Breaking News

ನಿಮ್ಮ ಮನೆಯ ಸ್ವಚ್ಛತೆ ನಿಮ್ಮ ಕೈಯಲ್ಲಿ

Advt_Headding_Middle
Advt_Headding_Middle

ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆಗೆ ಮನೆಯ ಬಚ್ಚಲು ಮನೆ ಮತ್ತು ಶೌಚಾಲಯವನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಏಕೆಂದರೆ ಇವೆರಡೂ ಸ್ಥಳಗಳು ಸ್ವಚ್ಛವಾಗಿದ್ದರೆ ನಿಮ್ಮ ಮನೆಯಲ್ಲಿರುವವರ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಮನೆಗೆ ಬಂದವರೂ ಕೂಡ ನಿಮ್ಮನ್ನು ಪ್ರಶಂಸಿಸುತ್ತಾರೆ. ಹೆಚ್ಚಿನ ಮನೆಗಳಲ್ಲಿ ಬಚ್ಚಲು ಮತ್ತು ಶೌಚಾಲಯದ ನಿರ್ಮಾಣಕ್ಕೆ ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಕೀಟಾಣುಗಳು, ಸೂಕ್ಷ್ಣ್ಮಾಣು ಜೀವಿಗಳು ಈ ಭಾಗದಿಂದಲೇ ಕೂಡಲೇ ಉತ್ಪಾದನೆಯಾಗುವುದರಿಂದ ನೀವು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ನಿತ್ಯವೂ ಬಚ್ಚಲಿನ ಸ್ವಚ್ಛತೆ ನಿಮ್ಮಿಂದ ಸಾಧ್ಯವಿಲ್ಲ ಎಂದಾದಲ್ಲಿ ವಾರಕ್ಕೊಮ್ಮೆಯಾದರೂ ಭಾಗವನ್ನು ನೀವು ಸ್ವಚ್ಛಗೊಳಿಸಲೇಬೇಕು.
ಬಚ್ಚಲು ಮನೆಯ ಸ್ವಚ್ಛತೆಗೆ ನೀವು ಆದ್ಯತೆ ನೀಡುತ್ತೀರಿ ಎಂದಾದಲ್ಲಿ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಂಡು ಈ ಭಾಗದ ಸ್ವಚ್ಛತೆಯನ್ನು ಮಾಡಿ. ನಿಮ್ಮ ಮನೆಯ ಸ್ವಚ್ಛತೆ ಆರಂಭಗೊಳ್ಳುವುದೇ ಬಚ್ಚಲಿನಿಂದ ಎಂಬುದನ್ನು ಮಾತ್ರ ಮರೆಯದಿರಿ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಬಚ್ಚಲಿನ ಸ್ವಚ್ಛತೆಯನ್ನು ಮಾಡಿದರೆ ನಿಮ್ಮ ಬಚ್ಚಲು ಹೊಳೆಯುವುದು ಖಂಡಿತ. ಮತ್ತು ನಿಮಗೂ ಪ್ರಶಂಸೆ ಲಭಿಸುವುದು. ಹಾಗಿದ್ದರೆ ಬನ್ನಿ ಆ ಅಂಶಗಳೇನು ಎಂಬುದನ್ನು ಇಲ್ಲಿ ನೋಡೋಣ…
ಝಗಮಗಿಸುವ ಬಚ್ಚಲು ಕೋಣೆ ನಿಮ್ಮದಾಗಬೇಕು ಎಂದಾದಲ್ಲಿ ಈ ವಿಧಾನಗಳನ್ನು ಅನುಸರಿಸಿ
ಕಸದ ಡಬ್ಬಿ ಸ್ವಚ್ಛವಾಗಿರಲಿ
ನಿಮ್ಮ ಬಚ್ಚಲಿನಲ್ಲಿ ನೀವು ಕಸದ ಡಬ್ಬಿಯನ್ನು ಇರಿಸುತ್ತೀರಿ ಎಂದಾದಲ್ಲಿ ಅದನ್ನು ನಿತ್ಯವೂ ಸ್ವಚ್ಛಮಾಡಿ. ಕಸ ತುಂಬಿ ತುಳುಕಾಡುವವರೆಗೆ ಕಾಯಬೇಡಿ. ಏಕೆಂದರೆ ಸ್ವಲ್ಪ ಚೆಲ್ಲಿದ ಕಸ ಕೂಡ ನಿಮ್ಮ ಬಚ್ಚಲನ್ನು ಅಸಹ್ಯದ ತಾಣವನ್ನಾಗಿಸಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಗಮನ ಹರಿಸಿ.

