ಪಂಜದಲ್ಲಿ ಉತ್ಕರ್ಷ ಸಹಕಾರ ಸೌಧ ಉದ್ಘಾಟನೆ ಸಹಕಾರದಿಂದ ಸಮಾಜ ಉತ್ಕರ್ಷ ಡಾ: ಎಂ.ಎನ್. ರಾಜೇಂದ್ರ ಕುಮಾರ್ ಅಭಿಮತ

೬೪ನೇ ಸಹಕಾರ ಸಪ್ತಾಹ ಹಾಗೂ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉತ್ಕರ್ಷದ ಉದ್ಘಾಟನಾ ಸಮಾರಂಭ ನ.೧೯ರಂದು ಪಂಜದಲ್ಲಿ ನಡೆಯಿತು.
ಉತ್ಕರ್ಷ ಸಹಕಾರ ಸೌಧವನ್ನು ಉದ್ಘಾಟಿಸಿದ ಸಹಕಾರ ರತ್ನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ದ.ಕ.-ಉಡುಪಿ ಜಿಲ್ಲೆಯಲ್ಲಿ ಸಹಕಾರ ಚಳವಳಿ ಆಳವಾಗಿ ಬೇರೂರಿದೆ. ಜನರಿಗೆ ಸುಲಭವಾಗಿ ತಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಇಲ್ಲಿಯ ಸಹಕಾರ ಸಂಘ ಗಳಿಂದ ದೊರೆಯುವುದರಿಂದ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆಗಳಾಗುವುದಿಲ್ಲ. ಇಂದು ಪಂಜ ಸಹಕಾರ ಸಂಘದವರು ಉತ್ಕರ್ಷ ಎಂಬ ಭವ್ಯಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದಾರೆ. ಸಹಕಾರ ತತ್ವದಿಂದ ಮಾತ್ರ ಸಮಾಜದ ಉತ್ಕರ್ಷ ಸಾಧ್ಯ ವಾಗುತ್ತದೆ. ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *