Breaking News

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ವಲಯ ಕುಟುಂಬ ಸಮ್ಮಿಲನ ಮತ್ತು ರೋಟರ‍್ಯಾಕ್ಟ್ ಕ್ಲಬ್ ಪದಗ್ರಹಣ

Advt_Headding_Middle
Advt_Headding_Middle

ಬೆಳ್ಳಾರೆ ಟೌನ್ ರೋಟರಿ ಕ್ಲಬ್‌ನ ವಲಯ ೫ ಕುಟುಂಬ ಸಮ್ಮಿಲನ ಹಾಗೂ ರೋಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ರೊಟರಿ ಕ್ಲಬ್ ಅಧ್ಯಕ್ಷ ರೊ| ವಿನಯ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಸೆ.೫ ರಂದು ಬೆಳ್ಳಾರೆ ರೊ| ಮಾಧವ ಗೌಡರ ಧರ್ಮಶ್ರೀ ನಿಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೊ| ಪಿಎಚ್‌ಎಫ್. ಜ್ಞಾನ ವಸಂತ ಶೆಟ್ಟಿಯವರು ಮಾತನಾಡಿ ರೋಟರಿ ಸಂಸ್ಥೆ ನಿರಂತರ ಕೆಲಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜಕ್ಕೆ ಬೆಳಕು ನೀಡಿದೆ. ಜನರಲ್ಲಿ ಬುದ್ದಿಯೊಂದಿಗೆ ವಿವೇಕ ಜಾಗೃತವಾಗಬೇಕು. ರೋಟರಿ ಅನೇಕ ಕೊಡುಗೆಗಳನ್ನು ನೀಡುವುದರ ಮುಖಾಂತರ ಜನೋಪಯೋಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಜ್ಞಾನ ವಸಂತ ಶೆಟ್ಟಿ ಮತ್ತು ಅವರ ಪತ್ನಿ ಶ್ರೀಮತಿ ಅರುಂದತಿ ಶೆಟ್ಟಿಯವರನ್ನು ಮಾಧವ ಗೌಡ ಮತ್ತು ಅವರ ಪತ್ನಿ ಶ್ರೀಮತಿ ನೀರಜಾಕ್ಷಿ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು. ರೊ|ಪಿಎಚ್‌ಎಫ್| ದಿವಾಕರ ನಿಡ್ವಣ್ಣಾಯರನ್ನು ರೋಟರಿ ಕ್ಲಬ್ ಅಧ್ಯಕ್ಷ ವಿನಯ ಕುಮಾರ್ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.