ಕಲ್ಲುಮುಟ್ಲು ವಾರ್ಡ್ 14ರ ಪರಿವಾರಕಾನ ರಸ್ತೆ ಸ್ಥಳೀಯ ನಾಗರಿಕರಿಂದ ದುರಸ್ಥಿ

kallumutlu shramdana copy

ಪರಿವಾರಕಾನದ ಸ್ಥಳೀಯ ನಿವಾಸಿಗಳು ತಮ್ಮ ಸ್ವಂತ ಖರ್ಚಿನಿಂದ ವಾಹನ ಸಂಚಾರಕ್ಕೆ ಅಯೋಗ್ಯವಾದ ರಸ್ತೆಯನ್ನು ಸೆ.30 ರಂದು ದುರಸ್ತಿಗೊಳಿಸಿದರು. ಕಳೆದ 20 ದಿನಗಳ ಹಿಂದೆ ತುಳುನಾಡ ರಕ್ಷಣಾ ವೇದಿಕೆಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ನ.ಪಂ.ಗೆ ಮನವಿ ನೀಡಲಾಗಿತ್ತು.
ನ.ಪಂ. ಅಧ್ಯಕ್ಷರು ಮಳೆಗಾಲ ಆದ್ದರಿಂದ ತಾತ್ಕಾಲಿಕ ದುರಸ್ಥಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ 20 ದಿನವಾದರೂ ಅವರ ಭರವಸೆ ಅನುಷ್ಠಾನಗೊಳ್ಳದಿದ್ದುದಿಂದ ಬೇಸತ್ತ ಸ್ಥಳೀಯ ನಿವಾಸಿಗಳು ಸ್ವಂತ ಖರ್ಚಿನಲ್ಲಿ ರಸ್ತೆಯನ್ನು ದುರಸ್ಥಿಗೊಳಿಸಿದರು.
ಸ್ಥಳೀಯ ನಿವಾಸಿಗಳಾದ ಶ್ರೀಮತಿ ರೇವತಿ ರವೀಂದ್ರ, ನ್ಯಾಯವಾದಿ ಸತೀಶ್ಚಂದ್ರ ಪರಿವಾರಕಾನ, ಆನಂದ ಗೌಡ ಪರಿವಾರಕಾನ, ಗಣೇಶ್ ಪರಿವಾರಕಾನ, ರವೀಂದ್ರ ಜಿ.ಕೆ, ಬಾಲಕೃಷ್ಣ ನಾಯ್ಕ, ರಾಮದಾಸ್ ರೈ, ಗೋಪಾಲ ಗೌಡ ಕೋಲ್ಚಾರು, ಬಾಲಕೃಷ್ಣ ಗೌಡ ಪರಿವಾರಕಾನ, ಸೇಸಪ್ಪ ಪರಿವಾರಕಾನ, ರಂಜಿತ್ ಪೂಜಾರಿ, ಹೇಮಂತ್ ಗೌಡ ಪರಿವಾರಕಾನ, ಹೇಮಂತ್ ನಾಯ್ಕ ಪರಿವಾರಕಾನ ಮೊದಲಾದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *