Breaking News

“ಯುವ ಸ್ಪಂದನ-2017” ಏಕದಿನದ ಶಿಬಿರ

Advt_Headding_Middle
Advt_Headding_Middle

katholic programe copy

ಭಾರತೀಯ ಕಥೋಲಿಕ್ ಯುವ ಸಂಚಲನ ಸುಳ್ಯ ಇದರ ವತಿಯಿಂದ “ಯುವ ಸ್ಪಂದನ-೨೦೧೭” ಏಕದಿನದ ಶಿಬಿರ ಚರ್ಚ್ ಹಾಲ್ ನಲ್ಲಿನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ . ವಿನ್ಸೆಂಟ್ ಡಿಸೋಜ ಇವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಸಿ.ಲೂಸಿ, ಸಿ. ಗ್ರೇಸಿ, ಸಿ.ಜಾನೆಟ್, ಪಾಲನಾ ಸಮಿತಿ ಉಪಾಧ್ಯಕ್ಷರಾದ ಪ್ರಸನ್ನ ಪೀಟರ್ ಡಿಸೋಜ, ಕಾರ್ಯದರ್ಶಿ ಸಂತೋಷ್ ಕ್ರಾಸ್ತಾ, ಐ.ಸಿ.ವೈ.ಯಂ. ಸಚೇತಕ ಡೇವಿಡ್ ಧೀರ ಕ್ರಾಸ್ತಾ, ಹಾಗೂ ಐ.ಸಿ.ವೈ.ಯಂ ಅಧ್ಯಕ್ಷ ಶರೋನ್ ಡಿಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಮೇರಿ ಸುಕನ್ಯ ಕಾರ್ಯಕ್ರಮ ನಿರೂಪಿಸಿದರು. ಶರೋನ್ ಡಿಸೋಜರವರು ಸ್ವಾಗತಿಸಿ ಶಿಲ್ಪ ಬ್ರಿಜಿತ್ ಡಿಸೋಜ ರವರು ಧನ್ಯವಾದ ಸಲ್ಲಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಮ್ಸಿ ಜಾನ್ ಹಾಗೂ ಮಂಗಳೂರು ಸಂತ ಜೋಸೇಫರ ಸೆಮಿನರಿಯ ಬ್ರದರ್ ಆಗಿರುವ ಬ್ರದರ್ ಜೋ ಪ್ರೇಮ್ ಬ್ರಿಟ್ಟೊ ಇವರು ಯುವ ಮನೋವಿಜ್ಞಾನ ಹಾಗೂ ಆರೋಗ್ಯ ನೈಮಲ್ಯತೆ ಕುರಿತು ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.