೧೭ ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ

Advt_Headding_Middle
Advt_Headding_Middle

೧೭ ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ ಸಿಕ್ಕಿದೆ. ಹರ್ಯಾಣದ ಮಾನುಷಿ ಛಿಲ್ಲರ್ ಮಿಸ್ ವರ್ಲ್ಡ್ ಆಗಿ ಹೊರ ಹೊಮ್ಮಿದ್ದಾರೆ. ಮಿಸ್ ವರ್ಲ್ಡ್ ಘೋಷಣೆಯಾಗ್ತಿದ್ದಂತೆ ಮಾನುಷಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇದ್ರಲ್ಲಿ ಮುಂದಿನ ಕಾಂಗ್ರೆಸ್ ಭಾವಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರೂ ಸೇರಿದೆ.
ಸದ್ಯ ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿರುವ ರಾಹುಲ್ ಗಾಂಧಿ ಸಮಯ ಹೊಂದಿಸಿಕೊಂಡು ಮಾನುಷಿಗೆ ಶುಭ ಕೋರಿದ್ದಾರೆ. ಟ್ವೀಟರ್ ನಲ್ಲಿ ರಾಹುಲ್ ಗಾಂಧಿ ಮಾನುಷಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಸುಂದರಿ ೨೦೧೭ ಮಾನುಷಿ ಛಿಲ್ಲರ್ ನಿಮಗೆ ಅಭಿನಂದನೆಗಳು. ನಿಮ್ಮ ಸಾಧನೆ ನೋಡಿ ಯುವ ಸಾಧಕರು ಹೆಮ್ಮಪಡುತ್ತಾರೆ. ಯುವ ಜನತೆಯ ಅದಮ್ಯ ಉತ್ಸಾಹದಲ್ಲಿ ನಮ್ಮ ದೇಶದ ಭವಿಷ್ಯವಡಗಿದೆ ಎಂದು ರಾಹುಲ್ ಟ್ವಿಟ್ ಮಾಡಿದ್ದಾರೆ.ರಾಹುಲ್ ಟ್ವಿಟ್ ಗೆ ಖುಷಿಯಾದ ಮಾನುಷಿ ಧನ್ಯವಾದ ಹೇಳಿದ್ದಾರೆ. ಧನ್ಯವಾದ ಸರ್. ಭಾರತವನ್ನು ಪ್ರತಿನಿಧಿಸುವುದು ಪೂಜ್ಯ ಹಾಗೂ ಗೌರವಾನ್ವಿತ ಕೆಲಸ ಎಂದು ಮಾನುಷಿ ಹೇಳಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.