ಹಳೆಗೇಟು ಬೈಕ್-ಕಾರ್ ಢಿಕ್ಕಿ

ಹಳೆಗೇಟು ಪೆಟ್ರೋಲ್ ಬಂಕ್ ಬಳಿ ಬೈಕ್ ಮತ್ತು ಕಾರ್ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಡಿ.11 ರಂದು ಸಂಭವಿಸಿದೆ. ಬೆಂಗಳೂರು ನಿವಾಸಿ ಕಿರಣ್ ಎಂಬವರು ತಮ್ಮ ಕುಟುಂಬಸ್ಥರ ಮದುವೆಗೆಂದು ಸೋಣಂಗೇರಿ ಬಂದಿದ್ದರು.

ಅವರು ಪೆಟ್ರೋಲ್ ಹಾಕಲೆಂದು ಬೈಕ್‌ನಲ್ಲಿ (ಕೆ.ಎ.21.ಆರ್.4199) ಸುಳ್ಯ ಕಡೆಯಿಂದ ಪೈಚಾರ್‌ಗೆ ಬರುವ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಹರಿಹರಪಲ್ಲತ್ತಡ್ಕದ ಲೋಕೇಶ್ ಎಂಬವರ ಮಾರುತಿ ಆಲ್ಟೋ ಕಾರಿಗೆ (ಕೆ.ಎ.21.ಪಿ.1024) ಪರಸ್ಪರ ಢಿಕ್ಕಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸವಾರರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಕೂಡ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *