ಬೈಕ್ ಬೈಕ್ ಡಿಕ್ಕಿ : ಸವಾರರಿಗೆ ಗಾಯ, ಪೊಲೀಸ್ ದೂರು


ಬಾಳಿಲ ಎಂಬಲ್ಲಿ ಬೈಕ್‌ಗಳೆರಡು ಪರಸ್ಪರ ಢಿಕ್ಕಿ ಹೊಡೆದುಕೊಂಡು ಸವಾರರು ಗಾಯಗೊಂಡ ಘಟನೆ ಡಿ. ೩ರಂದು ರಾತ್ರಿ ನಡೆದಿದೆ. ಬೆಳ್ಳಾರೆ ಕಡೆಯಿಂದ ನಿಂತಿಕಲ್ಲು ಕಡೆಗೆ ಚನಿಯ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಹಾಗೂ ರವಿಚಂದ್ರ ಎಂಬವರು ನಿಂತಿಕಲ್ಲು ಕಡೆಯಿಂದ ಬೆಳ್ಳಾರೆ ಕಡೆಗೆ ಬರುತ್ತಿದ್ದಾಗ ಬಾಳಿಲ ಎಂಬಲ್ಲಿ ಪರಸ್ಪರ ಢಿಕ್ಕಿ ಹೊಡೆದುಕೊಂಡು ಬೈಕ್ ಚಲಾಯಿಸುತ್ತಿದ್ದ ಚನಿಯ, ಹಿಂಬದಿ ಸವಾರ ವಿಶ್ವನಾಥ ಹಾಗೂ ರವಿಚಂದ್ರ ಎಂಬವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಎರಡೂ ಬೈಕ್‌ಗಳಿಗೂ ಹಾನಿಯಾಗಿದೆ. ಚನಿಯ ಎಂಬವರು ಬೆಳ್ಳಾರೆ ಠಾಣೆಗೆ ಬಂದು ರವಿಚಂದ್ರ ಎಂಬವರು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಬೈಕ್ ಚಲಾಯಿಸಿ ನನ್ನ ಬೈಕಿಗೆ ಢಿಕ್ಕಿ ಹೊಡೆದಿದ್ದಾರೆಂದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *