Breaking News

ಭಾರತೀಯ ತೀಯಾ ಸಮಾಜದ ವತಿಯಿಂದ ಗುರುನಾರಾಯಣ ಜಯಂತಿ ಆಚರಣೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಭಾರತೀಯ ತೀಯಾ ಸಮಾಜದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯ ಜಯಂತಿಯ ಆಚರಣೆಯು ಸೆ. ೬ರಂದು ಹೋಟೆಲ್ ದ್ವಾರಕದ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ವಹಿಸಿದ್ದರು. ನಾರಾಯಣ ಗುರುಸ್ವಾಮಿಯವರ ಬಗ್ಗೆ ಗುಣಗಾನ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುರೇಶ್, ಅನಿತಾ ಮಂಜುನಾಥ್, ಸುನಿಲ್ ಕೆ.ಸಿ., ನಾಗೇಶ್ ಅಡ್ಕಾರು, ಕುಮಾರನ್ ಮಾವಂಜಿ, ಅಶೋಕ ಅಡ್ಕಾರು, ಶ್ರೀಧರ ಕಲ್ಲುಗುಂಡಿ, ಶಿಲ್ಪಾ ಸುದೇವ್, ಪುರುಷೋತ್ತಮ ನಾವೂರು, ಮಾಧವ ಮಂಡೆಕೋಲು, ಸುಂದರಿ ಮುಂಡಡ್ಕ, ಉಪಸ್ಥಿತಿರಿದ್ದರು. ಕಾರ್ಯಕ್ರಮದಲ್ಲಿ ಗುರುನಮನ ಸಲ್ಲಿಸಿದ ಬಳಿಕ ಅಗಲಿದ ಸಮಾಜದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಭಾನುಮತಿ ಹಾಗೂ ಡಾ. ಹಿಮಕರರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.