Breaking News

ಸುಳ್ಯದಲ್ಲಿ ೧೬ರಂದು ರಾಷ್ರ್ಟೀಯ ಪತ್ರಿಕಾ ದಿನಾಚರಣೆ ಸಾರ್ವಜನಿಕರು, ಪತ್ರಕರ್ತರಿಗೆ ವೃತ್ತಿ ಕಾರ‍್ಯಾಗಾರ

Advt_Headding_Middle
Advt_Headding_Middle

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ರಾಷ್ರ್ಷೀಯ ಪತ್ರಿಕಾ ದಿನಾಚರಣೆ ಹಾಗೂ ಸಾರ್ವಜನಿಕರು ಮತ್ತು ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರ ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ನ.೧೬ರಂದು ಬೆಳ್ಳಿಗೆ ೧೦ಗಂಟೆಗೆ ನಡೆಯಲಿದೆ. ಪತ್ರಿಕಾಗೊಷ್ಠಿಯಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್ ಮಾತನಾಡಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಕಳೆದ ವರ್ಷ ಕಲುಬುರುಗಿ ಆಚರಿಸಲಾಗಿತ್ತು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ಕೆವಿಜಿ ಕಾನೂನು ಕಾಲೇಜು ಹಾಗೂ ಸುದ್ದಿ ಬಿಡುಗಡೆ ಪತ್ರಿಕಾ ಸಮೂಹದ ಸಹಭಾಗಿತ್ವದಲ್ಲಿ ಸುಳ್ಯದಲ್ಲಿ ಅಚರಿಸಲಾಗುತ್ತಿದೆ. ಮೂರು ವಿಚಾರಗೋಷ್ಠಿಗಳು ಹಾಗೂ ಸಾರ್ವಜನಿಕರು ಮತ್ತು ಪತ್ರಕರ್ತರಿಗೆ ವೃತ್ತಿ ಕಾರ‍್ಯಾಗಾರ ನಡೆಯಲಿದೆ ಎಂದರು.ಸಮಾರಂಭವನ್ನು ಸಚಿವ ಬಿ ರಮಾನಾಥ ರೈ ಉದ್ಘಾಟಿಸಲಿರುವರು . ಶಾಸಕ ಅಂಗಾರ ಅಧ್ಯಕ್ಷತೆ ವಹಿಸುವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಪ್ರಾಸ್ತಾವಿಕ ಮಾತನಾಡುವರು. ಮುಖ್ಯ ಮಂತ್ರಿ ಮಾಧ್ಯಮ ಸಲಹೆಗಾರ ದಿನೆಶ್ ಅಮೀನ್ ಮಟ್ಟು ಪ್ರಧಾನ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ ಖಾದರ್ ಸಂಸದ ನಳಿನ್‌ಕುಮಾರ್ ಕಟೀಲ್ , ಶಾಸಕರಾದ ಅಭಯ ಚಂದ್ರ ಜೈನ್, ವಸಂತ ಬಂಗೇರ , ಶಕುಂತಳಾ ಶೆಟ್ಟಿ ಜೆ, ಆರ್.ಎನ್ ಲೋಬೋ , ಮೊಯ್ದಿನ್ ಬಾವಾ, ಐವನ್ ಡಿಸೋಜ, ಕೊಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಗಣೇಶ್ ಕಾರ್ತಿಕ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸುಳ್ಯ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಸುಳ್ಯ ನಗರ ಪಂಚಾಯತಿ ಅಧ್ಯಕ್ಷೆ ಶೀಲಾವತಿ ಕಮಾಧವ ಭಾಗವಹಿಸುವುವರು. ಜಿಲ್ಲಾಧಿಕಾರ ಶಶಿಕಾಂತ್ ಸೆಂಥಿಲದ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಉಪ ನಿರ್ದೆಶಕ ದೇವರಾಜಯ್ಯ, ಜಿ.ಪಂ ಸಿಒಓ ಡಾ.ಎಂ.ಆರ್. ರವಿ ಪಶ್ಚಿಮ ವಲು ಐಜಿಪಿ ಹೇಮಂತ್ ನಿಂಬಾಳ್ಕರ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ ಚಿದಾನಂದ, ಅಧ್ಯಕ್ಷ ಡಾ.ಯು.ಪಿ ಶಿವಾನಂದ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಆನಂದ ಶೆಟ್ಟಿ, ಸುಳ್ಯ ಕೆ.ವಿ.ಜಿ ಕಾನೂನು ಕಾಲೇಜು ಪಿನ್ಸಿಪಾಲ್ ಉದಯಕೃಷ್ಣ ಡಿ. ಉಂಪಸ್ಥಿತರಿರುವರು. 

ಪ್ರಥಮ ಗೋಷ್ಠಿ : ಮಾದ್ಯಮಗಳ ಸಾಮಾಜಿಕ ಜವಬ್ಧಾರಿ ಮತ್ತು ನವ ಮಾದ್ಯಮಗಳನ್ನು ಬಳಸಿಕೊಳ್ಳುವ ಬಗೆ ವಿಷಯದ ಕುರಿತು ಮಧ್ಯಾಹ್ನ ೧೨.೩೦ರಿಂದ ಪ್ರಥಮ ಗೋಷ್ಠಿ ನಡೆಯಲಿದೆ . ಪತ್ರಕರ್ತ ಮನೋಹರ್ ಪ್ರಸಾದ್ ವಿಷಯ ಮಂಡನೆ ಮಾಡಲಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕೆ ಕುಮಾರ್‌ನಾಥ್ ಅಧ್ಯಕ್ಷತೆ ವಹಿಸುವರು.ಪತ್ರಕರ್ತರಾದ ಬಿ.ಎನ್. ಪುಪ್ಪರಾಜ್, ಬಾಲಕೃಷ್ಣ ಬಳ್ಳಕ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ದ್ವಿತೀಯ ಗೋಷ್ಠಿ: ಗ್ರಾಮೀಣ ವರದಿಗಾರಿಕೆ ಕುರಿತು ಎರಡನೇ ಗೋಷ್ಠಿ ಮಧ್ಯಾಹ್ನ ೨.೩೦ರಿಂದ ನಡೆಯಲಿದೆ. ಹಿರಿಯ ಪತ್ರಕರ್ತ ಈಶ್ವರ ದೈತೋಟ ವಿಷಯ ಮಂಡನೆ ಮಾಡಲಿದ್ದಾರೆ. ಪತ್ರಕರ್ತ ಡಾ. ಯು.ಪಿ ಶಿವಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರಾದ ಜಿತೇಂದ್ರ ಕುಮದೇಶ್ವರ, ರವಿಪ್ರಸಾದ್ ಕಮಿಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ತೃತೀಯ ಗೋಷ್ಠಿ: ತನಿಖ ಪತ್ರಿಕೋದ್ಯಮದ ಬಗ್ಗೆ ತೃತೀಯ ವಿಚಾರಗೊಷ್ಠಿ ಸಂಜೆ ೪ರಿಂದ ಆರಂಭವಾಗಲಿದೆ. ಟಿ.ವಿ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿಷಯ ಮಂಡನೆ ಮಾಡಲಿದ್ದಾರೆ. ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರಾದ ರಾಮಕೃಷ್ಣ, ಆತ್ಮಭೂಷಣ್, ಲೇಖಕ ಎಂ.ಬಿ ಸದಾಶಿವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ೫.೩೦ರಿಂದ ದೃಶ್ಯ ಮಾಧ್ಯಮದ ಪ್ರಮುಖರೊಂದಿಗೆ ಶಿಬಿರಾರ್ಥಿಗಳಿಗೆ ಸಾರ್ವಜನಿಕ ಸಂವಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿಜಯಲಕ್ಷ್ಮೀ ಶಿಬರೂರು, ಚಂದ್ರಶೇಖರ ಮಂಡೆಕೋಲು, ಚಂದ್ರಶೇಖರ ಅರಿಬೈಲು, ಮೈಮ್ ರಾಮ್ ದಾಸ್, ಜಯ
ಶೇಖರ ಮಡಪ್ಪಾಡಿ, ನಾಗೇಂದ್ರ ಶೆಣೈ ಸಂವಾದದಲ್ಲಿ ಪಾಲ್ಗೊಳ್ಳುವರು, ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಪಿ.ಬಿ ಹರೀಶ್ ರೈ ಸಂವಾದ ನಿರ್ವಹಣೆ ಮಾಡಲಿದ್ದಾರೆ. ಸಂಜೆ ೬.೪೫ಕ್ಕೆ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸಂಜೆ ೭.೦೦ಗಂಟೆಗೆ ಪತ್ರಕರ್ತರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಯು.ಪಿ ಶಿವಾನಂದ, ಸಂಚಾಲಕ ಎ.ಎಂ ಮುಸ್ತಾಫ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಂಘಟನಾ ಸಮಿತಿ ಗೌರವಾಧ್ಯಕ್ಷ ಪಿ.ಬಿ ಹರೀಶ್ ರೈ ಉಪಸ್ಥಿತರಿದ್ದರು,

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.