Breaking News

ಏನೆಕಲ್ಲು ಮುತ್ಲಾಜೆ ಧನಂಜಯ ನಿಧನ

Advt_Headding_Middle
Advt_Headding_Middle

 Suddi logo copy

ಏನೆಕಲ್ಲು ಗ್ರಾಮದ ಮುತ್ಲಾಜೆ ಧನಂಜಯ (೩೩ವ.) ಇಂದು ತೀವ್ರ ಅಸೌಖ್ಯದಿಂದ ಮಂಗಳೂರು ಅಸ್ಪತ್ರೆಗೆ ಕೊಂಡೊಯ್ಯುವಾಗ ೧೦೮ ನಲ್ಲಿ ಮೃತಪಟ್ಟರು.

ಕೃಷಿಕರಾಗಿದ್ದ ಧನಂಜಯರು ತೀವ್ರ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆ ತೆರಳಿ ಔಷದಿ ಪಡೆದುಕೊಂಡು ಬಸ್ಸಲ್ಲಿ ಬರುತ್ತಿದ್ದಾಗ, ಬಸ್ಸು ಕಡಬ ತಲುಪುವಷ್ಟರಲ್ಲಿ ಧನಂಜಯರು ಬಸ್ಸಲ್ಲಿ ಬೊಬ್ಬೆ ಹಾಕಿದರೆನ್ನಲಾಗಿದೆ. ಅಲ್ಲಿಂದ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಕೊಡುತ್ತಿದ್ದಾಗ ವೈದ್ಯರಿಗೆ ಹೊಡೆದು ಅಲ್ಲಿಂದ ಓಟಕ್ಕಿತ್ತರು. ಕೂಡಲೆ ಅಲ್ಲಿದ್ದ ಕೆಲವರು ಅವರನ್ನು ಹಿಡಿದು _ ೧೦೮ ವಾಹನದಲ್ಲಿ ಹಾಕಿ ಮಂಗಳೂರಿಗೆ ಕರೆದೊಯ್ಯುವಾಗ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.