ಅಜ್ಜಾವರ ಗ್ರಾ.ಪಂ. ಅಧ್ಯಕ್ಷರಾಗಿ ಬೀನಾ ಕರುಣಾಕರ ಆಯ್ಕೆ

Advt_Headding_Middle
Advt_Headding_Middle

ಪ್ರಸಾದ್ ರೈ ಮೇನಾಲರವರ ರಾಜೀನಾಮೆಯಿಂದ ತೆರವಾಗಿದ್ದ ಅಜ್ಜಾವರ ಗ್ರಾ.ಪಂ.ನ ನೂತನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೀನಾ ಕರುಣಾಕರ ಗೌಡರು ೯ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಅಜ್ಜಾವರ ಗ್ರಾ.ಪಂ.ನಲ್ಲಿ ೧೮ ಸದಸ್ಯ ಬಲವಿದೆ. ಕಾಂಗ್ರೆಸ್ ಬೆಂಬಲಿತ ೧೦ ಸದಸ್ಯರು, ಬಿಜೆಪಿ ಬೆಂಬಲಿತ ೮ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾಗಿರುವ ಕರುಣಾಕರ ಗೌಡ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ಬೀನಾ ಕರುಣಾಕರ ಗೌಡರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು ಮತ ಎಣಿಕೆಗೊಂಡಾಗ ಬೀನಾ ಕರುಣಾಕರ ೯ ಮತಗಳನ್ನು ಪಡೆದು ಅಧ್ಯಕ್ಷರಾದರು. ಕಾಂಗ್ರೆಸ್ ಬೆಂಬಲಿತ ಕರುಣಾಕರ ಗೌಡರು ೮ ಮತ ಪಡೆದುಕೊಂಡರು. ೧ ಮತ ಅಸಿಂಧುಗೊಂಡಿತು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಎಂ.ಎಂ.ಗಣೇಶ್ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.