ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ


ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಕಡಿಹೈ ಮಾರ್ಷಲ್ ಅಕಾಡಮಿ ಶಿಟೊ ರೊ ಕರಾಟೆ-ಡು ಕರ್ನಾಟಕ ಆಸರೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಮನ್ಯು ಪಿ ರೈ, ಬ್ಲ್ಯಾಕ್ ಬೆಲ್ಟ್ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನದ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಾನ್ವಿ ಪಿ ರೈ ಪರ್ಪಲ್ ಬೆಲ್ಟ್ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ಪ್ರಥಮ ಹಾಗೂ ಕಟಾ ಗ್ರೂಫ್ ವಿಭಾಗದಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರಾಟೆ ಶಿಕ್ಷಕ ದಿನೇಶ್ ಎಂ.ಬಿ ಮುರುಳ್ಯರವರ ಶಿಷ್ಯರಾದ ಇವರು ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಶಮಿತಾ ಪಿ ರೈ ದಂಪತಿಗಳ ಮಕ್ಕಳು.

About The Author

Related posts

Leave a Reply

Your email address will not be published. Required fields are marked *