HomePage_Banner
HomePage_Banner
Breaking News

ಬ್ರಹ್ಮಕಲಶಗೊಂಡ ತೊಡಿಕಾನದಲ್ಲಿ ಇನ್ನು ಒಂದು ತಿಂಗಳು ಧನುಪೂಜೆ ಸಂಭ್ರಮ

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವರ್ಷದ ಹಿಂದೆಷ್ಟೇ ಬ್ರಹ್ಮಕಲಶ ನಡೆದಿದ್ದು, ಅದರ ಬಳಿಕದ ಪ್ರಥಮ ವರ್ಷದ ಧನುಪೂಜೆಗೆ ತೊಡಿಕಾನ ದೇವಸ್ಥಾನ ಸಿದ್ಧಗೊಂಡಿದೆ. ತೊಡಿಕಾನ ದೇವಸ್ಥಾನದಲ್ಲಿ ಕಳೆದ ೬ವರ್ಷಗಳಿಂದ ಧನುಪೂಜೆ ಪುನರ್ ಆರಂಭಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ೨೦೧೭ರ ಮಾರ್ಚ್ ತಿಂಗಳಿನಲ್ಲಿ ದೇವಸ್ಥಾನದ ಬ್ರಹ್ಮಕಲಶ ಅದ್ಧೂರಿಯಾಗಿ ಮುಕ್ತಾಯಗೊಂಡಿದ್ದು, ಬಳಿಕ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಬ್ರಹ್ಮಕಲಶ ಬಳಿಕ ನಡೆಯುವ ಪ್ರಥಮ ಧನುಪೂಜೆ ಈ ಬಾರಿಯದ್ದಾಗಿದ್ದು, ಹೆಚ್ಚಿನ ಸಂಖ್ಯೆಯ ಪೂಜೆ ಹಾಗೂ ಭಕ್ತರನ್ನು ನಿರೀಕ್ಷಿಸಲಾಗಿದೆ.
ಡಿಸೆಂಬರ್ ತಿಂಗಳ ೧೬ರಿಂದ ಧನುಪೂಜೆ ಆರಂಭಗೊಳ್ಳಲಿದ್ದು,೨೦೧೮ರ ಜನವರಿ ೧೪ರವರೆಗೆ ಧನುಪೂಜೆ ನಡೆಯ ಲಿದೆ. ಧನುಪೂಜೆ ಮಾಡಿಸುವವರು ಒಂದು ಪೂಜೆಗೆ ೫೦೦ರೂ ಕೊಟ್ಟು ತಮಗೆ ಬೇಕಾದ ದಿವಸವನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು. ಪೂಜೆ ಯಲ್ಲಿ ಭಾಗಿಯಾಗುವವರು ಕುಟುಂಬ ಸಮೇತರಾಗಿ ಶುಚಿರ್ಭೂತರಾಗಿ ಮುಂಜಾನೆ ೪.೪೫ಕ್ಕೆ ಹಾಜರಿರಬೇಕು. ಧನುಪೂಜೆ ೫ಗಂಟೆಗೆ ಆರಂಭಗೊಳ್ಳಲಿದೆ. ದೂರದಿಂದ ಬರುವ ಭಕ್ತರು ಅನುಕೂಲ ತೆಗಾಗಿ ೪ಗಂಟೆಗೆ ಸುಳ್ಯದಿಂದ ಅವಿನಾಶ್ ಬಸ್ ವ್ಯವಸ್ಥೆಯಿದೆ.
ದೇವಸ್ಥಾನದಲ್ಲಿ ಈ ಹಿಂದೆ ಧನು ಪೂಜೆ ಮಾಡಿಸಿದವರಿಗೆ ಹಾಗೂ ವಿಶೇಷ ಸಹಕಾರ ನೀಡಿದವರಿಗೆ ತೊಡಿಕಾನ, ಅರಂತೋಡು, ಸಂಪಾಜೆ, ಆಲೆಟ್ಟಿ ಗ್ರಾಮಸ್ಥರಿಗೆ ಈಗಾಗಲೇ ಆಮಂತ್ರಣ ಪತ್ರಿಕೆ ನೀಡಿ ಧನು ಪೂಜೆಯ ಮಹತ್ವ ಹಾಗೂ ಕ್ಷೇತ್ರದ ಇತಿಹಾಸವನ್ನು ದೇವಸ್ಥಾನದ ಅಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳು ನೀಡುತ್ತಿದ್ದು, ಭಕ್ತರಿಗೆ ಕ್ಷೇತ್ರದ ಮೇಲೆ ವಿಶೇಷ ಗೌರವ ಬರಲು ಕಾರಣವಾಗಿದೆ. ಬಂದಂತಹ ಎಲ್ಲಾ ಭಕ್ತರನ್ನು ಪ್ರೀತಿಯಿಂದ ಸ್ವಾಗ ತಿಸಿ ಸಂಪೂರ್ಣ ಮಾಹಿತಿಯನ್ನು ಸಿಬ್ಬಂದಿ ಗಳು ನೀಡುತ್ತಿದ್ದಾರೆ. ಯಾವುದೇ ಸಮಯದಲ್ಲೂ ಕಛೇರಿಗೆ ಪೋನ್ ಮಾಡಿ, ಮುಂಚಿತವಾಗಿ ದಿನ ನಿಗದಿ ಮಾಡಲು ಅವಕಾಶವಿದೆ. ಧನುಪೂಜೆ ಬಳಿಕ ಆಗಮಿಸಿದ ಎಲ್ಲಾ ಭಕ್ತರಿಗೆ ಉಪಹಾರದ ವ್ಯವಸ್ಥೆ ಪ್ರತಿ ವರ್ಷದಂತೆ ಈ ಬಾರಿಯೂ ಇರಲಿದೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.