ವಿದ್ಯಾರ್ಥಿನಿಯ ಅತ್ಯಾಚಾರದ ಆರೋಪ ವಿದ್ಯಾರ್ಥಿ ಅರೆಸ್ಟ್ – ನ್ಯಾಯಾಂಗ ಬಂಧನ

ಒಂದೇ ಕಾಲೇಜಿನ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಪ್ರೀತಿಸಿ, ಬಳಿಕ ಮದುವೆಯ ಭರವಸೆ ನೀಡಿದ ವಿದ್ಯಾರ್ಥಿ ಆಕೆಯನ್ನು ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿ, ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆ ವಿದ್ಯಾರ್ಥಿಯನ್ನು ಪೋಲೀಸರು ಬಂಧಿಸಿದ್ದಾರೆ.
ಐವತ್ತೊಕ್ಲು ಗ್ರಾಮದ ರಕ್ಷಿತ್ ಎಂಬಾತ ಹಾಗೂ ಎಣ್ಮೂರು ಗ್ರಾಮದ ೧ಯುವತಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಅವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದೂ, ೯.೯.೨೦೧೭ರಂದು ಯುವಕ ಆಕೆಯನ್ನು ತನ್ನ ಮನೆಯಲ್ಲಿ ಕಾರ್ಯಕ್ರಮ ಇದೆಯೆಂದು ತನ್ನ ಮನೆಗೆ ಕರೆಸಿಕೊಂಡು ಬಲವಂತವಾಗಿ ಅತ್ಯಾಚಾರ ನಡೆಸಿದನೆಂದೂ ಆರೋಪಿಸಲಾಗಿದೆ. ಈ ಕುರಿತು ಯುವತಿ ಸುಳ್ಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ ಮೇರೆಗೆ ಸಾಂತ್ವನ ಕೇಂದ್ರದವರು ಯುವಕ ಮತ್ತು ಆತನ ಮನೆಯವರಿಗೆ ನೋಟೀಸು ಮಾಡಿದರೆಂದೂ ಆದರೆ ಯುವಕ ಮತ್ತು ಮನೆಯವರು ಬರಲಿಲ್ಲವೆಂದೂ ತಿಳಿದು ಬಂದಿದೆ. ಬೇರೆ ದಾರಿ ಕಾಣದೆ ಯುವತಿ ಸರ್ಕಲ್ ಇನ್‌ಸ್ಪೆಕ್ಟರ್‌ರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಸರ್ಕಲ್‌ರವರು ಯುವಕ ಮತ್ತು ಮನೆಯವರನ್ನು ಕರೆಸಿ ವಿಚಾರಣೆ ನಡೆಸಿದರು. ಆದರೆ ಮದುವೆಗೆ ಅವರು ನಿರಾಕರಿಸಿದರೆನ್ನಲಾಗಿದ್ದು ಆಕೆ ನ.೨೬ರಂದು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದಳು. ಪೋಲೀಸರು ನ.೨೭ರಂದು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

 

About The Author

Related posts

Leave a Reply

Your email address will not be published. Required fields are marked *