ಕಾಯರ್ತೋಡಿ ತಾಲೂಕು ಮಟ್ಟದ ಗೂಡುದೀಪ ಹಾಗೂ ಬಲೀಂದ್ರ ಅಲಂಕಾರ ಸ್ಪರ್ಧೆ

Kayarthodi  (3)ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರಬಳಗ ಕಾಯರ್ತೋಡಿ ಇದರ ವತಿಯಿಂದ ತಾಲೂಕು ಮಟ್ಟದ ಬಲೀಂದ್ರ ಅಲಂಕಾರ ಹಾಗೂ ಗೂಡುದೀಪ ಸ್ಪರ್ಧೆಯು ಕಾಯರ್ತೋಡಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

Kayarthodi  (2)ಸ್ಪರ್ಧೆಯ ತೀರ್ಪುಗಾರರಾಗಿ ಎ.ಟಿ. ಕುಸುಮಾಧರ , ಮೋಹನ ಮಾಸ್ತರ್ ಪೆರಾಜೆ, ನಾರಾಯಣ ಕಾಯರ್ತೋಡಿ ಭಾಗವಹಿಸಿದ್ದರು. ಚಂದ್ರಶೇಖರ ಕುದ್ಪಾಜೆ ಉಪಸ್ಥಿತರಿದ್ದರು. ಬಲೀಂದ್ರ ಸ್ಪರ್ಧೆಯಲ್ಲಿ ನಾರಾಯಣ ನಾಯ್ಕ ಪ್ರಥಮ, ವಸಂತ ಕಾಯರ್ತೋಡಿ ದ್ವಿತೀಯ, ಲಿಂಗಪ್ಪ ಗೌಡ ಕುದ್ಪಾಜೆ ತೃತೀಯ ಸ್ಥಾನ ಪಡೆದುಕೊಂಡರು. ಗೂಡುದೀಪ ಸ್ಪರ್ಧೆಯಲ್ಲಿ ಉಮೇಶ ಆಚಾರ್ಯ ಕಾಯರ್ತೋಡಿ ಪ್ರಥಮ, ದೇವಿಪ್ರಸಾದ್ ಜಿ.ಯು ದ್ವಿತೀಯ, ಜೀವನ್ ಮತ್ತು ಸಂದೇಶ್ ಕಾಯರ್ತೋಡಿ ತೃತೀಯ ಸ್ಥಾನ ಪಡೆದುಕೊಂಡರು. ಸಂಘದ ಅಧ್ಯಕ್ಷ ಜಯರಾಮ್ ಪಿ.ಜಿ. ಅಧ್ಯಕ್ಷತೆ ವಹಿಸಿದ್ದರು. ದೇವಿಪ್ರಸಾದ್ ಎ. ಸ್ವಾಗತಿಸಿ, ಚಿದಾನಂದ ಕುದ್ಪಾಜೆ ವಂದಿಸಿದರು. ದೇವಿಪ್ರಸಾದ್ ಜಿ.ಯು. ಕಾರ್ಯಕ್ರಮ ನಿರೂಪಿಸಿದರು.

Kayarthodi  (1)

About The Author

Related posts

Leave a Reply

Your email address will not be published. Required fields are marked *