ಪ್ರವೀಣ್ ಎಡಮಂಗಲ: ನಾಟಕ ತರಬೇತಿಗಾಗಿ ಲಂಡನ್‌ಗೆ

 

ರಾಜ್ಯದ ಯುವ ಪ್ರತಿಭಾನ್ವಿತ ರಂಗಕರ್ಮಿ ಪ್ರವೀಣ್ ಎಡಮಂಗಲ ಕೇಂದ್ರ ಸಂಸ್ಕ್ರತಿ ಇಲಾಖೆಯ ವಿದೇಶ ಪ್ರತಿಭಾ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಲಂಡನ್‌ನಲ್ಲಿರುವ ಜಗತ್ಪ್ರಸಿದ್ದ ಮತ್ತು ಬ್ರಿಟನ್‌ನ ಮುಂಚೂಣಿ ನಾಟಕ ಸಂಸ್ಥೆ ರಾಯಲ್ ಅಕಾಡಮಿ ಆಫ್ ಡ್ರಾಮಾಟಿಕ್ ಆರ್ಟ್ಸ್‌ಗೆ ತೆರಳಿದ್ದಾರೆ.

ದೇಶದ ಅಗ್ರಮಾನ್ಯ ನಾಟಕ ತರಬೇತಿ ಸಂಸ್ಥೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ೨೦೧೬ರ ಸಾಲಿನಲ್ಲಿ ನಿರ್ದೇಶನ ಮತ್ತು ವಿನ್ಯಾಸ ವಿಭಾಗದಲ್ಲಿ ಅಗ್ರ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದ ಪ್ರವೀಣ್ ಅವರು ಕರ್ನಾಟಕದ ಸುಳ್ಯ ತಾಲೂಕಿನ ಎಡಮಂಗಲದವರು ಇವರ ಸೋದರ ನವೀನ್ ಎಡಮಂಗಲ ಅವರು ಕೂಡ ನಾಟಕ ನಿರ್ದೇಶಕರಾಗಿದ್ದರು. ಇವರು ಎಡಮಂಗಲದ ಆನಂದ್ ಕೆ.ಎಲ್ ಮತ್ತು ರತ್ನಾವತಿ ನಡ್ಕ ಅವರ ಪುತ್ರ. ನ.೧೫ರಂದು ದೆಹಲಿಯಿಂದ ಲಂಡನ್‌ಗೆ ತೆರಳಿಲಿರುವ ಪ್ರವೀಣ್, ಮುಂದಿನ ತಿಂಗಳ ೮ ರವರೆಗೆ ರಾಡಾದಲ್ಲಿ ಇರಲಿದ್ದು, ಅಲ್ಲಿನ ವಿವಿಧ ಶೈಕ್ಷಣಿಕ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೆ, ಬಿಟನ್‌ನ ವಿವಿಧ ನಾಟಕ ತರಬೇತಿ ಕೇಂದ್ರಗಳಿಗೆ ತೆರಳಿ ಯೊರೋಪಿಯನ್ ಸಂಸ್ಕ್ರತಿ ಮತ್ತು ನಾಟಕ ರಂಗದ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಪ್ರವೀಣ್ ಎನ್‌ಎಸ್‌ಡಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರೂಪಿಸಿದ್ದ ಇನ್ಫಿನಿಟಿ ಎಂಬ ನಾಟಕವು ದೆಹಲಿ ರಂಗಭೂಮಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲದೇ ಅನೇಕ ನಾಟಕ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾಗಿತ್ತು, ಪ್ರವೀಣ್ ನಾಟಕ ನಿರ್ದೇಶನ ಮತ್ತು ವಿನ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *