ಜಯನಗರ ಮಿಲಿಟರಿ ಗ್ರೌಂಡ್ ಸರ್ವೆ

Jayanagara sarve copyಜಯನಗರ ಮಿಲಿಟರಿ ಗ್ರೌಂಟ್‌ಗೆ ಸಂಬಂಧ ಪಟ್ಟ ಅಲ್ಲಿಯ ನಿವಾಸಿಗಳ ಅಡಿಸ್ಥಳ ಮಂಜೂರಾತಿಯ ವಿಷಯದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸುಳ್ಯ ತಹಶೀಲ್ದಾರ್‌ರಿಗೆ ನಿವೇಶನದ ಸರ್ವೆ ನಕ್ಷೆಯ ಮಾಹಿತಿಯನ್ನು ತಿಳಿದು ಜಿಲ್ಲಾಧಿಕಾರಿಗಳಿಗೆ ಅದರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಆದೇಶಿಸಿದ ಹಿನ್ನಲೆಯಲ್ಲಿ ನ.9 ರಂದು ತಾಲೂಕು ಕಚೇರಿಯ ಸರ್ವೆಯರ್ ಸಿಂಗಾರ ಶೆಟ್ಟಿಯವರ ನೇತೃತ್ವದಲ್ಲಿ ಅಧೀಕ್ಷಕ ವೆಂಕಟೇಶ್ ರವರ ನಿರ್ದೇಶನ ಮೆರೆಗೆ ಮಂಗಳೂgರು ಖಾಸಗಿ ಸಂಸ್ಥೆಯ ಜಿ.ಪಿ.ಎ ಸರ್ವೆ ಮೂಲಕ ಕೇವಲ ನಿವೇಶನದ ಸುತ್ತಲತೆ ಮಾತ್ರ ಸರ್ವೆ ನಡೆಸಲಾಗುತ್ತಿದ್ದು, ಈ ಸರ್ವೆಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಮುಂದಿನ ಕಾರ್ಯವನ್ನು ಸರ್ವೆಯ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ನ.ಪಂ. ಸದಸ್ಯೆ ಜಾನಕಿ ನಾರಾಯಣ, ಹಕ್ಕುಪತ್ರ ಹೋರಾಟ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸಂಚಾಲಕ ಜಗನ್ನಾಥ, ಸಹಸಂಚಾಲಕ ಹಸೈನಾರ್ ಜಯನಗರ, ಸಮಿತಿ ಗೌರವ ಸಲಹೆಗಾರರಾದ ಚಿನ್ನಪ್ಪ ಮಾಸ್ತರ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *