ಕೊಳ್ತಿಗೆ : ಮಹಿಳೆ ಆತ್ಮಹತ್ಯೆ ಬೆಳ್ಳಾರೆ ಠಾಣೆಯಲ್ಲಿ ಕೇಸು ದಾಖಲು

ಕೊಳ್ತಿಗೆ ಗ್ರಾಮದ ಪೂಜಾರಿ ಮನೆ ಎಂಬಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.೧೧ ರಂದು ನಡೆದಿದೆ. ಪೂಜಾರಿಮನೆ ವಸಂತ ಗೌಡ ಎಂಬವರ ಪತ್ನಿ ರಮ್ಯಾ (೨೮) ಆತ್ಮಹತ್ಯೆ ಮಾಡಿಕೊಂಡವರು.
ಮನೆಯಲ್ಲಿ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೋಂಡಿದ್ದಾರೆ.ಇವರು ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಪುತ್ತೂರು ತಹಶೀಲ್ದಾರರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕಲ್ಮಡ್ಕ ಗ್ರಾಮದ ಜೋಗಿಬೆಟ್ಟು ರಾಧಾಕೃಷ್ಣ ಗೌಡರ ಪುತ್ರಿಯಾಗಿದ್ದ ರಮ್ಯಾರವರನ್ನು ಕೆಲವು ವರ್ಷಗಳ ಹಿಂದೆ ಕೊಳ್ತಿಗೆ ಪೂಜಾರಿಮನೆ ವಸಂತ ಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ೫ ತಿಂಗಳ ಗಂಡು ಮಗುವೊಂದಿದೆ.
ತಂದೆಯಿಂದ ಪೊಲೀಸು ದೂರು: ರಮ್ಯಾರವರ ತಂದೆ ಬೆಳ್ಳಾರೆ ಠಾಣೆಗೆ ಬಂದು ತನ್ನ ಮಗಳಿಗೆ ಅವಳ ಗಂಡ ವಸಂತ ಮತ್ತು ಅತ್ತೆ ಕಮಲ ಹಾಗೂ ಮನೆಯವರು ಮಾನಸಿಕ ಹಿಂಸೆ ನೀಡಿದ್ದರಿಂದ ಅವಳು ಹುಷಾರಿಲ್ಲದೆ ಆಗಿ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ನ.೧೪ ರಂದು ದೂರು ನೀಡಿದ್ದಾರೆ. ಈ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *