ಐಶ್ವರ್ಯ ಬ್ಯೂಟಿ ಕೇರ್ ಮತ್ತು ಫ್ಯಾಶನ್ಸ್ ಶುಭಾರಂಭ

ಸುಳ್ಯದ ರಥಬೀದಿಯಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಜಯಶೀಲಾ ಜಯರಾಮ್ ಮಾಲಕತ್ವದ ಐಶ್ವರ್ಯ ಬ್ಯೂಟಿ ಕೇರ್ ಮತ್ತು ಫ್ಯಾಶನ್ಸ್ ನ.೨೪ರಂದು ಶುಭಾರಂಭಗೊಂಡಿತು. ಐಶ್ವರ್ಯ ಬ್ಯೂಟಿ ಕೇರ್‌ನ್ನು ಸುಳ್ಯ ಕೆ.ಎಫ್.ಡಿ.ಸಿ. ಉದ್ಯಾನವನ ಆಸ್ಪತ್ರೆಯ ವೈದ್ಯಾಧಿಕಾರಿ ಐ.ಎಂ.ಎ. ಅಧ್ಯಕ್ಷೆ ಡಾ| ಸಾಯಿಗೀತಾ ಜ್ಞಾನೇಶ್ ಉದ್ಘಾಟಿಸಿದರು. ಹಾಗೂ ಐಶ್ವರ್ಯ ಫ್ಯಾಶನ್ಸ್‌ನ್ನು ಸುಳ್ಯ ಕೆ.ವಿ.ಜಿ. ಆಸ್ಪತ್ರೆಯ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಹಾಗೂ ಐ.ಎಂ.ಎ. ಕಾರ್ಯದರ್ಶಿ ಡಾ| ಗೀತಾ ದೊಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಲೇಡಿಸ್ ಬ್ಯೂಟಿ ಎಸೋಸಿಯೇಶನ್ ಅಧ್ಯಕ್ಷೆ ಶ್ರೀಮತಿ ಬಬಿತಾ ಶೆಟ್ಟಿ, ನಗರ ಪಂ.ಸದಸ್ಯೆ ಶ್ರೀಮತಿ ಪ್ರೇಮಾ ಟೀಚರ್, ಸುಳ್ಯ ಶ್ರೀದೇವಿ ಕಾಂಪ್ಲೆಕ್ಸ್ ಮಾಲಕರಾದ ಗೋಪಾಲಕೃಷ್ಣ ದಂಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಮಾಲಕರಾದ ಜಯಶೀಲ ಜಯರಾಮ್ ಹಾಗೂ ಸಿಬ್ಬಂದಿಗಳು, ಬಂದು ಮಿತ್ರರು ಉಪಸ್ಥಿತರಿದ್ದರು. ಶರೀಪ್ ಜಟ್ಟಿಪಳ್ಳ, ಶಾಹಿನಾ ಸುಳ್ಯ ಸ್ವಾಗತಿಸಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *