Breaking News

ಪಾಜಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಕಳಪೆ : ಚಂದ್ರಶೇಖರ ಕಾಮತ್ ಆರೋಪ

Advt_Headding_Middle
Advt_Headding_Middle

chandrashekar kamath pressmeer copy

ಬಾಳಿಲ ಗ್ರಾಮದ ಪಾಜಪಳ್ಳ, ಕಲ್ಮಡ್ಕ ರಸ್ತೆಯಲ್ಲಿ ಪಾಜಪಳ್ಳದಲ್ಲಿ ನಿರ್ಮಿಸಲಾದ ಕಾಂಕ್ರೀಟೀ;ಕರಣ ಕಳಪೆಯಾಗಿದ್ದು, ಕೂಡಲೇ ಮರುದುರಸ್ಥಿಗೊಳಿಸಬೇಕೆಂದು ಮಾಜಿ. ಜಿ.ಪಂ. ಸದಸ್ಯ ಚಂದ್ರಶೇಖರ ಕಾಮತ್ ಆಗ್ರಹಿಸಿದ್ದಾರೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ, ಮಾತನಾಡಿದ ಅವರು ಕಳೆದ ಜೂನ್ ತಿಂಗಳಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ೫ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದು, ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಾಗಿದೆ. ಕಾಂಕ್ರೀಟ್ ರಸ್ತೆಯ ಸುತ್ತಮುತ್ತ ಗುಂಡಿಗಳಾಗಿದ್ದು, ನೀರು ನಿಂತಿದೆ. ಕಾಮಗಾರಿಯಲ್ಲಿ ಕಬ್ಬಿಣದ ರಾಡ್‌ಗಳನ್ನು ಬಳಸಲಾಗಿಲ್ಲ. ಒಳಗೆ ಕೆಂಪು ಕಲ್ಲು ಉಪಯೋಗಿಸಲಾಗಿದೆ. ಸ್ಲಾಬ್‌ನ ದಪ್ಪ ಕೇವಲ ಮೂರು ಇಂಚು ಇದೆ. ಈ ಕಾರಣಗಳಿಂದ ರಸ್ತೆ ಈಗಾಗಲೇ ಎದ್ದು ಹೋಗುತ್ತಿದೆ. ಈ ಸಂಬಂಧ ಸಂಪರ್ಕಿಸಿದಾಗ ಹಾರಿಕೆಯ ಉತ್ತರ ಸಿಕ್ಕಿದೆ. ಶಾಸಕರು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಈಗಾಗಲೇ ದೂರು ನೀಡಲಾಗಿದ್ದು, ಸಂಬಂಧಪಟ್ಟವರು ಸೂಕ್ತ ತನಿಖೆ ನಡೆಸಿ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಈ ಕಾಮಗಾರಿಯ ಕುರಿತು ಯಾವುದೇ ಮಾಹಿತಿ ಜನರಿಗೆ ಲಭಿಸುತ್ತಿಲ್ಲ. ಗುತ್ತಿಗೆದಾರರು ಯಾರು ಎಂದು ಕೂಡ ತಿಳಿಯುತ್ತಿಲ್ಲ. ಕಾಮಗಾರಿಯ ಸ್ಥಳದಲ್ಲಿ ಯಾವುದೇ ಮಾಹಿತಿ ಕೂಡಾ ತಿಳಿಯುತ್ತಿಲ್ಲ. ಇವೆಲ್ಲದರ ಕುರಿತು ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರಿಸಲಾಗುವುದು ಎಂದು ಅವರು ಹೇಳಿದರು. ಮಾಜಿ ಗ್ರಾ.ಪಂ. ಅಧ್ಯಕ್ಷ ಯು.ಡಿ. ಶೇಖರ್, ಗಂಗಾಧರ್ ಗೌಡ, ಆದಂ ಸಾಹೇಬ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.