ಸೆ.21,22 : ಕೊಲ್ಲಮೊಗ್ರು ಶ್ರೀ ಅನ್ನಪೂರ್ಣೇಶ್ವರಿ ದೇವಿ ಹಾಗೂ ಮಲ್ಲಿಕಾರ್ಜುನ ಮತ್ತು ಪರಿವಾರ ದೇವತೆಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ

Advt_Headding_Middle
Advt_Headding_Middle

Suddi logo copy

ಕೊಲ್ಲಮೊಗ್ರು ಶ್ರೀ ಅನ್ನಪೂರ್ಣೇ ಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಹಾಗೂ ಮಲ್ಲಿಕಾರ್ಜುನ ಮತ್ತು ಪರಿವಾರ ದೇವತೆಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದ ಪುರ್ವೋತ್ತರ ಮೀಮಾಂಸಕರುರವರ ನೇತೃತ್ವದಲ್ಲಿ ಸೆ.21 ಮತ್ತು 22ರಂದು ನಡೆಯ ಲಿದೆ. ಸೆ. ೨೧ರಂದು ಬಹ್ಮಕೂರ್ಚ, ಪುಣ್ಯಾಹ ವಾಚನ, ದೇವನಾಂದಿ, ಕಂಕಣಧಾರಣೆ, ತೋರಣಪೂಜೆ, ಗ್ರಾಮ ದೇವತಾ ಪ್ರಾರ್ಥನೆ, ಕುಲದೇವತಾ ಪ್ರಾರ್ಥನೆ, ಗಣಹೋಮ, ನವಗ್ರಹಹೋಮ, ತಂತ್ರಕೂರ್ಚನ್ಯಾಸ ಮತ್ತು ರಾಕ್ಷೋಘ್ನ, ದಿಕ್ಷಾಲಬಲಿ ಆದಿವಾಸಹೋಮ, ಪ್ರಾಯಶ್ಚಿತ ಹೋಮ, ಮಂಡಲ ರಚನೆ, ಪಾರಾಯಣ ಆರಂಭ, ಕಲಶ ಸ್ಥಾಪನೆ, ಪೀಠ ಪ್ರತಿಷ್ಠೆ, ಪರಿವಾರ ದೇವತಾ ಪ್ರತಿಷ್ಠೆ, ದೀಪಸ್ತಂಭ ಪ್ರತಿಷ್ಠೆ ನಡೆಯಲಿದ್ದು, ಸೆ.೨೨ರಂದು ಅಷ್ಠಬಂಧ, ಪ್ರಾಣಪ್ರತಿಷ್ಠೆ, ಕಲಾ ಹೋಮ, ಪ್ರತಿಷ್ಠಾಹೋಮ, ಕಲಶಾ ಭಿಷೇಕ, ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪಲ್ಲಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. ೨೨ ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ವೇದ ವಿಜ್ಞಾನ ಮಂದಿರ ಶ್ರೀರಾಂಪುರ ಚಿಕ್ಕಮಗಳೂರು ಇದರ ಶ್ರೀ ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದ ಪುರ್ವೋತ್ತರ ಮೀಮಾಂಸಕರ ದಿವ್ಯ ಉಪಸ್ಥಿತಿ ಇರಲಿದೆ. ಸತ್ಯಪ್ರಶಾಂತಿ ಅದೈತ ಜ್ಞಾನ ಮಂದಿರ ಮಠ ಉಚ್ಚಂಗಿ ಯಸಳೂರು ಹೋಬಳಿ, ಸಕಲೇಶಪುರದ ಸ್ವಾಮೀಜಿ ಪರಮಪೂಜ್ಯ ಶ್ರೀ ತಿತ್‌ಸ್ವರೂಪ ಜ್ಞಾನಿ ಪ್ರಸನ್ನ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಮಾಜಿಕ ಮುಖಂಡ ವೆಂಕಪ್ಪ ಗೌಡ ದಬ್ಬಡ್ಕ ವಹಿಸಲಿದ್ದಾರೆ. ಮಂಗಳೂರು ೨೬ನೇ ವಾರ್ಡು ನಗರಪಾಲಿಕೆ ಕಾರ್ಪೊರೇಟರ್ ರಾಧಾಕೃಷ್ಣ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಅತಿಥಿಗಳಾಗಿ ಕುಕ್ಕೇಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ತಿಮ್ಮಪ್ಪ, ವೈದ್ಯರಾಗಿರುವ ಡಾ. ರಘು, ಸಹಕಾರಿ ಮುಖಂಡ ಬಿ ಬಾಲಕೃಷ್ಣ ಗೌಡ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ನಂದ, ಶಿಕ್ಷಣ ಪ್ರೇಮಿ ಭಾಸ್ಕರ ದೇವಸ್ಯ, ಗಡಿಕಲ್ಲು ವಿಷ್ಣುಮೂರ್ತಿ ಇದರ ಸಮಿತಿ ಅಧ್ಯಕ್ಷರಾದ ಬಿ.ಸಿ.ವಸಂತ್, ಕವಿಯತ್ರಿ ಲಲಿತಾಜ ಮಲ್ಲಾರ , ಸಾಮಾಜಿಕ ಮುಖಂಡ ಮಾಧವ ಚಾಂತಾಳ, ಪ್ರಗತಿಪರ ಕೃಷಿಕ ಕೆ.ಎಸ್. ಗಿರೀಶ್ ಭಟ್ ಇಡ್ಯಡ್ಕ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.