ಗ್ರಾಮೀಣ ವರದಿಗಾರನಿಗೆ ಜವಾಬ್ದಾರಿ ಇರುತ್ತದೆ. ಡಾ.ಯು.ಪಿ ಶಿವಾನಂದ

Advt_Headding_Middle
Advt_Headding_Middle

ನಗರದ ವರದಿಗಾರನಿಗೆ ತಾನು ಮಾಡಿದ ವರದಿಯ ಕುರಿತು ಯಾವುದೇ ಜವಾಬ್ದಾರಿ ಇರುವುದಿಲ್ಲ . ಆದರೆ ಗ್ರಾಮೀಣ ವರದಿಗಾರನಿಗೆ ತಾನು ಮಾಡಿದ ವರದಿಯ ಬಗ್ಗೆ ಜವಾಬ್ದಾರಿ ಇರುತ್ತದೆ. ಹಾಗಾಗಿ ಸ್ಥಳೀಯ ವರದಿಗಾರ ಮಾಡಿದ ವರದಿ ನೂರಕ್ಕೆ ನೂರರಷ್ಟು ಸತ್ಯಾಂಶದಿಂದ ಕೊಡಿರುತ್ತದೆ. ಎಂದು ಸುದ್ದಿ ಸಮೂಹದ ಸಂಸ್ಥೆಗಳ ಪ್ರಧಾನ ಸಂಪಾದಕ ಡಾ.ಯು.ಪಿ ಶಿವಾನಂದ ಹೇಳಿದರು. ಅವರು ಗ್ರಾಮೀಣ ಪತ್ರಿಕೋದ್ಯಮ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ವರದಿಗೆ ಆದ್ಯತೆ ನೀಡಿದಾಗ ಗ್ರಾಮೀಣ ಪತ್ರಿಕೋದ್ಯಮ ಮೌಲ್ಯ ಉಳಿಸಿಕೊಂಡಿದೆ. ನಮ್ಮ ವರದಿ ಬಂದಾಗ ನಮ್ಮವರೇ ನೋಡುತ್ತಾರೆ. ನಮ್ಮವರದೇ ವರದಿ ಮಾಡಿದಾಗ ಆದು ಆತ್ಮೀಯ ಪತ್ರಿಕೆಯಾಗುತ್ತದೆ ಎಂದು ಡಾ.ಯು.ಪಿ ಶಿವಾನಂದ ಹೇಳಿದರು.

ಸತ್ಯ ಸುದ್ದಿಯನ್ನು ಶೋಧಿಸುವುದು ಸವಾಲು: ಕುಂದೇಶ್ವರ

ಈಗ ಕುಳಿತಲ್ಲಿಗೇ ಸಾಕಷ್ಟು ವರದಿಗಳು ವರದಿಗಾರನಿಗೆ ಬರುತ್ತದೆ. ಆದರೆ ಆ ಸುದ್ದಿಯಲ್ಲಿ ಸತ್ಯ ಸುದ್ದಿಯನ್ಬು ಶೋಧಿಸುವುದೇ ಈಗಿನ ಸವಾಲುಲೆಂದು ವಿಜಯವಾಣಿ ಮಂಗಳೂರು ವಿಭಾಗದ ಮುಖ್ಯ ವರದಿಗಾರ ಜಿತೇಂದ್ರ ಕುಂದೇಶ್ವರ ಹೇಳಿದರು.


ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಸ್ವಾಗತಿಸಿದರು. ದಯಾನಂದ ಕೊರತ್ತೋಡಿ ವಂದಿಸಿದರು. ಪ್ರಾಂಜಲಿ ಕಾನತ್ತೂರು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.