ಕನಕಮಜಲಿನ ಪಂಜಿಗುಂಡಿಯಲ್ಲಿ ಸೀಯಾಳ ಪಿಕಪ್‌ ಪಲ್ಟಿ: ಲಾರಿ ಮಾಲಕ ಮೃತ್ಯು

ಸೀಯಾಳ ತುಂಬಿಕೊಂಡು ಹೋಗುತ್ತಿದ್ದ ಪಿಕಪ್‌ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಘಟನೆ ಕನಕಮಜಲಿನ ಪಂಜಿಗುಂಡಿ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಲಾರಿ ಮೈಸೂರಿನಿಂದ ಉಳ್ಳಾಲಕ್ಕೆ ಸೀಯಾಳ ತುಂಬಿಕೊಂಡು ಹೋಗುತ್ತಿತ್ತು ಎನ್ನಲಾಗಿದೆ.ಪಿಕಪ್ ಬಿದ್ದ ಪರಿಣಾಮ ಲಾರಿಯ ಮಾಲಕರಿಗೆ ಹೆಚ್ಚಿನ ಗಾಯವಾಗಿದ್ದು ಸ್ಥಳೀಯ ಯುವಕರ ನೆರವಿನಿಂದ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಿಕಪ್‌ ಚಾಲಕ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *