ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್‌ನಲ್ಲಿ ವಾರ್ಷಿಕೋತ್ಸವ

ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ೧೫ನೇ ವರ್ಷದ ವಾರ್ಷಿಕೋತ್ಸವವು ಡಿ. ೫ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿಯ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಿಸ್ಟರ್ ಪಿಯುಷ ವಹಿಸಿದ್ದರು.


 ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಅಂಗಾರ, ಗುತ್ತಿಗಾರು ಸೈಂಟ್ ಮೇರೀಸ್ ಚರ್ಚ್‌ನ ಥೋಮಸ್ ಪನಜಿಕಲ್ ಆಗಮಿಸಿದ್ದರು. ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗ್ರಾ.ಪಂ. ಸದಸ್ಯ ಯಮಿತಾ ಪೂರ್ಣಚಂದ್ರ, ಮುಸ್ತಫಾ ಮೀರಕುಂಞಿ ನಡುಗಲ್ಲು, ಪಿಟಿಎ ಅಧ್ಯಕ್ಷ ಕೇಶವ ಹೊಸೋಳಿಕೆ, ಮುಖ್ಯ ಶಿಕ್ಷಕಿ ರೋಶಿನಾ ಸಿ.ಎಂ.ಸಿ. ವಿದ್ಯಾರ್ಥಿ ನಾಯಕಿ ಕು. ಸ್ವಾತಿಕಾ ಪಿ.ವೈ. ಉಪಸ್ಥಿತರಿದ್ದರು. ಸಿಸ್ಟರ್ ಶಾಲಿನಿ ಸ್ವಾಗತಿಸಿ, ಶ್ರೀಮತಿ ವಾಣಿ ಎಸ್. ವಂದಿಸಿದರು. ಶ್ರೀಮತಿ ರೂಪಶ್ರೀ, ಕು.ಮನಿಷಾ ಕಾರ್ಯಕ್ರಮ ನಿರೂಪಿಸಿದರು.

 

 

About The Author

Related posts

Leave a Reply

Your email address will not be published. Required fields are marked *