ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಕರಪತ್ರ ತೆರವುಗೊಳಿಸಿದ ಪೊಲೀಸರು

ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾದವರು ಬೆಳ್ಳಾರೆ ಪೇಟೆಯ ಬಸ್ ನಿಲ್ದಾಣ ಹಾಗೂ ಅಲ್ಲಲ್ಲಿ ಗೋಡೆಗಳ ಮೇಲೆ ಪರವಾನಿಗೆ ಇಲ್ಲದೆ ಅಂಟಿಸಿದ “ನಾವು ಮರೆಯದಿರೋಣ ದ್ರೋಹದ ೨೫ ವರ್ಷಗಳು, ಬಾಬರಿ ಮಸ್ಚಿದ್ ಪುನರ್ ನಿರ್ಮಿಸೋಣ” ಎಂಬ ಘೋಷಣೆಯ ಕರಪತ್ರಗಳನ್ನು ಬೆಳ್ಳಾರೆ ಪಂಚಾಯತ್ ನೆರವಿನೊಂದಿಗೆ ಪೊಲೀಸರು ತೆರವುಗೊಳಿಸಿದ್ದಾರೆ. ಡಿ.೪ರಂದು ರಾತ್ರಿ ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಯುವಕರು ಈ ಕರಪತ್ರಗಳನ್ನು ಅಲ್ಲಲ್ಲಿ ಅಂಟಿಸಿದ್ದರು. ಇದನ್ನು ಪಂಚಾಯತ್ ಸಿಬ್ಬಂದಿಗಳು ಹಾಗೂ ಬೆಳ್ಳಾರೆ ಪೊಲೀಸರು ಹರಿದು ತೆಗೆದು ಕಸ ಸಾಗಾಟದ ವಾಹನದಲ್ಲಿ ಸಾಗಿಸಿದರು.

About The Author

Related posts

Leave a Reply

Your email address will not be published. Required fields are marked *