ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ ಅವರ ಕಛೇರಿ ಶುಭಾರಂಭ

ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ ಅವರ ನೂತನ ಕಛೇರಿ ಡಿ.೭ ರಂದು ಭೂ ಅಭಿವೃದ್ಧಿ ಬ್ಯಾಂಕ್ ಸುಳ್ಯ ಇದರ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ಕಛೇರಿಯನ್ನು ಮಂಗಳೂರಿನ ಹಿರಿಯ ವಕೀಲ ಎಸ್.ಪಿ. ಚಂಗಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವೈದ್ಯರು ಶಾರೀರಿಕ ಸ್ವಾಸ್ಥ್ಯ ಕಾಪಾಡುತ್ತಾರೆ. ಅದರಂತೆ ನ್ಯಾಯವಾದಿಗಳು ಮಾನಸಿಕವಾಗಿ ಸ್ವಾಸ್ಥ್ಯ ಹೊಂದುವಂತಹ ಕೆಲಸ ಮಾಡುತ್ತಾರೆ. ನ್ಯಾಯವಾದಿಗಳ ಬಳಿ ಆರೋಪಿಗಳು ಬರುತ್ತಾರೆ, ಅವರನ್ನು ರಕ್ಷಿಸುವ ಜವಾಬ್ದಾರಿ ನ್ಯಾಯವಾದಿಗಳಿಗಿರುತ್ತದೆ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಲೋಕಯ್ಯ ಗೌಡ ಕುಂಞೇಟಿ , ಜಯ ಲೋಕಯ್ಯ, ರಾಮ್ ಭಟ್, ಎಂ.ಪಿ ಉಮೇಶ್, ನ್ಯಾಯವಾದಿ ವೆಂಕಪ್ಪ ಗೌಡ, ಭಾಸ್ಕರ ರಾವ್, ಸದಾನಂದ ವೈ ಪಿ, ಪ್ರಕಾಶ್ ವೈ ಪಿ, ಡಾಲಿ ವೈ.ಪಿ, ಜಿತೇಂದ್ರ ನಿಡ್ಯಮಲೆ, ಪುರುಷೋತ್ತಮ ಕುಂಞ್ಞೇಟಿ, ಪವನ್ ಕುಂಞ್ಞೇಟಿ, ಜಯಕುಮಾರ್ ದೇವ, ಸಮಂತ್ ದೇವ, ಅಶೋಕ್ ಮಿತ್ತೋಡಿ, ಕುಮುದಾಕ್ಷ ಜಾಲುಮನೆ, ಚಂದ್ರಶೇಖರ ನಿಡ್ಲೆ, ಶೈಮಾ ಜಿತೇಂದ್ರ ನಿಡ್ಯಮಲೆ, ಪ್ರವೀಣ್ ಮುಂಡೋಡಿ, ಭೂ ಅಭಿವೃದ್ಧಿ ಬ್ಯಾಂಕ್ ನ ಸಿಬಂಧಿಗಳು ಬಂಧುಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *