ಐವರ್ನಾಡು ಶಾರದಾ ಪೂಜಾ ಮಹೋತ್ಸವ-ಸನ್ಮಾನ

Advt_Headding_Middle
Advt_Headding_Middle

ivernadu yuva shakthi (2) copy

ಧಾರ್ಮಿಕ ಕಾರ್ಯಕ್ರಮಗಳು ಎಲ್ಲರನ್ನೂ ಕೈ ಬೀಸಿ ಕರೆಯುವಂತಿರಬೇಕು.ಮನುಷ್ಯ ಮನುಷ್ಯರ ಮಧ್ಯೆ ನಂಬಿಕೆ ಪ್ರೀತಿ ವಿಶ್ವಾಸ ಇರಬೇಕು ಅಪನಂಬಿಕೆ ಇರಬಾರದು.ಎಲ್ಲಾ ಧರ್ಮವನ್ನು ಪ್ರೀತಿ ಮಾಡುವ ಮನಸ್ಸು ಬರಬೇಕು. ಪರಿಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸಿದರೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಪರಿಸರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಐವರ್ನಾಡಿನಲ್ಲಿ ಯುವಶಕ್ತಿ ಸಂಘದ ಆಶ್ರಯದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆದ ಶಾರದಾ ಪೂಜಾ ಮಹೋತ್ಸವದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಧರ್ಮದ ಆಚರಣೆಗಳು ಭೋಧನೆಯಲ್ಲಿ ಮಾತ್ರ ಇರಬಾರದು ಅದು ಆಚರಣೆಯಲ್ಲಿ ಬರಬೇಕು.ಎಲ್ಲಾ ಧರ್ಮ,ಜಾತಿಯವರನ್ನು ಪ್ರೀತಿ ಮಾಡಿ ಹೆಚ್ಚು ಜನರ ಪ್ರೀತಿಯನ್ನು ಗಳಿಸಿದಾಗ ದೇವರು ಹತ್ತಿರವಾಗುತ್ತಾನೆ ಎಂದು ಅವರು ಹೇಳಿದರು.
ವಿಶ್ವದಾಖಲೆ ನಿರ್ಮಿಸಿದ ಅಂತರಾಷ್ಟ್ರೀಯ ಯೋಗಪಟು ಪುರುಷೋತ್ತಮ ದೇರಾಜೆಯವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಡಾ| ರಘುರವರು ಸನ್ಮಾನಿಸಿದರು.ಯುವಶಕ್ತಿ ಕೇಂದ್ರೀಯ ಸಮಿತಿ ಸ್ಥಾಪಕ ನಿರ್ದೇಶಕರಾದ ಎಂ.ವೆಂಕಪ್ಪ ಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಪವನ್ ಮಡ್ತಿಲ ವಾಚಿಸಿದರು.ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಜಾತ್ಯತೀತ ನಿಲುವಿನ ಯುವಶಕ್ತಿ ಸಂಘದಿಂದ ಎಲ್ಲಾ ಧರ್ಮದವರನ್ನು ಸೇರಿಸಿಕೊಂಡು ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಶಾರದೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಶ್ರೀಮತಿ ಸವಿತಾ ರಮೇಶ್,ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಡಾ|ರಘು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಮ್ಮ,ಯುವಶಕ್ತಿ ಸಂಘದ ಅಧ್ಯಕ್ಷ ರಂಜನ್ ಪರ್ಲಿಕಜೆ, ಪ್ರಧಾನ ಕಾರ್ಯದರ್ಶಿ ನಿಶ್ಚಿತ್ ಮಡ್ತಿಲ ಉಪಸ್ಥಿತರಿದ್ದರು.
ಶರತ್ ಮಡ್ತಿಲ ಕಾರ್ಯಕ್ರಮ ನಿರೂಪಿಸಿ, ರಂಜನ್ ಪರ್ಲಿಕಜೆ ವಂದಿಸಿದರು.
ಬೆಳಿಗ್ಗೆ ವೇದಮೂರ್ತಿ ನಾರಾಯಣ ಅಸ್ರಣ್ಣರವರ ನೇತೃತ್ವದಲ್ಲಿ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಟೆ ನಡೆಯಿತು. ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಸಂಜೆ ಶಾಲಾ ಮಕ್ಕಳ ಡ್ಯಾನ್ಸ್ ಹಾಗೂ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ತಂಡದಿಂದ ಡ್ಯಾನ್ಸ್ ಡ್ಯಾನ್ಸ್ ನಡೆಯಿತು. ಯುವಶಕ್ತಿ ಸಂಘದ ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ನಂತರ ನಿತ್ಯೆ ಬನ್ನಗ ತುಳು ಹಾಸ್ಯಮಯ ನಾಟಕ ನಡೆಯಿತು.
ಸೆ.೨೪ ರಂದು ಯುವಶಕ್ತಿ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಕ್ಷರಾಭ್ಯಾಸ , ಆಯುಧ ಪೂಜೆ ನಡೆದ ಬಳಿಕ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯು ಐವರ್ನಾಡಿನ ಮುಖ್ಯ ರಸ್ತೆಯಲ್ಲಿ ವಿವಿಧ ವಾಧ್ಯ ಘೋಷಗಳಿಂದಿಗೆ ನಡೆದು ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.