ್‌ರಿ ಆಗಿರೋಕು ಅವು ಹೇಳ್ದಾಂಗೆ ಕೇಳಿಕೆ ಶುರು ಮಾಡ್ತ್. ಈ ಬೆಡಿ ಹಿಡ್ಕಂಡಿದ್ದೋವು ಅವನ ಹಿಂದೆಂದ, ಮುಂದೆಂದ, ಕಾಲ್ಂದ, ತಲೆಂದ, ಕಾಲ್ ಅಡ್ಡ ಹಾಕಿ, ಕಾಲ್ ಕುತ್ತ ಮಾಡಿ ಬಂಗ ಬರ್‍ಸಿಕೆ ಶುರು ಮಾಡ್ದೊ. ಅಂವಂಗೆ ಬೆಗ್‌ರ್ ಇಳೆಕೆ ಶುರು ಅತ್. ಅಂವನ ನೀವು ಹಂಞ ಕುದ್ರಿಂತ ಹೇಳಿ ಗೂಡೆನ ಕರ್‍ದೋ. ಗೂಡೆನ ಕೂಡಾ ಮೂರುಜನ ಹೇಳ್ದಾಂಗೆ ಕೇಳ್ಸಿಕೆ ಶುರು ಮಾಡ್ದೊ. ಸೊಂಟ ತಿರ್‍ಗಿಸಿ, ಕಣ್ಣ್ ಓರೆ ಮಾಡಿ, ಕೈ ಬೆರ್‍ಲ್‌ನ ಕೆಪ್ಪಗೆ ಇಸಿ, ಮೇಲೆ ನೋಡಿ, ಕೆಳಗೆ ನೋಡಿ…ಇನ್ನ್ ಏನೇನ್ಂತ ನಂಗೆ ಗೊತ್ತಾದ್ಲೆ. ಒಟ್ಟು ಅದ್ಕೆ ಸಾಕ್ ಬೇಕಾದಾಂಗೆ ಅತ್. ಒಬ್ಬ ಬೆಡಿನಂವ ಅಡ್ಡ ಬಿದ್ದ್ ತೆಗ್ದರೆ, ಮತ್ತೊಬ್ಬ ಕುದ್ದಕಂಡ್, ಇನ್ನೊಬ್ಬ ನಿತ್ತ್‌ಕಂಡ್ ಛೀ.. ಅದರ ನೋಡಿಕೆ ಬೊತ್ತ್. ಇದಾದ ಮೇಲೆ ಇಬ್ಬರ ಒಟ್ಟಿಗೆ ನಿಲ್ಸಿ ಅದೆಂಥದೊ ಮಾಡಿಕೆ ಶುರು ಮಾಡ್ದೊ. ಹೈದ ಓಡಿ ಬಾದು.. ಗೂಡೆ ಅವನ ಸೊಂಟ ಹಿಡ್ಕಂಬೊದು, ಇಬ್ಬೋರು ಹೆಗ್‌ಲ್ ಮೇಲೆ ಕೈ ಹಾಕುದು , ಕುಂಡೆ ಕುಂಡೆ ನಿತ್ತ್ ತಿರ್‍ಗಿ ನೋಡ್ದು, ಹೈದ ಕುದ್ದ್ ಗೂಡೆನ ಕೈ ಹಿಡಿದು, ಗೂಡೆ ಕುದ್ದ್ ಹೈದನ ಮೇಲೆ ನೋಡ್ದು, ತಬ್ಬಿಕಂಬೋದು…ಅದರ ಹೇಳಿ ಸುಖ ಇಲ್ಲೇ.. ನಂಗೆ ೭೬ ವರ್ಷ ಅದರೂ ಇದರೆಲ್ಲ ನೋಡಿಕೆ ಆತ್ಲೆ. ಎದ್ದ್ ಹೋಗೊಮೊಂತ ಹೇಳ್ರೆ ಎಲ್ಲಿಗೆ ಹೋದು?? ನಮ್ಮ ಕಾಲಲಿ ಇಂತದೆಲ್ಲ ನೋಡ್ತ್‌ಲೆ, ಕೇಳ್ತ್‌ಲೆ.. ನನ್ನ ಇಡೀ ಜೀವ ಮಾನಲಿ ಇವು ನನ್ನ ಎದ್‌ರ್ ನಡ್ಕಂಡಂಗೆ ನಾನು ಉಗ್ಗವನು ಇಷ್ಟ್ ವರ್ಷ ನಡ್ಕಂತಿಲ್ಲೆ. ಕಾಲ ಕೆಟ್ಟ್ ಹೋತ್ಂತ ಅತ್ ಅದರೊಟ್ಟಿಗೆ ಒಬ್ಬ ಬೆಡಿನಂವ ಮೊದೊಳಿಗೆನ ಕಾಲಕ್ಕಲೆ ಸೀರನ ಸರಿ ಮಾಡ್ದು, ಅದರ ಕೈನ ಗಂಡನ ಎದೆಗೆ ಹೀಂಗೆ ಇಸೋಕುಂತ ತೋರ್‍ಸುದ್ ಹೀಂಗೆಲ್ಲಾ… ನೀವ್ಗೆ ಅನ್ಸುದು ಮಕ್ಕಳೇ.. ಈ ಉಗ್ಗಪ್ಪಂಗೆ ಹುಚ್ಚು ಕಂಡದೇಂತ. ಈಗನ ಕಾಲನೆ ಹಾಂಗೆಂತ ಆದರೆ ಒಂದು ಮಾತ್ರ ನೆನ್ಪಿಸಿಕಣಿ. ನಮ್ಮ ಕಾಲಲಿ ಒಂದು ಸಂಸ್ಕಾರ ಮತ್ತೆ ಸಂಪ್ರದಾಯಗಳ ದಾಟಿ ಮುಂದೆ ಹೋತಿತ್ಲೆ. ಈಗ ನೋಡಿ ಹೀಂಗೆಲ್ಲಾ ಅಡಿಕಂಡಿರ್‍ದಂದ್ಲೆ ಶಾಲೆಗೆ ಹೋಕಾಕನೇ ಮಕ್ಕ ಬೇಡಾದ್ ಮಾಡಿಕೆ ಶುರು ಮಾಡ್ವೆ. ಅಲ್ಲಲ್ಲಿ ಅತ್ಯಾಚಾರ ಕೊಲೆಗ ಆಗ್ತಾನೆ ಒಳೊ. ಮುಂದೆ ಮುಂದೆ ದೊಡ್ಡ ದೊಡ್ಡ ಪೇಟೆಗಳ್ಲಿ ಅಗ್ತಾ ಇತ್ತ್. ಈಗ ಹಳ್ಳಿಲಿ ಶುರು ಆವ್ಟು. ಮುಂದೆ ಏನಾದೆನೋ..? ಇನ್ ಎಂತರೆಲ್ಲಾ ನಮ್ಮ ಕಣ್ಣ್ಂದ ನೋಡಿಕೆ ಉಟ್ಟೋ ದೇವ್ರುಗೆ ಗೊತ್ತು..ಒಮ್ಮೆ ಅತ್ತ ಬೇಗ ಕಣ್ಣ್ ಮುಚ್ಚಿರೆ ಸಾಕಿತ್ತ್.
ಈಗಲೇ ಕಣ್ಣ್ ಮುಚ್ಚಿ ಹಾಂಗೆ ಒರ್‍ಗಿ ಮಲ್ಗಿ ಉಗ್ಗಪ್ಪ..ಕೆಮ್ಮುಲು ಕಮ್ಮಿ ಅದು.. ಪಿಳ್ಳಿಕ ಹೇಳಿಕಂಡ್ ಹೋದೊ, ಅವ್ಕೆ ಅಜ್ಜ ಎಂತ ಹೇಳ್ದ್ಂತ ಅರ್ಥನೇ ಆತ್ಲೆ.
ಅಜ್ಜ ಹಾಂಗೆ ಮೊಣ್ಣ್ ಚಿಂಟೆಲಿ ಮಣೆ ಒರ್‍ಗಿಸಿ ಕಣ್ಣ್ ಮುಚ್ಚಿದೊ..

Untitled-2ಭವಾನಿಶಂಕರ ಅಡ್ತಲೆ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.