ತಂದೆಯ ಕೊಲೆ : ಪುತ್ರ ದೋಷಮುಕ್ತಿ


ಕುಡಿದು ಬಂದು ಪತ್ನಿ ಮತ್ತು ಮಕ್ಕಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಹೊಡೆದು ಕೊಲೆ ಮಾಡಿದರೆಂಬ ಆರೋಪಕ್ಕೊಳಗಾಗಿರುವ ಪುತ್ರ ದೋಷಮುಕ್ತಗೊಂಡಿದ್ದಾನೆ. ಬೆಳ್ಳಾರೆ ಗ್ರಾಮದ ಪಾಟಾಜೆಯ ಬಾಬು ಪ್ರತಿನಿತ್ಯ ಕುಡಿದು ಬಂದು ಅವರ ಪತ್ನಿ ವಿಮಲ ಮತ್ತು ಮಕ್ಕಳಿಗೆ ಕ್ಷುಲ್ಲಕ ವಿಚಾರದಲ್ಲಿ ಜಗಳವಾಡಿ ವಿನಾಕಾರಣ ತೊಂದರೆ ನೀಡುತ್ತಿದ್ದರೆಂದೂ, ಈ ವಿಚಾರದಲ್ಲಿ ಕೋಪಗೊಂಡ ಪುತ್ರ ಕುಮಾರ ಎಂಬಾತ ತಂದೆ ಬಾಬುವನ್ನು ೨೦೧೭ನೇ ಫೆಬ್ರವರಿ ೧೮ಮತ್ತು ೧೯ರ ಮಧ್ಯೆ ಮನೆಯ ಅಂಗಳದಲ್ಲಿ ಮಲಗಿದ್ದಲ್ಲಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದೂ ಕುಮಾರನ ವಿರುದ್ಧ ಕೇಸು ದಾಖಲಿಸಿ ಸುಳ್ಯ ಪೋಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸುಮಾರು ೨೩ ಸಾಕ್ಷಿಗಳ ವಿಚಾರಣೆಯನ್ನು ಅಭಿಯೋಜನೆಯ ಪರವಾಗಿ ನಡೆಸಲಾಗಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಅವರು ಅರೋಪಿ ಕುಮಾರನ ವಿರುದ್ಧ ಆರೋಪ ಸಾಬೀತು ಪಡಿಸುವಲ್ಲಿ ಅಭಯೋಜನೆ ವಿಫಲವಾಗಿದೆ ಎಂಬ ಕಾರಣ ನೀಡಿ ಆರೋಪಿಯನ್ನು ನ೨೭ರಂದು ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಸುಳ್ಯ ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡ, ಮತ್ತು ರಾಜೇಶ್ ಬಿ.ಜಿ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *