ತಾಳೆ ಬೆಳೆ ಅಭಿವೃದ್ಧಿ : ರೈತರಿಗೆ ಹೊರ ಜಿಲ್ಲೆ ಅಧ್ಯಯನ ಪ್ರವಾಸಕ್ಕೆ ಆಹ್ವಾನ

Advt_Headding_Middle
Advt_Headding_Middle

Suddi logo copy

೨೦೧೭-೧೮ ನೇ ಸಾಲಿನ ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ೧ ದಿನದ ಹೊರಜಿಲ್ಲೆ ಅಧ್ಯಯನ ಪ್ರವಾಸ ವನ್ನು ಸೆ.೨೦ರಂದು ಹಮ್ಮಿಕೊಂಡಿದ್ದು, ಆಸಕ್ತ ರೈತರು ಸೆ.೧೬ರೊಳಗೆ ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೋಂದಾಯಿಸುವಂತೆ ವಿನಂತಿಸಲಾಗಿದೆ.
ಸಹಾಯಧನ : ೨೦೧೭-೧೮ ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಅಳವಡಿಕೆಗೆ ಸಹಾಯಧನ ಕಾರ್ಯಕ್ರಮವಿದ್ದು, ಆಸಕ್ತ ರೈತರು ಅಧಿಕೃತ ಸಂಸ್ಥೆ/ಡೀಲರ್ ರವರ ಡಿಸೈನ್, ದರಪಟ್ಟಿಯೊಂದಿಗೆ ಆರ್.ಟಿ.ಸಿ, ಜಾಗದ ನಕ್ಷೆ,ಆಧಾರ್, ರೇಷನ್ ಕಾರ್ಡ್,ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿಯೊಂದಿಗೆ ಸೆ.೨೫ರೊಳಗೆ ಹೆಸರು ನೋದಾಯಿಸುವುದು.
ತುಂತುರು ನೀರಾವರಿಗೆ ಎಕ್ರೆಗೆ ೨೦,೩೦೧/-ರಿಂದ ೩೨,೯೪೬/- ಪ್ರತೀ ಹೆಕ್ಟೇರ್‌ಗೆ ಸಹಾಯಧನದ್ದು, ಹನಿ ನೀರಾವರಿಗೆ ಅಂತರದ ಆಧಾರದ ಮೇಲೆ ೧೫,೬೧೫/- ರಿಂದ ೨೮,೦೪೦/- ರವರೆಗೆ ಪ್ರತೀ ಎಕ್ರೆಗೆ ಸಹಾಯಧನ ಪಡೆಯಬಹುದು.
ಸುಳ್ಯ ತಾಲೂಕಿನ ರೈತರಿಗೆ ೨೦೧೭-೧೮ ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವೈಜ್ಞಾನಿಕ ಜೇನುಗಾರಿಕೆಯ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದಡಿ ಜೇನು ಕೃಷಿಕರಿಗೆ ಹಾಗೂ ಜೇನು ಕೃಷಿ ಮಾಡಲು ಆಸಕ್ತಿ ಇರುವವರಿಗೆ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ೭ ದಿನಗಳ ತರಬೇತಿ ಕಾರ್ಯಕ್ರಮ ಮತ್ತು ಹೊರ ರಾಜ್ಯ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಆಸಕ್ತ ಫಲಾನುಭಗಳಿಗೆ ಜೇನು ಪೆಟ್ಟಿಗೆ, ಕುಟುಂಬ, ಸ್ಟ್ಯಾಂಡ್‌ಗಳಿಗೆ ಸಹಾಯಧನವನ್ನೂ ನೀಡಲಾಗುತ್ತದೆ. ತರಬೇತಿ ಕಾರ್ಯಕ್ರಮದ ರೈತರಿಗೆ ದಿನಭತ್ಯೆ, ಪ್ರಯಾಣ ಭತ್ಯೆ, ಊಟ ಉಪಹಾರದ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.
ಜೇನು ಸಾಕಾಣಿಕೆ ಮಾಡುವ ರೈತರು ಹಾಗೂ ಆಸಕ್ತರಿರುವ ರೈತರು ಅರ್ಜಿ ನಮೂನೆ, ಭಾವ ಚಿತ್ರ, ಪಹಣಿ ಪತ್ರಗಳೊಂದಿಗೆ ಸೆ.೧೫ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಸುಳ್ಯ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.