ಬೀರಮಂಗಲ ವಾರ್ಡ್‌ನಲ್ಲಿ ಮಾದರಿ ವಾರ್ಡ್ ಅಭಿಯಾನ – ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳ ಸರಮಾಲೆ

Madari wardnedege namma nadige Beeramangala ward (2)

ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ…

ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದರಿ ವಾರ್ಡ್‌ನೆಡೆಗೆ ನಮ್ಮ ನಡಿಗೆ ಅಭಿಯಾನವು ಜು.೩೦ರಂದು ಬೀರಮಂಗಲ ವಾರ್ಡ್‌ನ ಚರ್ಚೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.

Madari wardnedege namma nadige Beeramangala ward (1)


ವಾರ್ಡ್ ವ್ಯಾಪ್ತಿಯಲ್ಲಿ ಹತ್ತಾರು ಸಮಸ್ಯೆಗಳ ಕುರಿತು ವಾರ್ಡ್‌ನ ಜನರು ಹೇಳಿಕೊಂಡರು. ವಾರ್ಡ್ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿಕೊಂಡರು. ಬೀರಮಂಗಲ ವಾರ್ಡ್‌ನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಚರಂಡಿ ವ್ಯವಸ್ಥೆ ಇಲ್ಲ. ಖಾಸಾಗಿಯವರು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಕಸದ ಲಾರಿ ವಾರ್ಡ್‌ಗೆ ಬರುತ್ತಿಲ್ಲ. ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ವಿದ್ಯುತ್ ಕಂಬಕ್ಕೆ ಕಾಡುಬಳ್ಳಿಗಳು ಸುತ್ತುವರಿದರೂ ಮೆಸ್ಕಾಂನವರು ಸರಿಪಡಿಸುತ್ತಿಲ್ಲ. ನ.ಪಂ ಅಧಿಕಾರಿಗಳು ಜನ ಸಾಮಾನ್ಯರ ಮನವಿಗೆ ಸ್ಪಂದಿಸುತ್ತಿಲ್ಲ, ಮತ್ತಿತರ ಸಮಸ್ಯಗಳ ಕುರಿತು ಜನರು ಹೇಳಿಕೊಂಡರು. ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹಾಗೂ ಸ್ಥಳೀಯ ವಾರ್ಡ್ ಸದಸ್ಯೆ ಸುನಿತಾ ಮೊಂತೆರೊ ಜನರ ಸಮಸ್ಯೆಗಳಿಗೆ ಉತ್ತರಿಸಿದರು.
Madari wardnedege namma nadige Beeramangala ward 4

ಚರ್ಚ್ ಧರ್ಮಗುರು ವಿಲ್ಸನ್ ಡಿ’ಸೋಜಾ ಶುಭಹಾರೈಸಿದರು. ಸಭೆಯಲ್ಲಿ ಎಂ. ಭಾಸ್ಕರ ರಾವ್ ಬೀರಮಂಗಲ, ಸುನಿಲ್ ಕುಮಾರ್ ಮೋಂಟಡ್ಕ, ಕಿರಣ್ ಮಾಡ್ತ, ರಮೇಶ್, ಫೆಡ್ರಿಕ್ ಮೊಂತೆರೊ, ಕಾರ್ಯಪ್ಪ ಗೌಡ, ಶೇಕಾಲಿ, ಸುದೀಶ್ ಕುಮಾರ್, ನವೀನ್ ಮಾಡ್ತ, ಸುನಿಲ್ ಮಸ್ಕರೇನಸ್, ರವಿಪ್ರಕಾಶ್ ಎಂ.ಕೆ. ರಾಮಕೃಷ್ಣ ಬೀರಮಂಗಲ, ಡಾ| ಪೂವಪ್ಪ ಕಣಿಯೂರು, ವೆಂಕಟ್ರಮಣ ಕೆ.ಎಸ್, ಗುರುಸ್ವಾಮಿ ಬೀರಮಂಗಲ, ಕೆ. ಜಗನ್ನಾಥ ಶೆಟ್ಟಿ, ಕೆ.ಆರ್. ಕೃಷ್ಣ ರಾವ್, ಪ್ರಸನ್ನ ಡಿ’ಸೋಜ, ಚಿದಾನಂದ ಮೋಟಂಡ್ಕ, ಹಾಜಿರ, ಗಿರಿಯಪ್ಪ ಗೌಡ, ಗೋಪಾಲ ರಾವ್, ದಾಸಪ್ಪ ಬೀರಮಂಗಲ, ಜಗಜೀವನ್, ಮಹೇಶ್, ಬೀರಮಂಗಲ, ಡೇವಿಡ್ ಧೀರ ಕ್ರಾಸ್ತ, ಎಂ. ವೆಂಕಪ್ಪ ಗೌಡ, ಪಿ.ವಿ ಮೊಹನ ಮಾಸ್ತರ್, ಸುಜಯ ಕೃಷ್ಣ, ಸುಜಯಕುಮಾರಿ, ಜುಲಿಯಾ ಕ್ರಾಸ್ತ, ಪ್ರಕಾಶ್ ಬಂಗ್ಲೆಗುಡ್ಡೆ, ಗಣಪತಿ, ಶಿವಮ್ಮ, ರಝಾಕ್ ಚೆನ್ನಪ್ಪ ಗೌಡ, ಗಿರೀಯಪ್ಪ ಗೌಡ, ಬಿ. ಶಿವಯ್ಯ, ಬಿ ಐತ್ತಪ್ಪ, ರಂಗ, ವಸಂತ ಕುಮಾರ್, ತಾಜುದ್ಧೀನ್, ಜನಪ್ರೀಯ, ಡೊಲ್ಪಿನ್ ರಾಡ್ರಿಗಸ್, ಕೇಶವ ಬೀರಮಂಗಲ, ದೀಪಕ್ ಜೋನ್ ಲಬೋ, ಪ್ರಭಾಕರ ಬೀರಮಂಗಲ, ಜುಲಿಯಟ್ ಲೀನಾ ಫೆರ್ನಾಂಡಿಸ್, ಕೈರುನ್ನಿಸಾ, ಲಕ್ಷ್ಮಣ ಶೆಣೈ, ಅನಿತಾ ಮಸ್ಕರೇನಸ್, ಜುಲಿಯಟ್ ಡಿ’ಸೋಜ, ಜಾನೆಟ್ ರೊಡ್ರಿಗಸ್, ಮೊಂತಿ ಲಬೋ, ಚಂದ್ರವಾತಿ ಬಿ, ಅಪೋಲಿಯ ಡಿ’ಸೋಜ, ಅಜಿತ್.ಬಿ.ಟಿ, ಜತ್ತಪ್ಪ ಜೆ.ಪಿ, ಹೆಚ್.ಎ. ಗಣಪತಿ, ಉಮಾದೇವ್ ಉಪಸ್ಥಿತರಿದ್ದರು. ಸುದ್ದಿ ಸಿ.ಇ.ಒ. ಶ್ರೇಯಸ್ ಊರುಬೈಲು ಸಮಾರೋಪ ಮಾತುಗಳನ್ನಾಡಿದರು. ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಸುದ್ದಿ ಚಾನೆಲ್‌ನ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಸಂವಾದ ನಡೆಸಿಕೊಟ್ಟರು. ಸುದ್ದಿ ಪ್ರತಿಕೆಯ ಶಾಹಿನ ಎಸ್.ಯು ಸ್ವಾಗತಿಸಿದರು, ದಯಾನಂದ ಕೊರತ್ತೋಡಿ ವಂದಿಸಿದರು, ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *