ಸಂಪಾಜೆ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳು ಭೇಟಿ – ಮುಖಂಡರೊಂದಿಗೆ ಮಾತುಕತೆ

Advt_Headding_Middle
Advt_Headding_Middle

Sampaje krdcl copy

ಸಂಪಾಜೆ ಗ್ರಾಮಸ್ಥರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದಿರುವ ಕೆ.ಆರ್.ಡಿ.ಸಿ.ಎಲ್. ಡಿ.ಇ.ಇ. ಲಿಂಗೇಗೌಡ ಎಸ್.ಎಂ. ರವರು ಸಂಪಾಜೆಗೆ ಬಂದು ಮುಖಂಡರೊಂದಿಗೆ ಮಾತನಾಡಿ ಅ.೩ ರ ಒಳಗೆ ಅಗತ್ಯ ಕೆಲಸಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಿ.ಕೆ ಹಮೀದ್ ತಿಳಿಸಿದ್ದಾರೆ.
ಕಡೆಪಾಲ ಸೇತುವೆ ಬಳಿರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಹಲವು ಬಾರಿ ಅಪಘಾತಗಳು ಸಂಭವಿಸಿದೆ. ಇತ್ತೀಚೆಗೆ ಸಂಪಾಜೆಯ ಮುಖಂಡರು ಇದರ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು. ಇದನ್ನು ತಿಳಿದ ಕೆ.ಆರ್.ಡಿ.ಸಿ.ಎಲ್. ಡಿ.ಇ.ಇ. ಲಿಂಗೇ ಗೌಡ ಹಾಗೂ ಕಂಟ್ರಾಕ್ಟ್ ವಹಿಸಿಕೊಂಡಿರುವ ಕೆ.ಎಂ.ಸಿ.ಯವರು ಸಂಪಾಜೆಗೆ ಬಂದು ಮುಖಂಡರನ್ನು ಸ್ಥಳಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸೇತುವೆ ಎರಡು ಬದಿ ತಡೆಗೋಡೆ , ಹಂಪ್‌ಗಳನ್ನು ಜಾಸ್ತಿ ಮಾಡುವುದು ಹಾಗೂ ದೊಡ್ಡ ಬೋರ್ಡ್‌ಗಳನ್ನು ಅಳವಡಿಸಿ ಎಚ್ಚರಿಕೆಯ ಫಲಕ ಹಾಕುವುದಾಗಿ ಅಧಿಕಾರಿಗಳು ಒಪ್ಪಿಕೊಂಡರು. ಅ.೩ ರಿಂದ ಕೆಲಸ ಆರಂಭಿಸುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದು, ತಪ್ಪಿದರೆ ಉಗ್ರ ಪ್ರತಿಭಟನೆಯ ದಾರಿಯನ್ನು ಅನುಸರಿಸಲಿದ್ದೇವೆ ಎಂದು ಜಿ.ಕೆ ಹಮೀದ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸೋಮಶೇಖರ ಕೊಯಿಂಗಾಜೆ, ಸೊಸೈಟಿ ನಿರ್ದೇಶಕ ಪಿ.ಎಲ್ ಆನಂದ, ಜಗದೀಶ್ ರೈ, ಮಾಜಿ ಪಂಚಾಯತ್ ಸದಸ್ಯರಾದ ಚಂದ್ರಶೇಖರ, ಐವನ್ ಸೋಜ ಮತ್ತಿತರರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.