ಕದಿಕಡ್ಕ: ಸ್ಕೂಟಿ ಸ್ಕಿಡ್ ಆಗಿ ಪಲ್ಟಿ ಸವಾರರಿಗೆ ಗಾಯ

ಸ್ಕೂಟಿಯೊಂದು ಸ್ಕಿಡ್ ಆಗಿ ಪಲ್ಟಿಯಾದ ಘಟನೆ ಡಿ.೭ರಂದು ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಸಂಭವಿಸಿದೆ.

ಪೆರ್ಲಂಪಾಡಿಯ ಗಣೇಶ್ ಹಾಗೂ ಸುಳ್ಯದ ಹಳೆಗೇಟಿನ ರೀತು ಅವರು ಜಾಲ್ಸೂರು ಕಡೆಯಿಂದ ಪುತ್ತೂರಿನ ಕಡೆ ಹೋಗುತ್ತಿದ್ದ ವೇಳೆ ಕದಿಕಡ್ಕ ಎಂಬಲ್ಲಿ ತಿರುವಿನಲ್ಲಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಯಿತು.

 ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ಗಣೇಶ್ ಅವರ ತಲೆ ಕೈ ಹಾಗೂ ಕಾಲಿಗೆ ಗಂಭೀರವಾಗಿ ಗಾಯಗೊಂಡರು. ಹಿಂಬದಿ ಸವಾರ ರೀತು ಅವರು ಸಣ್ಣಪುಟ್ಟ ಗಾಯಗೊಂಡರು.

 ಈ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಮಂಡೆಕೋಲಿನ ಮಾವಜಿ ಮುದ್ದಪ್ಪ ಗೌಡರು ಕಾರು ನಿಲ್ಲಿಸಿ ಗಾಯಾಳುಗಳನ್ನು ತಮ್ಮ ಕಾರಿನಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *