ಕೆ.ಎಸ್.ಎಸ್ ಕಾಲೇಜಿನಲ್ಲಿ ಅಗ್ನಿ ದುರಂತ -ಪ್ರಾತ್ಯಕ್ಷತೆ

Advt_Headding_Middle
Advt_Headding_Middle

KSS College fair and safety copy

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಮತ್ತು ರೋವರ‍್ಸ್ & ರೇಂಜರ‍್ಸ್ ಘಟಕದ ಆಶ್ರಯದಲ್ಲಿ ಸುಳ್ಯ ಅಗ್ನಿ ಶ್ಯಾಮಕ ದಳದ ಸಹಯೋಗದೊಂದಿಗೆ ಅಗ್ನಿ ದುರಂತ ಪ್ರಾತ್ಯಕ್ಷತೆ ಕಾರ್ಯಕ್ರಮ ನಡೆಯಿತು.
ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಕಾಲೇಜಿನ ವಠಾರದಲ್ಲಿ ಶನಿವಾರ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಎಸ್.ಎಸ್.ಪಿ.ಯು ಪದವಿ ಪೂರ್ವ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಕಸ್ಮಾತ್ ಬೆಂಕಿ ಸಂಭವಿಸಿದಾಗ ಯಾವ ರೀತಿ ಬೆಂಕಿ ಆರಿಸಬಹುದು ಎಂದು ಪ್ರಾತ್ಯಕ್ಷತೆಯನ್ನು ಮಂಗಳೂರು ನಿವೃತ್ತ ಜಿಲ್ಲಾ ಅಗ್ನಿ ಶ್ಯಾಮಕ ಅಧಿಕಾರಿ ಒಬಯ್ಯರವರು ನಡೆಸಿಕೊಟ್ಟರು.
ಕಾಲೇಜು ಆವರಣದಲ್ಲಿ ತಾತ್ಕಲಿಕ ಮನೆ ನಿರ್ಮಿಸಿ ಬೆಂಕಿ ಹೊತ್ತಿಕೊಂಡಾಗ ಅದನ್ನು ಯಾವ ರೀತಿ ಆರಿಸಬೇಕೆಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸುಳ್ಯ ಅಗ್ನಿ ಶ್ಯಾಮಕ ಠಾಣಾಧಿಕಾರಿ ಲೋಕೇಶ್, ಸಿಬ್ಬಂದಿಗಳಾದ ಸುಧೀರ್, ಕಲ್ಲಪ್ಪ, ರಮೇಶ್ ರಾಥೋಡ್, ಲೀಲಾಧರ್ ಹಾಗೂ ಶ್ರೀನಿವಾಸ್ ನಾಯಕ್ ಪ್ರಾತ್ಯಕ್ಷತೆಯಲ್ಲಿ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೋ. ಕೆ.ಆರ್ ಶೆಟ್ಟಿಗಾರ್ ಸುಳ್ಯ ಠಾಣಾ ಅಗ್ನಿ ಶ್ಯಾಮಕ ದಳದ ಸಿಬ್ಬಂದಿಗಳನ್ನು ಅಭಿನಂದಿಸಿದರು. ಉಪನ್ಯಾಸಕರಾದ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶಿವಪ್ರಸಾದ್ ಸ್ವಾಗತಿಸಿ, ಯೂತ್ ರೆಡ್ ಕ್ರಾಸ್ ಅಧಿಕಾರಿ ಲತಾ ಬಿ.ಟಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.