ಝಗಮಗಿಸುವ ಬಚ್ಚಲು ಕೋಣೆ ನಿಮ್ಮದಾಗಬೇಕು ಎಂದಾದಲ್ಲಿ ಈ ವಿಧಾನಗಳನ್ನು ಅನುಸರಿಸಿ
ಎಕ್ಸಾಸ್ಟ್ ಫ್ಯಾನ್ ಆನ್ನಲ್ಲಿಡಿ
ನಿಮ್ಮ ಬಚ್ಚಲನ್ನು ಸ್ವಚ್ಛ ಮತ್ತು ವಾಸನೆರಹಿತವನ್ನಾಗಿ ಇರಿಸಬೇಕು ಎಂದಾದಲ್ಲಿ ಇಲ್ಲಿರುವ ಎಕ್ಸಾಸ್ಟ್ ಫ್ಯಾನ್ ಅನ್ನು ಯಾವಾಗಲೂ ಆನ್ ಮಾಡಿರಿ. ಮನೆಯಿಂದ ಹೊರಹೋಗುವ ಮುನ್ನ ಇದನ್ನು ಆಫ್ ಮಾಡಲು ಮರೆಯದಿರಿ.
ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿ
ನೀವು ಬ್ರಶ್ ಮಾಡಿಕೊಂಡಿರುವಾಗಲೇ ಬಚ್ಚಲಿನ ಕೆಲವೊಂದು ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಬಚ್ಚಲಿನ ಸಿಂಕ್ ಅನ್ನು ಸ್ವಚ್ಛಮಾಡಿ. ಇದರಿಂದ ಹಲ್ಲುಜ್ಜಿದ ನಂತರ ಉಂಟಾಗುವ ಕೊಳಕು ನಿವಾರಣೆಯಾಗುತ್ತದೆ. ನಂತರ ಸಿಂಕ್ ಅನ್ನು ಚೆನ್ನಾಗಿ ನೀರು ಹರಿಸಿ ತೊಳೆದುಕೊಳ್ಳಿ. ಇದರಿಂದ ಮುಂಜಾನೆಯೇ ನಿಮ್ಮ ಬಚ್ಚಲಿನ ಸಿಂಕ್ ಅನ್ನು ನಳನಳಿಸುವಂತೆ ಇರಿಸಿಕೊಳ್ಳಬಹುದು.
ಬಚ್ಚಲಿನ ಗೋಡೆಗಳನ್ನು ತೊಳೆಯಲು ಮರೆಯದಿರಿ
ಸ್ನಾನವಾದ ನಂತರ ಬಚ್ಚಲಿನ ಗೋಡೆಗಳನ್ನು ತೊಳೆಯಲು ಮರೆಯದಿರಿ. ನೀರು ಮತ್ತು ವಿನೇಗರ್ ಅನ್ನು ಬಳಸಿಕೊಂಡು ಗೋಡೆಗಳ ಸ್ವಚ್ಛತೆಯನ್ನು ನಿಮಗೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಸಮಯ ಕೂಡ ಉಳಿತಾಯವಾಗುತ್ತದೆ.

ಝಗಮಗಿಸುವ ಬಚ್ಚಲು ಕೋಣೆ ನಿಮ್ಮದಾಗಬೇಕು ಎಂದಾದಲ್ಲಿ ಈ ವಿಧಾನಗಳನ್ನು ಅನುಸರಿಸಿ
ನಿಮ್ಮ ಶವರ್ ಹೆಡ್ ಸ್ವಚ್ಛತೆ ಮರೆಯದಿರಿ
ಮಲಗುವ ಮುಂಚೆ, ನಿಮ್ಮ ಶವರ್ ಹೆಡ್ ಅನ್ನು ವಿನೇಗರ್ನಲ್ಲಿ ಮುಳುಗಿಸಿಡಿ. ಮರುದಿನ ಬೆಳಗ್ಗೆ ಇದನ್ನು ಹೊಳೆಯುತ್ತಿರುತ್ತದೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.