ದ.ಕ ಸಂಪಾಜೆ ಸಹಕಾರಿ ಸಂಘಕ್ಕೆ, ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

Advt_Headding_Middle
Advt_Headding_Middle

ಸಹಕಾರಿ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆ ಮತ್ತು ಕಾರ‍್ಯ ಸಾಧನೆಯನ್ನು ಪರಿಗಣಿಸಿ ೨೦೧೭-೧೮ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಎಂದು ಸುಳ್ಯ ತಾಲೂಕು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯ್ಕೆಯಾಗಿದ್ದು, ನ.೧೫ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ೬೪ನೇ ರಾಜ್ಯ ಮಟ್ಟದ ಅಖಲ ಭಾರತ ಸಹಕಾರ ಸಪ್ತಾಹ ೨೦೧೭ರ ದಿನಾಚರಣೆಯಲ್ಲಿ ನಡೆದ ಸಮಾರಂಭದಲ್ಲಿ ಮೀನುಗಾರಿಕೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್‌ರವರು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಂಗಾಜೆ ಮತ್ತು ವೀರೇಂದ್ರ ಕುಮಾರ್‌ಜೈನ್‌ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಚಿವರಾದ ರಮೇಶ್ ಜಾರಕಿ ಹೊಳಿ, ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ, ಅರಣ್ಯ ಸಚಿವರಾದ ರಮಾನಾಥ ರೈ, ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ದ,ಕ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ , ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಕವಿತಾ ಸನಿಲ್‌ರವರು ಉಪಸ್ಥಿತರಿದ್ದರು. ಸಹಕಾರ ಸಂಘದ ಉಪಾಧ್ಯಕ್ಷರಾದ ಸುಮತಿ ಶಕ್ತಿಮೇಲು, ನಿರ್ದೇಶಕರಾದ ಗಣಪತಿ ಭಟ್, ಜಗದೀಶ ರೈ, ಹಮೀದ್ ಹೆಚ್, ಉಷಾ.ಕೆ.ಯಂ, ಯಮುನ ಬಿ.ಎಸ್ , ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.