ಚುಮು ಚುಮು ಚಳಿಯಲ್ಲಿ ತ್ವಚೆಯ ಆರೈಕೆ ಹೇಗಿರಬೇಕು?

Advt_Headding_Middle
Advt_Headding_Middle

ಚಳಿಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿಗೆ ಹಾನಿಯುಂಟಾಗುವುದು ಹೆಚ್ಚು, ತಂಪು ವಾತಾವರಣವು ವಾತಾವರಣದಲ್ಲಿರುವ ಧೂಳಿನೊಂದಿಗೆ ಸೇರಿಕೊಂಡು ನಿಮ್ಮ ಕೂದಲು ಮತ್ತು ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆ. ಅದರಲ್ಲೂ ತ್ವಚೆಯ ಮೇಲೆ ಚಳಿಗಾಲದ ಪರಿಣಾಮ ತುಸು ಹೆಚ್ಚೇ ಆಗಿದ್ದು, ಮುಖದ ಬಿರುಕುಗಳು, ಒಣ ತ್ವಚೆ, ತುರಿಕೆ, ಮೊದಲಾದ ಸಮಸ್ಯೆಗಳು ಕಾಡಬಹುದು. ಇದಕ್ಕಾಗಿ ತುಸು ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.
ಚಳಿಗಾಲದ ಸಮಯದಲ್ಲಿ ನೀವು ತೊಡುವ ಉಡುಪುಗಳನ್ನು ಹೇಗೆ ಆಯ್ಕೆಮಾಡಿಕೊಳ್ಳುತ್ತೀರೋ, ಹೇಗೆ ಬದಲಾಯಿಸಿಕೊಳ್ಳುತ್ತೀರೋ ಅಂತೆಯೇ ತ್ವಚೆಯನ್ನು ಕಾಪಾಡಿಕೊಳ್ಳಬೇಕು. ಸೂಕ್ತ ಆರೈಕೆಯನ್ನು ಮಾಡಬೇಕು ಇಂದಿನ ನಮ್ಮ ಲೇಖನದಲ್ಲಿ ಚಳಿಗಾಲದಲ್ಲಿ ತ್ವಚೆಯ ಆರೈಕೆಯನ್ನು ಹೇಗೆ ಮಾಡುವುದು ಎಂಬುದರ ಕುರಿತು ಕೆಲವೊಂದು ಅಂಶಗಳು

ಚಳಿಗಾಲದ ಸಮಯದಲ್ಲಿ ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕಾದಲ್ಲಿ ನೀವು ಈ ವಿಧಾನವನ್ನು ಅಳವಡಿಸಿಕೊಳ್ಳಲೇಬೇಕು. ನಿಮ್ಮ ತ್ವಚೆಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖಕ್ಕೆ ಬೆಚ್ಚನೆಯ ಅನುಭೂತಿಯನ್ನು ನೀಡಬಹುದು. ಹೆಚ್ಚು ಬಿಸಿಯಾದ ನೀರು ನಿಮ್ಮ ಮುಖದ ಶುಷ್ಕತೆಯನ್ನು ಇನ್ನಷ್ಟು ಗಾಢಗೊಳಿಸಬಹುದು. ಆದ್ದರಿಂದ ಉಗುರು ಬೆಚ್ಚನೆಯ ನೀರು ಇಲ್ಲವೇ ತಣ್ಣೀರನ್ನು ಮುಖ ತೊಳೆಯಲು ಬಳಸಿಕೊಳ್ಳಿ.

ಚಳಿಗಾಲದ ಸಮಯದಲ್ಲಿ ಎಕ್ಸ್‌ಫೋಲಿಯೇಶನ್ ಮಾಡುವುದು ಉತ್ತಮವಾದುದು ಎಂಬುದು ತ್ವಚೆಯ ಪರಿಣಿತರ ಸಲಹೆಯಾಗಿದೆ. ಇದು ಮೃತಕೋಶಗಳನ್ನು ವಿಷಕಾರಿ ಅಂಶಗಳನ್ನು ತ್ವಚೆಯಿಂದ ದೂರಮಾಡುತ್ತದೆ. ವಾರಕ್ಕೊಮ್ಮೆ ಎಕ್ಸ್‌ಫೋಲಿಯೇಶನ್ ಮಾಡಿಕೊಳ್ಳುವುದನ್ನು ಮರೆಯದಿರಿ.

  ನೊರೆ ಇರುವ ಕ್ಲೆನ್ಸರ್‌ಗಳು ಬೇಸಿಗೆಗೆ ಉತ್ತಮವಾಗಿದೆ. ಚಳಿಗಾಲದಲ್ಲಿ ನೊರೆ ಇಲ್ಲದ ಕ್ಲೆನ್ಸರ್ ಆರೈಕೆಯನ್ನು ನಿಮ್ಮ ತ್ವಚೆಗೆ ಮಾಡಿಕೊಳ್ಳಿ. ಏಕೆಂದರೆ ಚಳಿಗಾಲದಲ್ಲಿ ನೊರೆ ಇರುವ ಕ್ಲೆನ್ಸರ್ ಬಳಸುವುದು ನಿಮ್ಮ ತ್ವಚೆಯ ಮಾಯಿಶ್ಚರೈಸರ್ ಅನ್ನು ಕಸಿದುಕೊಳ್ಳಬಹುದು ಅಂತೆಯೇ ತ್ವಚೆಯನ್ನು ಒಣಗಿಸಬಹುದು.

ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಬಳಕೆಯನ್ನು ಹೆಚ್ಚಿನ ಮಹಿಳೆಯರು ಮಾಡುವುದಿಲ್ಲ. ಈ ಸಮಯದಲ್ಲಿ ಕೂಡ ಸೂರ್ಯನ ಕಿರಣಗಳು ಪ್ರಬಲವಾಗಿರುತ್ತವೆ ಮತ್ತು ಇವುಗಳು ನಿಮ್ಮ ತ್ವಚೆಯ ಮೇಲೆ ಪ್ರತೀಕೂಲ ಪರಿಣಾಮವನ್ನು ಉಂಟುಮಾಡಬಲ್ಲುದು. ಹೊರಗೆ ಹೋಗುವುದಕ್ಕೆ ಮುಂಚೆ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ಮರೆಯದಿರಿ.

ಚಳಿಗಾದಲ್ಲಿ ಫೇಸ್ ಪ್ಯಾಕ್ ಅದ್ಭುತ ಪರಿಣಾಮವನ್ನು ಉಂಟುಮಾಡಬಲ್ಲುವು. ಇದು ಮುಖಕ್ಕೆ ಪೋಷಣೆಯನ್ನು ಮಾಡಿ ಹೆಚ್ಚು ಒಣಗುವುದರಿಂದ ತಡೆಯುತ್ತದೆ ಮತ್ತು ಒರಟಾಗಿಸುವುದಿಲ್ಲ. ಮನೆಯಲ್ಲೇ ಈ ಫೇಸ್‌ಪ್ಯಾಕ್‌ಗಳನ್ನು ನಿಮಗೆ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಅವೊಕಾಡೊ, ಬಾಳೆಹಣ್ಣು, ಜೇನು ಮೊದಲಾದವುಗಳನ್ನು ಬಳಸಿ ಫೇಸ್‌ಪ್ಯಾಕ್ ತಯಾರಿಸಿಕೊಳ್ಳಿ.

ಚಳಿಗಾದಲ್ಲಿ ನೀರಿನ ಮಹತ್ವ ಅತಿ ಹೆಚ್ಚು ಮುಖ್ಯವಾಗಿದೆ. ಈ ಸಮಯದಲ್ಲಿ ತಂಪು ಗಾಳಿಯು ನಿಮ್ಮಲ್ಲಿರುವ ನೀರಿನ ಅಂಶವನ್ನು ಹೆಚ್ಚು ಖಾಲಿಯಾಗಿಸುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿದು ಡಿಹೈಡ್ರೇಶನ್ ಆಗುವುದನ್ನು ತಪ್ಪಿಸಿಕೊಳ್ಳಿ.

ವಿಟಮಿನ್ ಇ ಆಯಿಲ್ ಅನ್ನು ತ್ವಚೆಗೆ ಬಳಸುವುದು ಮುಖಕ್ಕೆ ಪೋಷಣೆಯನ್ನುಂಟು ಮಾಡುತ್ತದೆ ಮತ್ತು ನ್ಯೂಟ್ರೀನ್ ಅಂಶಗಳನ್ನು ಪೂರೈಸುತ್ತದೆ. ವಾರದಲ್ಲೊಮ್ಮೆ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಮಾಯಿಶ್ಚರೈಸ್ ಮಾಡುವುದನ್ನು ನೀವು ಎಂದಿಗೂ ತಪ್ಪಿಸಬಾರದು. ರಾತ್ರಿ ಮಲಗುವ ಮುನ್ನ ತಪ್ಪದೆಯೇ ಮುಖಕ್ಕೆ ಮಾಯಿಶ್ಚರೈಸ್ ಮಾಡಿ. ಇದರಿಂದ ತ್ವಚೆ ಒಣಗುವುದಿಲ್ಲ ಮತ್ತು ಮರುದಿನ ಬೆಳಗ್ಗೆ ಮೃದುವಾದ ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಳ್ಳುತ್ತೀರಿ.

ಭಾರತೀಯರ ಎಲ್ಲ ಮನೆಗಳಲ್ಲೂ ತುಪ್ಪ ಇದ್ದೇ ಇರುತ್ತದೆ. ನಿಮ್ಮ ಕೈಗಳ ಚರ್ಮಕ್ಕೆ ಒಳಗಿನಿಂದ ತೇವಾಂಶ ನೀಡುವ ಗುಣ ಇದರಲ್ಲಿದೆ. ಅಪ್ಪಟ ತುಪ್ಪದಿಂದ ನಿಮ್ಮ ಬೆರಳುಗಳು ಮತ್ತು ಕೈಗಳ ಚರ್ಮಕ್ಕೆ ತಿಕ್ಕಿ.ಹಚ್ಚಿರುವ ತುಪ್ಪವು ಪೂರ್ಣವಾಗಿ ಹೀರುವವರೆಗೆ ಕೈಗಳಿಗೆ ಮತ್ತು ಕೆನ್ನೆಗೆ ನಯವಾಗಿ ತಿಕ್ಕಿ. ಇದನ್ನು ಪ್ರತಿ ರಾತ್ರಿ ಅನುಸರಿಸಿ, ಬೆಳಗ್ಗೆಯಾಗುವಷ್ಟರಲ್ಲಿ ಕೈಗಳು ಮೃದುಗೊಂಡಿರುತ್ತವೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.