ತೋಟಗಾರಿಕಾ ಇಲಾಖೆ

Advt_Headding_Middle

ಕೊಳೆ ರೋಗದಿಂದ ಅಡಿಕೆ ಮರ ಉಳಿಸಿಕೊಳ್ಳಲು ಸಲಹೆ
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿರುವುದರಿಂದ ಅದು ಅಡಿಕೆ ಬೆಳೆ ಮೇಲೆ ಪರಿಣಾಮವಾಗಲಿದೆ. ಇದಕ್ಕೆ ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳ ಕೊಚ್ಚಣೆ ಮತ್ತು ಸೂರ್ಯನ ಬೆಳಕಿನ ಕೊರತೆ ಮುಂತಾದ ಹಲವು ಕಾರಣಗಳು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೊಳೆ ರೋಗವು ಉಲ್ಬಣಗೊಂಡಿದೆ. ಕೊಳೆ ರೋಗದಿಂದ ಎಳೆ ಕಾಯಿ ಉದುರುವಿಕೆ, ಅಲ್ಲದೆ ಬೆಳೆದ ಕಾಯಿಗಳಲ್ಲಿ ನಿರ್‍ಗೊಳೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಬಲಿತ ಕಾಯಿಗಳ ಮೇಲೆ ಬೂದುಗೊಳೆ ಬಂದು ಹಾನಿ ಹೆಚ್ಚಾಗುವ ಸಂಭವವಿದೆ. ಚಳಿಗಾಲ ಪ್ರಾರಂಭವಾಗುವ ಅಕ್ಟೋಬರ್ ತಿಂಗಳಿಂದ ಫೆಬ್ರವರಿವರೆಗೂ ಅಡಿಕೆ ಕಾಯಿ ಕೊಳೆಗೆ ಕಾರಣವಾಗುವ ಶಿಲೀಂದ್ರ ರೋಗಾಣುಗಳು ಅಭಿವೃದ್ಧಿಹೊಂದಿ ಶಿರಕೊಳೆ ಮತ್ತು ಸುಳಿಕೊಳೆ ಬಂದು ಅಡಿಕೆ ಮರಗಳು ಸಾಯುವ ಸಂಭವ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಹೆಚ್ಚಾಗುವ ಮಂಜಿನ ಹನಿಗಳು ರೋಗಾಣುಗಳ ಅಭಿವೃದ್ಧಿಗೆ ಅನುಕೂಲಕರ ವಾಗಿರುತ್ತದೆ. ಅಡಿಕೆ ಕಾಯಿ ಕೊಳೆಗೆ ಕಾರಣವಾದ ಶಿಲೀಂದ್ರ ರೋಗಾಣುಗಳು ಸೋಗೆಗಳ ಬುಡಗಳ ಭಾಗಗಳಲ್ಲಿ ಅಭಿವೃದ್ಧಿ ಹೊಂದಿ ಹಾಳೆಗಳನ್ನು ಕೊಳೆಸುವುದರಿಂದ ಸೋಗೆಗಳು ಹಳದಿಯಾಗಿ ಕೊಳೆತು ಒಣಗುತ್ತವೆ. ಒಂದರ ನಂತರ ಇನ್ನೊಂದು ಸೋಗೆ ಹೊರಭಾಗದಿಂದ ಕೊಳೆತು ಕೊನೆಗೆ ಶಿರಕೊಳೆ ಅಥವಾ ಸುಳಿಕೊಳೆಯಿಂದಾಗಿ ಮರ ಸಾಯುತ್ತದೆ.
ಆದುದರಿಂದ ಈ ವರ್ಷ ಮರ ಉಳಿಸಿಕೊಳ್ಳುವ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆದ ಕಾರಣ ಈ ಕೆಳಕಂಡ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.
* ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತೆಗೆದು ಸುಡುವುದು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.
* ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆಮಾಡುವುದು.
* ಅಡಿಕೆ ಕೊಯ್ಲಿನ ಸಮಯದಲ್ಲಿ ಒಣಗಿದ ಹಿಂಗಾರವನ್ನು ಕಡ್ಡಾಯವಾಗಿ ತೆಗೆಯುವುದು.
* ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
* ತೋಟದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ, ಭತ್ತದ ಹೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕುವುದು( ಎಕರೆಗೆ 3-4 ಕಡೆ ಈ ರೀತಿ ಮಾಡುವುದು).
* ರೋಗ ಪೀಡಿತ ಮರಗಳಿಗೆ ಆಗಸ್ಟ್-ಸಪ್ಟಂಬರ್ ಅವಧಿಯಲ್ಲಿ ಶೇ.1ರ ಬೋರ್ಡೋ ದ್ರಾವಣ ಅಥವಾ ಶೇ.೦.2ರ ಮೆಟಲಾಕ್ಸಿಲ್ ಎಂ.ಜಡ್(2ಗ್ರಾಂ ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ.೦.3ರ ತ್ರಾಮದ ಆಕ್ಸಿಕ್ಲೋರೈಡ್ (3 ಗ್ರಾಂ. ೧ಲೀ.ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಹಾಗೂ ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು.
* ಮುಂಜಾಗ್ರತೆ ಕ್ರಮವಾಗಿ ಶಿರಿಕೊಳೆ ರೋಗ ಕಂಡು ಬಂದಲ್ಲಿ ಶೇ.೦.2ರ ತಾಮ್ರದ ಆಕ್ಸಿಕ್ಲೋರೈಡ್ ಮತ್ತು ಶೇ.೦.೦5 ಸ್ಟ್ರೆಪ್ಟೊಸೈಕ್ಲಿನ್ ದ್ರಾವಣದಿಂದ ಶಿರ ಭಾಗಗಳನ್ನು (ತೊಂಡೆ ಭಾಗ ನೆನೆಸುವುದು)
* ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 1೦-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ 14೦:4೦:14೦ ಗ್ರಾಂ.ಸಾ.ರಂ.ಪೊ) ಸಪ್ಟಂಬರ್-ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸ್ಸು ಮಾಡಿದ ಶೇ.5೦ ರಷ್ಟು ರಸಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ, ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ.
* ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ.1ರ ಬೋರ್ಡೋ ದ್ರಾವಣ ಅಥವಾ ಶೇ.೦.3ರ ಅಕೋಮಿನ್/ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸುವುದು, ಪ್ರತಿ ಮರಕ್ಕೆ ಸುಮಾರು 5ಲೀ ದ್ರಾವಣ ಬೇಕಾಗುವುದು.
* ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲೀಂದ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ ಎಂ.ಜಡ್ ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದಾಗಿದೆ.
* ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದ್ದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹು ದಾಗಿದೆ.
ವಿಶೇಷ ಸೂಚನೆ :
ಸದರಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ರೈತರು, ತಾವು ಖರೀದಿಸುವ ಮೈಲುತುತ್ತು ಮತ್ತು ಇತರೆ ಮೇಲೆ ನಮೂದಿಸಿರುವ ವಿವಿಧ ಸಸ್ಯ ಸಂರಕ್ಷಣಾ ಔಷಧಿಗಳಲ್ಲಿ, ತೋಟಗಾರಿಕೆ ಇಲಾಖೆಯಿಂದ ಶೇ.5೦ ರಂತೆ ಪ್ರತಿ ಹೆಕ್ಟೇರ್‌ಗೆ ರೂ.2೦೦೦/- ರಂತೆ ಗರಿಷ್ಠ 2.೦ ಹೆಕ್ಟೇರ್‌ವರೆಗೆ ರೂ.4೦೦೦ ಸಹಾಯಧನ ಪಡೆಯಬಹುದಾಗಿದ್ದು, ರೈತರು ಅರ್ಜಿ, ಪಹಣೆ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿದ ಟಿನ್ ಸಂಖ್ಯೆ ಇರುವ ಬಿಲ್ಲಿನೊಂದಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.