Breaking News

ಪಂಜ : ಗುರು ಸ್ಪಂದನ ಕಾರ್ಯಕ್ರಮ

Advt_Headding_Middle
Advt_Headding_Middle

panja guru spandana 2 copy

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೆ.೧೬ ರಂದು ಬಂಟ್ವಾಳದ ಗುರುಸ್ಪಂದನಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜದಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್. ಕೆಂಪಲಿಂಗಪ್ಪ ರವರು ಗುರುಸ್ಪಂದನ ಮಹತ್ವದ ಬಗ್ಗೆ ತಿಳಿಸಿದರು. ಸುಳ್ಯ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ, ಮಕ್ಕಳ ಶಿಕ್ಷಣ ಇಲಾಖೆ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ಸ್ವರ್ಣಲತಾ, ಅಧೀಕ್ಷಕರಾದ ಶ್ಯಾಂಪ್ರಸಾದ್ ಮಡ್ತಿಲ, ಶಿಕ್ಷಣ ಸಂಯೋಜಕರಾದ ಸುಂದರ ಕೇನಾಜೆ, ವಸಂತ ಏನೆಕಲ್, ಪದ್ಮನಾಭ ಭಾಗವಹಿಸಿದ್ದರು. ಕಚೇರಿ ಸಿಬ್ಬಂದಿಗಳಾದ ರತ್ನಾಕರ್ ಕೆ, ತೀರ್ಥರಾಮ ಹೊಸೋಳಿಕೆ, ಶ್ರೀಮತಿ ಮಮತಾ, ಪೃಥ್ವಿಕುಮಾರ್ ಹಾಗೂ ಸನತ್ ಕುಮಾರ್ ಶಿಕ್ಷಕರ ಸೇವಾ ಪುಸ್ತಕವನ್ನು ಶಿಕ್ಷಕರ ಸಮ್ಮುಖದಲ್ಲಿ ನೀಡಿದ್ದರು. ಪಂಜ ವಲಯದ ಸಿ.ಆರ್.ಪಿ. ಗಳಾದ ಜಯಂತ ಮಾನಡ್ಕ, ಯಶೋಧರ ಮತ್ತು ಸುಮತಿ ಕುಮಾರಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.