ಕಲ್ಲಗದ್ದೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಪ್ರತಿಮಾ ಮೆರವಣಿಗೆ ಮತ್ತು ಆಶ್ಲೇಷಾ ಬಲಿ

ಕೊಡಿಯಾಲ ಗ್ರಾಮದ ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಸಾರ್ವಜನಿಕ ಆಶ್ಲೇಷಾ ಬಲಿ ಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದೊಂದಿಗೆ ಅರ್ಚಕ ಡಿ.ಶಿವ ಭಟ್‌ರವರ ನೇತೃತ್ವದಲ್ಲಿ ಸಾರ್ವಜನಿಕ ಆಶ್ಲೇಷಾ ಬಲಿ, ಕುಣಿತ ಭಜನೆ, ಯಕ್ಷಗಾನ ವೇಷ, ಚೆಂಡೆವಾದನದೊಂದಿಗೆ ಪ್ರತಿಮಾ ಮೆರವಣಿಗೆ ನ.೨೫ ರಂದು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಗಂಟೆ ೬.೦೦ ಕ್ಕೆ ಉಷಾ ಪೂಜೆ ನಡೆದ ಬಳಿಕ ಭಜನಾ ಪ್ರಾರಂಭಗೊಂಡಿತು. ನಂತರ ಆಹ್ವಾನಿತ ತಂಡಗಳ ವಿಶೇಷ ಆಕರ್ಷಣೆಯಾಗಿ ಕುಣಿತ ಭಜನೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ಭಜನಾ ಮಂದಿರ ಕಲ್ಪಣೆ ಇಲ್ಲಿಂದ ನಾಗನ ಪ್ರತಿಮಾ ಮೆರವಣಿಗೆ ನೂರಾರು ಜನ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ನಡೆಯಿತು.
ಮದ್ಯಾಹ್ನ ಶ್ರೀ ದೇವರಿಗೆ ಷಷ್ಠಿ ವಿಶೇಷ ಪೂಜೆ ನಡೆಯಿತು. ನಂತರ ಶ್ರೀ ಆಶ್ಲೇಷಾ ಬಲಿ ಮಹಾಪೂಜೆ, ಕರ್ಮಚಿಂತನೆ,ಬ್ರಹ್ಮಾರ್ಪಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳ್ತೆದಾರರಾದ ಶ್ರೀಮತಿ ವಿಜಯಲಕ್ಷ್ಮೀ ಜಯರಾಮ ರೈ ಮತ್ತು ಮಕ್ಕಳು ಶ್ರೀ ಸುಬ್ರಹ್ಮಣ್ಯ ಸೇವಾ ಸಮಿತಿ ಮತ್ತು ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅರ್ಚಕ ಡಿ. ಶಿವಭಟ್ ಮತ್ತು ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೈಲೈಟ್ಸ್ : ಪ್ರತಿಮಾ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಚೆಂಡೆವಾದನ ,ಯಕ್ಷಗಾನ ವೇಷ, ಪೂರ್ಣಕುಂಭ ಸ್ವಾಗತದೊಂದಿಗೆ ವಿಶೇಷ ಆಕರ್ಷಣೆಯೊಂದಿಗೆ ಮೆರವಣಿಗೆ ನಡೆಯಿತು.
ಸುಡುಮದ್ದಿನ ವ್ಯವಸ್ಥೆ ಇತ್ತು.
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪಾನಕದ ವ್ಯವಸ್ಥೆ,ಶರಬತ್, ಕಾಫಿ ತಿಂಡಿ ಮದ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
ದೇವಸ್ಥಾನವನ್ನು ತೋರಣಗಳಿಂದ ಅಲಂಕರಿಸಲಾಗಿತ್ತು.
ಭಕ್ತಾದಿಗಳಿಗೆ ವಾಹನದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.