Breaking News

ಕೆ.ವಿ.ಜಿ. ಡೆಂಟಲ್ ಕಾಲೇಜು ಪದವಿ ಪ್ರದಾನ ಸಮಾರಂಭ

Advt_Headding_Middle
Advt_Headding_Middle

SRI_7429 copy

ವೈದ್ಯಕೀಯ ಪದವೀಧರರಾಗಿ ಹೊರಹೊಮ್ಮಿರುವ ಯುವಕ ಯುವತಿಯರು ಗ್ರಾಮೀಣ ಪ್ರದೇಶದ ಜನರ ಸೇವೆಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ. ಟಿ ಶ್ಯಾಮ್ ಭಟ್ ಹೇಳಿದ್ದಾರೆ. ಸೆ.೨೩ ರಂದು ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನ ೨೨ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶವಾದ ಸುಳ್ಯ ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಡುವುದು ಡಾ ಕುರುಂಜಿ ವೆಂಕಟ್ರಮಣ ಗೌಡರ ಸಾಧನೆಯಿಂದ ನಗರ ಪ್ರದೇಶದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ದೊಡ್ಡ ಸಾಧನೆಯಲ್ಲ ಆದರೆ ಇಂತಹ ಚಿಕ್ಕ ಪ್ರದೇಶಗಳಲ್ಲಿ ಎಲ್ಲ ರೀತಿಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುವಂತೆ ಮಾಡಿದ ಸಾಧನೆ ಮಾಡಿದ ದಿವಂಗತ ಕುರುಂಜಿಯವರು ಗ್ರಾಮೀಣ ಪ್ರದೇಶ ಸಮೃದ್ಧವಾಗಿ ಬೆಳೆಯುವುದನ್ನು ಬಯಸಿದ್ದರು. ಅವರಂತೆ ನೀವು ಕೂಡ ಗ್ರಾಮೀಣ ಜನರ ಆರೋಗ್ಯದ ಉನ್ನತಿಗಾಗಿ ನಿಮ್ಮ ಜೀವನ ಮುಡಿಪಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರಿನ ಎ.ಬಿ .ಶೆಟ್ಟಿ ಡೆಂಟಲ್ ಕಾಲೇಜಿನ ಡೀನ್ ಡಾ. ಯು.ಎಸ್. ಕೃಷ್ಣ ನಾಯಕ್ ರವರು ‘ದೇಶದ ಅತ್ಯುತ್ತಮ ಡೆಂಟಲ್ ಕಾಲೇಜುಗಳಲ್ಲಿ ಸುಳ್ಯದ ಕೆ.ವಿ.ಜಿ ಡೆಂಟಲ್ ಕಾಲೇಜು ಕೂಡ ಇಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕೆ.ವಿ. ಚಿದಾನಂದ, ಕೆ.ವಿ. ರೇಣುಕಾ ಪ್ರಸಾದ್ ಮತ್ತು ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಶ್ರಮಿಸುತ್ತಿದ್ದಾರೆ‘ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಮಾತನಾಡಿ, ದಂತವಿಜ್ಞಾನ ಈಗ ವಿಶಾಲವಾಗಿ ಬೆಳೆದಿದೆ. ಇದರ ಎಲ್ಲ ರೀತಿಯ ಕಲಿಕೆ ಸಾಧ್ಯವಾಗುವ ಅಗತ್ಯ ಸೌಲಭ್ಯಗಳನ್ನು ನಮ್ಮ ಡೆಂಟಲ್ ಕಾಲೇಜು ಹೊಂದಿದೆ. ದಂತವಿಜ್ಞಾನ ಪ್ರತಿಯೊಬ್ಬರಿಗೂ ಇಂದಿನ ಕಾಲದಲ್ಲಿ ಬೇಕಾಗಿದೆ ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ‘ಕೇವಲ ಕಲಿಕೆ ಸಾಕಾಗುವ ಕಾಲ ಇದಲ್ಲ. ಜಾಗತೀಕರಣದ ಕಾಲವಾದುದರಿಂದ ಜ್ಞಾನದೊಂದಿಗೆ ಉತ್ತಮ ಸಂವಹನ ಕಲೆಯೂ ಬೇಕಾಗುತ್ತದೆ. ನಮ್ಮ ಡೆಂಟಲ್ ಕಾಲೇಜಿನಲ್ಲಿ ೨೬ ವರ್ಷಗಳಲ್ಲಿಯೂ ಶೇ ೧೦೦ ಫಲಿತಾಂಶ ಬಂದಿರುತ್ತದೆ ಎಂದರು.
ಪ್ರಾಂಶುಪಾಲೆ ಶ್ರೀಮತಿ ಮೋಕ್ಷ ನಾಯಕ ಸ್ವಾಗತಿಸಿದರಲ್ಲದೆ, ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಚಟುವಟಿಕೆಗಳ ಮಾಹಿತಿ ನೀಡಿದರು. ಡಾ. ಕೃಷ್ಣಪ್ರಸಾದ ಎಲ್ ಪದವೀಧರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕೆ.ಪಿ.ಎಸ್.ಸಿ. ಅಧ್ಯಕ್ಷ ಟಿ ಶ್ಯಾಮ್ ಭಟ್ ರನ್ನು ಹಾಗೂ ಡಾ. ಕೃಷ್ಣ ನಾಯಕ್ ರನ್ನು ಸನ್ಮಾನಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಪಡ್ಡಂಬೈಲು ವೆಂಕಟರಮಣ ಗೌಡರು ಶುಭಹಾರೈಸಿದರು.
ರಾಜೀವಿ ಗಾಂಧಿ ಆರೋಗ್ಯ ವಿ.ವಿ. ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದವರಾದ ಡಾ. ಐಶ್ವರ್ಯ, ಡಾ. ಲಕ್ಷ್ಮಿ ಶರ್ವಾಣಿ ಹಾಗೂ ಡಾ. ರೇವಂತ್ ಸೂತೋಡು ರನ್ನು ಚಿನ್ನದ ಪದಕ ನೀಡಿ ಸತ್ಕರಿಸಲಾಯಿತು.
ಡಾ. ಪ್ರಸನ್ನ ಕುಮಾರ್ ವರಸಿದಿ, ಡಾ. ನಮ್ರತಾ ರಮೇಶ್ ಕಾರ್ಯಕ್ರಮ, ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.