ಎಣ್ಮೂರು: ಶ್ರೀದೇವಿಪ್ರಸಾದ್ ಜ್ಯುವೆಲ್ಲರಿ ವರ್ಕ್ಸ್ ಶಾಪ್ ಶುಭಾರಂಭ

ನಿಂತಿಕಲ್ಲು ಎಣ್ಮೂರು ಹಾಜಿ ಕಾಂಪ್ಲೆಕ್ಸ್‌ನಲ್ಲಿ ಶ್ರೀದೇವಿ ಜ್ಯವೆಲ್ಲರಿ ವರ್ಕ್ಸ್ ಶಾಪ್ ಕಲ್ಪಡ ಚಿದಾನಂದ ಉಪಾಧ್ಯಾರವರ ಪೂಜಾ ವಿಧಿವಿಧಾನದೊಂದಿಗೆ ಡಿ. ೭ರಂದು ಶುಭಾರಂಭಗೊಂಡಿದೆ.

ಇಲ್ಲಿ ದೇವರಿಗೆ ಸಂಬಂಧಿಸಿದ ಕಿರೀಟ, ಪ್ರಭಾವಳಿ, ತಲೆಪಟ್ಟಿ, ಕಲ್ಲುರ್ಟಿ ದೈವದ ಮೂರ್ತಿ, ದೈವಗಳ ಮುಖವಾಡ, ಎದೆ ಪದಕ ಇನ್ನಿತರ ಆಭರಣಗಳನ್ನು ತಯಾರಿಸಿ ಬೆಳ್ಳಿ ಮತ್ತು ಫ್ಯಾನ್ಸಿ ಆಭರಣಗಳಿಗೆ ಗೋಲ್ಡ್ ಕವರಿಂಗ್ ಮಾಡಿಕೊಡಲಾಗುವುದೆಂದು ಮಾಲಕ ತುಳಸಿ ಆಚಾರ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಯುರ್‌ಗ್ರಾಮ ಪ್ರತಿಷ್ಠಾನದ ಸಂಚಾಲಕ ರಾಜಶೇಖರನ್ ಕೆ.ಕೆ., ಕಟ್ಟಡ ಮಾಲಕ ಅಬ್ದುಲ್‌ರಹಿಮಾನ್, ಭವಿಷ್ಯ ಹೋಟೆಲ್ ಮಾಲಕರಾದ ಶ್ರೀಮತಿ ಪುಷ್ಪಲತಾ ಜಯರಾಮ ರೈ, ವಿವೇಕ್ ಡೆಕೋರೇಟರ‍್ಸ್ ಮಾಲಕ ರಮೇಶ್ ಆಚಾರ್ಯ, ಪದ್ಮಿನಿ ಆಚಾರ್ಯ, ಪುಟ್ಟಣ್ಣ ಆಚಾರ್ಯ ಪೂದೆ, ಸತೀಶ್ ಆಚಾರ್ಯ ಪೂದೆ, ದಿವಾಕರ ನಾಗನಕಜೆ, ಭಾಸ್ಕರ ಬಲ್ಯಾಯ, ಶ್ರೀ ದುರ್ಗಾ ಸ್ಟೋರ‍್ಸ್ ಮಾಲಕ ವೆಂಕಪ್ಪ ಸಾಲಿಯಾನ್, ಶ್ರೀಮತಿ ದಿವ್ಯ ತುಳಸಿ ಆಚಾರ್ಯ, ಶ್ರೀಮತಿ ಮೋಹಿನಿ ನೀಲಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.