ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ಪಂದ್ಯಾಟ: ಕುಮಾರಸ್ವಾಮಿ ಪ್ರಥಮ

Advt_Headding_Middle

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಆಶ್ರಯದಲ್ಲಿ ೧೪ ನೇ ವರ್ಷದ ಕಬಡ್ಡಿ ಪಂದ್ಯಾಟ ನಡೆದಿದ್ದು ಸಂಜೆ ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭ ವೀರಮಾರುತಿ ಅಧ್ಯಕ್ಷ ದಯಾನಂದ ಪೈಕ, ಕಿರಣ್ ಬುಡ್ಲೆಗುತ್ತು, ಗಿರೀಶ್ ಕೊರಂಬಟ, ವೆಂಕಟ್ ವಳಲಂಬೆ, ನಿರ್ಮಲ, ದೇವಿಪ್ರಸಾದ್ ತುಂಬತ್ತಾಜೆ, ಅಚ್ಯುತ ಗುತ್ತಿಗಾರು, ವೆಂಕಟ್ರಮಣ ಕೊಚ್ಚಿ, ಲೋಹಿತ್ ಚೈಪೆ, ಜಾರ್ಜ್ ಕೆ.ಎಂ, ಹರ್ಷಿತ್ ಕೊಂರ್ಬಟ, ಪ್ರಶಾಂತ್ ಬಾಕಿಲ, ಮಾಯಿಲಪ್ಪ ಕೊಂಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಮಾಧವ ಎರ್ದಡ್ಕ ಸ್ವಾಗತಿಸಿ, ಪ್ರಶಾಂತ್ ಬಾಕಿಲ ವಂದಿಸಿದರು. ಗದಾಧರ ಬಾಳುಗೋಡು ಕಾರ್ಯಕ್ರಮ ನಿರೂಪಿಸಿದರು. ಪುರುಷರ ಕಬಡ್ಡಿ ಪಂದ್ಯದಲ್ಲಿ ಮಹಾವಿಷ್ಣು ಮಾವಿನ ಕಟ್ಟೆ, ಆದರ್ಶ ಬಾಳಿಲ, ಆದಿಶಕ್ತಿ ಬಾಕಿಲ, ಮಯೂರ ಶ್ರೀ ಕಟ್ಟ ಕೊಲ್ಲಮೊಗ್ರು ತಂಡಗಳು ಬಹುಮಾನ ಪಡೆಯಿತು. ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯದಲ್ಲಿ ಕುಮಾರಸ್ವಾಮಿ ಪ್ರೌಢಶಾಲೆ ಸುಬ್ರಹ್ಮಣ್ಯ, ಸರಕಾರಿ ಪಿ.ಯು ಕಾಲೇಜ್ ಗುತ್ತಿಗಾರು, ತೆಕ್ಕಿಲ್ ಪ್ರೌಢಶಾಲೆ ಗೂನಡ್ಕ, ಎನ್.ಎಂ.ಪಿ.ಯು ಅರಂತೋಡು ತಂಡಗಳು ಬಹುಮಾನ ಪಡೆದು ಕೊಂಡವು. ಉತ್ತಮ ದಾಳಿಗಾರನಾಗಿ ದೀಪಕ್ ಬಾಳಿಲ, ಕೌಶಿಕ್ ತೆಕ್ಕಿಲ್ ಶಾಲೆ, ಉತ್ತಮ ಹಿಡಿತಗಾರರಾಗಿ ಸಂಶುದ್ದೀನ್ ಬಾಳಿಲ, ಖಲಂದರ್ ಗುತ್ತಿಗಾರು ಶಾಲೆ, ಸರ್ವಾಂಗೀಣ ಆಟಗಾರರಾಗಿ ಗುರುಪ್ರಸಾದ್ ಮಾವಿನಕಟ್ಟೆ, ಕೌಶಿಕ್ ಕುಮಾರಸ್ವಾಮಿ ಶಾಲೆ, ಶಿಸ್ತು ಬದ್ಧ ತಂಡವಾಗಿ ಕೆ.ಕೆ ಬ್ರದರ್ಸ್ ಚೆಂಬು ಆಯ್ಕೆಯಾದರು. ಕಾರ್ಯಕ್ರಮ ಯಶಸ್ವಿಗೆ ವೀರಮಾರುತಿ ಮಾರುತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ದುಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.