ದುಗಲಡ್ಕ : ದುರ್ಗಾಪೂಜೆ ಮತ್ತು ಆಯುಧ ಪೂಜೆ

ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಶ್ರೀ ದುರ್ಗಾ ಪೂಜೆ ಮತ್ತು ಆಯುಧ ಪೂಜೆಯು ಸೆ.28 ರಂದು ನಡೆಯಿತು. ಬೆಳಿಗ್ಗೆ ದುರ್ಗಾಪೂಜೆ ಪ್ರಾರಂಭಗೊಂಡು ಬಳಿಕ ಆಯುಧ ಪೂಜೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪನೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ ರಾಘವೇಂದ್ರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಸಾಲ್ಯಾನ್, ಉಪಾಧ್ಯಕ್ಷ ಯತೀಶ್ ರೈ, ಗೌರವಾಧ್ಯಕ್ಷ ಸುಂದರ್ ರಾವ್, ದಿನೇಶ್ ಮಣಿಯಾಣಿ, ದುಗ್ಗಲಾಯ ಯುವ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಮೊದಲಾದವರು ಹಾಗೂ ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *