ಸುಳ್ಯದಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ ಕಛೇರಿ ಉದ್ಘಾಟನೆ

Advt_Headding_Middle
Advt_Headding_Middle

ಕಳೆದ ೧೧ ವರ್ಷಗಳಿಂದ ಮಂಗಳೂರಿನಲ್ಲಿ ವಕೀಲ ವೃತ್ತಿ ನಿರ್ವಹಿಸುತಿದ್ದ ಕೊಲ್ಲಮೊಗ್ರುವಿನ ಕುಂಞೇಟ್ಟಿ ಲೋಕಯ್ಯ ಗೌಡ ಅವರ ಪುತ್ರ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ ಅವರ ನೂತನ ಕಛೇರಿ ಡಿ.೭ ರಂದು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ಎರಡನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಕಛೇರಿಯನ್ನು ಬಾರ್ ಕೌನ್ಸಿಲ್ ಇಂಡಿಯಾದ ಸದಸ್ಯ ಎಸ್.ಎಲ್ ಬೋಜೇ ಗೌಡ ಚಿಕ್ಕಮಗಳೂರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಿಯ ವಕೀಲ ಎಸ್ ಪಿ ಚಂಗಪ್ಪ, ಸುಳ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಪಿ ಬಾಸ್ಕರ ರಾವ್ ಭಾಗವಹಿಸಲಿದ್ದಾರೆ. ಸುಳ್ಯದಲ್ಲಿ ಅಲ್ಲದೆ ಮಂಗಳೂರಿನಲ್ಲಿ ಕರಂಗಲ್ಪಾಡಿಯಲ್ಲಿ ಮೆಡಿಫೇರ್ ಕಾಂಪ್ಲೆಕ್ಸ್ ನಲ್ಲಿ ಈಗಾಗಲೇ ಕಳೆದ ೧೧ ವರ್ಷಗಳಿಂದ ವಕೀಲ ಕಛೇರಿಯನ್ನು ಹೊಂದಿದ್ದಾರೆ. ಪ್ರದೀಪ್ ಅವರು ಮಂಗಳೂರಿನ ಧರ್ಮಸ್ಥಳ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುತ್ತಾರೆ. ಪೂನಾದಲ್ಲಿ ಪತ್ತೆಗಾರಿಕೆ ವಿಜ್ಞಾನದಲ್ಲಿ ಡಿಪ್ಲೋಮಾ ವನ್ನು ಪಡೆದಿರುತ್ತಾರೆ ಉತ್ತಮ ಕ್ರೀಡಾಪಟುವಾಗಿರುವ ಇವರು, ಕರಾಟೆ ಪಟುವು ಹೌದು. ಪದವಿ ಶಿಕ್ಷಣದ ಸಂಧರ್ಭ ಇವರು ರಾಷ್ಟ್ರೀಯ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದವರಾಗಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.